• Home
  • »
  • News
  • »
  • national-international
  • »
  • ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​​ನ್ಯೂಸ್​; ಹೊಸ ವರ್ಷಕ್ಕೆ ಡಿಎ ಹೆಚ್ಚಳ ಸಾಧ್ಯತೆ

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​​ನ್ಯೂಸ್​; ಹೊಸ ವರ್ಷಕ್ಕೆ ಡಿಎ ಹೆಚ್ಚಳ ಸಾಧ್ಯತೆ

ಒಂದು ವೇಳೆ ಸರ್ಕಾರ ಮತ್ತೆ ತುಟ್ಟಿಭತ್ಯೆ (DA) ಹೆಚ್ಚಳ ಮಾಡಿದರೆ, ಹೊಸ ವರ್ಷದ ಆರಂಭದಿಂದ ಎಲ್ಲಾ ಸರ್ಕಾರಿ ನೌಕರರು ತಮ್ಮ ಸಂಬಳದಲ್ಲಿ ಭಾರಿ ಏರಿಕೆ ಕಾಣಲಿದ್ದಾರೆ

  • Share this:

    ಹೊಸ ವರ್ಷದ ಆಗಮನದ ವೇಳೆಯೇ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಬಂಫರ್​ ಉಡುಗೊರೆ ನೀಡಲು ಸರ್ಕಾರ ಮುಂದಾಗಿದೆ. 7ನೇ ವೇತನ ಆಯೋಗದ ಅಡಿ ಮತ್ತೆ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ (Dearness Allowance )ಹೆಚ್ಚಿಸಲು ಮುಂದಾಗಿದೆ ಎನ್ನಲಾಗಿದೆ. ಈ ಬಾರಿ ಕೇಂದ್ರ ಸರ್ಕಾರದ ನೌಕರರು (Central Government Employees) ತಮ್ಮ ತುಟ್ಟಿಭತ್ಯೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಂದು ವೇಳೆ ಸರ್ಕಾರ ಮತ್ತೆ ತುಟ್ಟಿಭತ್ಯೆ (DA) ಹೆಚ್ಚಳ ಮಾಡಿದರೆ, ಹೊಸ ವರ್ಷದ ಆರಂಭದಿಂದ ಎಲ್ಲಾ ಸರ್ಕಾರಿ ನೌಕರರು ತಮ್ಮ ಸಂಬಳದಲ್ಲಿ ಭಾರಿ ಏರಿಕೆ ಕಾಣಲಿದ್ದಾರೆ.


    ವರ್ಷದಲ್ಲಿ ಎರಡು ಬಾರಿ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಸರ್ಕಾರ ಹೆಚ್ಚಿಸುತ್ತದೆ. ಜನವರಿ ಮತ್ತು ಜುಲೈನಲ್ಲಿ ಈ ತುಟ್ಟಿ ಭತ್ಯೆ ಏರಿಕೆ ಕಾಣುತ್ತದೆ.  ಇನ್ನು ಇಂಡಿಯಾ ಟುಡೇ ಉಲ್ಲೇಖಿಸಿ ವರದಿ ಮಾಡಿರುವ ಹಿಂದಿ ದೈನಿಕ ಪ್ರಬಾತ್ ಖಬರ್, ಕೇಂದ್ರ ಸರ್ಕಾರಿ ನೌಕರರ ವೇತನವು 20,000 ರೂ.ವರೆಗೆ ಹೆಚ್ಚಾಗಲಿದೆ ಎಂದು ತಿಳಿಸಿದೆ.


    ನೆರೆಯ ದೇಶಗಳಲ್ಲೂ ಇದೆ ತುಟ್ಟಿಭತ್ಯೆ ಪದ್ದತಿ


    ತುಟ್ಟಿಭತ್ಯೆ ಅಥವಾ ಡಿಎ ಎನ್ನುವುದು ಜೀವನ ವೆಚ್ಚ ಹೊಂದಾಣಿಕೆ ಭತ್ಯೆಯಾಗಿದ್ದು, ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಸರ್ಕಾರವು ವೇತನದೊಂದಿಗೆ ನೀಡುತ್ತದೆ. ಸಾರ್ವಜನಿಕ ವಲಯದ ಉದ್ಯೋಗಿಗಳ ಒಟ್ಟು ಸಂಬಳದ ದೊಡ್ಡ ಭಾಗವನ್ನು ಡಿಎ ಹೊಂದಿದೆ. ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಮುಖ್ಯವಾಗಿ ಉದ್ಯೋಗಿಗಳಿಗೆ ಕಾಲ ಕಾಲಕ್ಕೆ ಸರ್ಕಾರ ಡಿಎ ನೀಡಲಾಗುತ್ತದೆ. ಡಿಎ ಭಾರತದಲ್ಲಿ ಮಾತ್ರವಲ್ಲ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲೂ ಈ ರೀತಿ ಸರ್ಕಾರಿ ನೌಕರರಿಗೆ ಡಿಎ ನೀಡುವ ಪಾವತಿಸುವ ಪದ್ಧತಿ ಇದೆ.


    ಜುಲೈ- ಅಕ್ಟೋಬರ್​ನಲ್ಲಿ ಡಿಎ ಹೆಚ್ಚಿಸಿದ್ದ ಸರ್ಕಾರ


    ಸದ್ಯ ಕೇಂದ್ರ ಸರ್ಕಾರಿ ನೌಕರರಿಗೆ ಶೇ 31ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭತ್ಯೆಯಲ್ಲಿ ತಿಂಗಳ ಅವಧಿಯ ಸರ್ಕಾರ ಡಿಎ ಹೆಚ್ಚಳಕ್ಕೆ ತಡೆ ನೋಡಿತ್ತು. 2021 ಜುಲೈ ಮತ್ತು ಎರಡು ಬಾರಿ ಡಿಎ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತು. ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಕೇಂದ್ರ ಸರ್ಕಾರವು ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರಿಂದ ಬರಬೇಕಿದ್ದ ಮೂರು ಹೆಚ್ಚುವರಿ ಡಿಎ ಮತ್ತು ಡಿಆರ್ ಕಂತುಗಳನ್ನು ಸ್ಥಗಿತಗೊಳಿಸಿತು. ಈ ಹೆಚ್ಚಳದ ಸಮಯದಲ್ಲಿ, ಸಾಂಕ್ರಾಮಿಕ ಪರಿಸ್ಥಿತಿಯನ್ನು ನೆಪದಲ್ಲಿ ಸರ್ಕಾರ ಅವರಿಗೆ ಬಾಕಿಯನ್ನು ಕೂಡ ಪಾವತಿಸಲಿಲ್ಲ.


    ಇದನ್ನು ಓದಿ: ಗುಜರಾತ್​ನಲ್ಲಿ ಎರಡು ಒಮೈಕ್ರಾನ್​ ಸೋಂಕಿತರು ಪತ್ತೆ; ದೇಶದಲ್ಲಿ ಒಟ್ಟು 25 ಪ್ರಕರಣ ದಾಖಲು


    ಈ ನಿಟ್ಟಿನಲ್ಲಿ, ಸರ್ಕಾರಿ ನೌಕರರ ಸಂಭವನೀಯ ಹೆಚ್ಚಳದ ಬಗ್ಗೆ ಸರ್ಕಾರವು ಯಾವುದೇ ಹೇಳಿಕೆಯನ್ನು ಸ್ಪಷ್ಟವಾಗಿ ನೀಡಿಲ್ಲ. ಈ ಡಿಎ ಹೆಚ್ಚಳದ ಬಗ್ಗೆ ಕೇಂದ್ರದ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಜೊತೆಗೆ ಅದನ್ನು ಯಾವಾಗ ಜಾರಿಗೆ ತರಲಾಗುವುದು ಎಂದು ಘೋಷಿಸಿಲ್ಲ.


    ಇದನ್ನು ಓದಿ: ಸಿಡಿಎಸ್​​ ಬಿಪಿನ್​ ರಾವತ್​ಗೆ ಅಂತಿಮ ಗೌರವ ಸಲ್ಲಿಸಿದ ಪ್ರಧಾನಿ ಮೋದಿ


    ಅಕ್ಟೋಬರ್‌ನಲ್ಲಿ ಕೇಂದ್ರ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗುವಂತೆ ತುಟ್ಟಿಭತ್ಯೆಯನ್ನು ಶೇಕಡಾ 3 ರಿಂದ 31 ರಷ್ಟು ಹೆಚ್ಚಿಸಿ ಸಂಪುಟದಲ್ಲಿ ಅನುಮೋದನೆ ನೀಡಿತು. ಕೋವಿಡ್ ಹಿನ್ನಲೆ ತಡೆ ನೀಡಿದದ ತುಟ್ಟಿ ಭತ್ಯೆ ಹೆಚ್ಚಿಸಿದ್ದ ಸರ್ಕಾರ ಜುಲೈನಲ್ಲಿ ಭತ್ಯೆಯ ದರವನ್ನು ಶೇಕಡಾ 17 ರಿಂದ ಶೇಕಡಾ 28 ಕ್ಕೆ ಹೆಚ್ಚಿಸಿತು.


    ಫಿಟ್​ಮೆಂಟ್​ ಪ್ಯಾಕ್ಟರ್​ ಹೆಚ್ಚಳ
    ಡಿಎ ಹೆಚ್ಚಳದ ಹೊರತಾಗಿ ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಚರ್ಚೆ ನಡೆಸುತ್ತಿದೆ. ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ ಎಲ್ಲಾ ಸಾರ್ವಜನಿಕ ವಲಯದ ನೌಕರರ ಸಂಬಳ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರಿ ನೌಕರರಿಗೆ 2016ರಲ್ಲಿ ಕೊನೆಯ ಬಾರಿಗೆ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿತ್ತು. ಆ ಸಮಯದಲ್ಲಿ, ನೌಕರರ ಮೂಲ ವೇತನವನ್ನು 6,000 ರೂ.ಗಳಿಂದ 18,000 ರೂ.ಗೆ ಹೆಚ್ಚಿಸಲಾಯಿತು. ಆರು ವರ್ಷಗಳ ಅಂತರದ ನಂತರ ಈಗ ಸರ್ಕಾರವು ನೌಕರರ ವೇತನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿವೆ. ವರದಿಗಳ ಪ್ರಕಾರ, ಫಿಟ್‌ಮೆಂಟ್ ಅಂಶವನ್ನು ಶೇಕಡಾ 3.68 ರಷ್ಟು ಹೆಚ್ಚಿಸಲಾಗುವುದು. ಅಂದರೆ ವೇತನದಲ್ಲಿ 8,000 ರೂ.ಗಳ ಏರಿಕೆಯಾಗಲಿದ್ದು, ನಂತರ ಸಾರ್ವಜನಿಕ ವಲಯದ ನೌಕರರಿಗೆ ಮೂಲ ವೇತನ 26,000 ರೂ.ಗೆ ಏರಿಕೆಯಾಗಲಿದೆ

    Published by:Seema R
    First published: