Toll Plaza: ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳೇ ಇರಲ್ವಂತೆ!

ನರೇಂದ್ರ ಮೋದಿ ಅವರ ಸರ್ಕಾರವು ಈ ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಯೋಚಿಸುತ್ತಿದೆ ಅಂತೆ. ಈ ಟೋಲ್ ಪ್ಲಾಜಾಗಳನ್ನು ಕ್ಯಾಮೆರಾಗಳೊಂದಿಗೆ ಬದಲಾಯಿಸುವ ಯೋಚನೆ ಇದೆಯಂತೆ. ಇನ್ನೂ ವಾಹನದ ನಂಬರ್ ಪ್ಲೇಟ್ ಗಳ ಫೋಟೋಗಳನ್ನು ದಾಖಲಿಸುವ ಮತ್ತು ಓದುವ ಕೆಲಸವನ್ನು ಈ ಕ್ಯಾಮೆರಾಗಳು ಮಾಡಬಹುದು ಅಂತ ನೀವು ಊಹಿಸುತ್ತಿದ್ದರೆ, ಇಲ್ಲಿದೆ ನೋಡಿ ಅದಕ್ಕೆ ಉತ್ತರ.

ಟೋಲ್ ಪ್ಲಾಜಾ

ಟೋಲ್ ಪ್ಲಾಜಾ

  • Share this:
ಸಾಮಾನ್ಯವಾಗಿ ನಾವೆಲ್ಲಾ ಈ ರಾಜ್ಯ ಹೆದ್ದಾರಿ (State Highway) ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಈ ಟೋಲ್ ಪ್ಲಾಜಾಗಳನ್ನು (Toll Plaza) ನೋಡುತ್ತೇವೆ. ಅಲ್ಲಿರುವ ವಾಹನಗಳ ಉದ್ದನೆಯ ಸಾಲುಗಳು, ಫಾಸ್ಟ್‌ಟ್ಯಾಗ್ ಬಳಸಿ ಸ್ಕ್ಯಾನ್ ಮಾಡಿಕೊಂಡು ಹೋಗುತ್ತಿರುವ ವಾಹನಗಳ ಸಾಲು ಮತ್ತು ಕೆಲವರು ನಗದು ಹಣ ನೀಡಿ ಟೋಲ್ ಪ್ಲಾಜಾವನ್ನು ದಾಟುವುದನ್ನು ನಾವು ನೋಡಿರುತ್ತೇವೆ. ಅನೇಕ ಬಾರಿ ಈ ಟೋಲ್ ಪ್ಲಾಜಾಗಳಿಂದ ವಾಹನ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ತುಂಬಾನೇ ಕಿರಿಕಿರಿ ಆಗುವುದುಂಟು. ಹೀಗೆ ನೀವು ರಾಷ್ಟ್ರೀಯ ಹೆದ್ದಾರಿಯ (National Highway) ಮೂಲಕ ಹಾದು ಹೋಗುತ್ತಿದ್ದರೆ, ಭವಿಷ್ಯದಲ್ಲಿ ಈ ಟೋಲ್ ಪ್ಲಾಜಾಗಳಲ್ಲಿ ಇಷ್ಟೊಂದು ಕಿರಿಕಿರಿ ಅಗಲಿಕ್ಕಿಲ್ಲ ಅಂತ ನಾವು ಅಂದು ಕೊಳ್ಳುತ್ತೇವೆ.

ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಯೋಚನೆ
ಏಕೆಂದರೆ ನರೇಂದ್ರ ಮೋದಿ ಅವರ ಸರ್ಕಾರವು ಈ ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಯೋಚಿಸುತ್ತಿದೆ ಅಂತೆ. ಈ ಟೋಲ್ ಪ್ಲಾಜಾಗಳನ್ನು ಕ್ಯಾಮೆರಾಗಳೊಂದಿಗೆ ಬದಲಾಯಿಸುವ ಯೋಚನೆ ಇದೆಯಂತೆ. ಇನ್ನೂ ವಾಹನದ ನಂಬರ್ ಪ್ಲೇಟ್ ಗಳ ಫೋಟೋಗಳನ್ನು ದಾಖಲಿಸುವ ಮತ್ತು ಓದುವ ಕೆಲಸವನ್ನು ಈ ಕ್ಯಾಮೆರಾಗಳು ಮಾಡಬಹುದು ಅಂತ ನೀವು ಊಹಿಸುತ್ತಿದ್ದರೆ, ಇಲ್ಲಿದೆ ನೋಡಿ ಅದಕ್ಕೆ ಉತ್ತರ.

ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳ ಅಳವಡಿಕೆ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಯೋಜನೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಹಾಕುವುದು ಮತ್ತು ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ (ಎಎನ್‌ಪಿಆರ್) ಕ್ಯಾಮೆರಾಗಳನ್ನು ಅವಲಂಬಿಸುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರತಿಷ್ಠಿತ ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Finland Sanna Marin: ನನಗೂ ಖುಷಿಪಡುವ ಹಕ್ಕಿದೆ, ಕರ್ತವ್ಯ ಎಂದಿಗೂ ಕಡೆಗಣಿಸಿಲ್ಲ: ಕಣ್ಣೀರಿಟ್ಟ ಪ್ರಧಾನಿ!

ಎಲ್ಲಾ ಕಾರುಗಳು ಕಂಪನಿ ಅಳವಡಿಸಿದ ನಂಬರ್ ಪ್ಲೇಟ್ ಗಳನ್ನು ಹೊಂದಿರಬೇಕು ಎಂದು ಸರ್ಕಾರವು 2019 ರಲ್ಲಿ ನಿಯಮವನ್ನು ಮಾಡಿದೆ ಎಂದು ಗಡ್ಕರಿ ಹೇಳಿದರು. "ಈಗ, ಟೋಲ್ ಪ್ಲಾಜಾಗಳನ್ನು ತೆಗೆದು ಹಾಕುವುದು ಮತ್ತು ಕ್ಯಾಮೆರಾಗಳನ್ನು ಹಾಕುವುದು ಯೋಜನೆಯಾಗಿದೆ, ಅದು ಈ ನಂಬರ್ ಪ್ಲೇಟ್ ಗಳನ್ನು ಓದುತ್ತದೆ ಮತ್ತು ನಿಮ್ಮ ವಾಹನ ಈ ಟೋಲ್ ಗಳನ್ನು ಹಾದು ಹೋಗುವಾಗ ಆ ಹಣ ನಿಮ್ಮ ಖಾತೆಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಸರ್ಕಾರದ ಈ ಹೊಸ ಯೋಜನೆಗೆ ಕೆಲವು ಮುಖ್ಯ ಕಾರಣಗಳು
ಟೋಲ್ ಪ್ಲಾಜಾಗಳನ್ನು ತೆಗೆದು ಹಾಕಲು ಮತ್ತು ಅದನ್ನು ಎಎನ್‌ಪಿಆರ್ ಕ್ಯಾಮೆರಾಗಳೊಂದಿಗೆ ಬದಲಾಯಿಸಲು ಸರ್ಕಾರದ ಯೋಜನೆ ನಿಖರವಾಗಿ ಏನು ಅಂತ ನೀವು ಕೇಳಬಹುದು. ಅದನ್ನು ವಿವರಿಸುವ ಐದು ಅಂಶಗಳು ಇಲ್ಲಿವೆ ನೋಡಿ.

ಇದನ್ನೂ ಓದಿ:  Karnataka Crime Bill: ಆರೋಪಿ ಇಲ್ಲದಿದ್ದರೂ ನಡೆಯುತ್ತಾ ವಿಚಾರಣೆ? ಕರ್ನಾಟಕ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

  1. ವರದಿಯ ಪ್ರಕಾರ, ಕ್ಯಾಮೆರಾಗಳು ವಾಹನದ ನಂಬರ್ ಪ್ಲೇಟ್ ಗಳನ್ನು ಓದುತ್ತವೆ ಮತ್ತು ವಾಹನ ಮಾಲೀಕರ ಬ್ಯಾಂಕ್ ಖಾತೆಗಳಿಂದ ಸ್ವಯಂಚಾಲಿತವಾಗಿ ಟೋಲ್ ಶುಲ್ಕವನ್ನು ಕಡಿತಗೊಳಿಸುತ್ತವೆ. ಟೋಲ್ ರಸ್ತೆಗಳ ಪ್ರವೇಶಗಳು ಮತ್ತು ನಿರ್ಗಮನ ದ್ವಾರಗಳು ಈ ಕ್ಯಾಮೆರಾಗಳನ್ನು ಹೊಂದಿರುತ್ತವೆ.

  2. ಎಲ್ಲಾ ನಂಬರ್ ಪ್ಲೇಟ್ ಗಳನ್ನು ಈ ಕ್ಯಾಮೆರಾಗಳಿಂದ ಓದಬಹುದೇ ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ. ಉತ್ತರವೆಂದರೆ 2019 ರ ನಂತರ ಬಂದ ನಂಬರ್ ಪ್ಲೇಟ್ ಗಳನ್ನು ಮಾತ್ರ ಈ ಕ್ಯಾಮೆರಾಗಳು ನೋಂದಾಯಿಸುತ್ತವೆ.

  3. ಗಡ್ಕರಿ ಅವರು ಉಲ್ಲೇಖಿಸಿದಂತೆ, ಕೇಂದ್ರವು ವಾಹನಗಳು ಕಂಪನಿ ಅಳವಡಿಸಿದ ನಂಬರ್ ಪ್ಲೇಟ್ ಗಳನ್ನು ಹೊಂದುವುದನ್ನು ಕಡ್ಡಾಯಗೊಳಿಸುವ ನಿಯಮವನ್ನು ರೂಪಿಸಿತ್ತು.

  4. ಈ ಪ್ರಕ್ರಿಯೆಯಲ್ಲಿ ಹಳೆಯ ನಂಬರ್ ಪ್ಲೇಟ್ ಗಳನ್ನು ಬದಲಾಯಿಸುವ ಯೋಜನೆಯನ್ನು ತರಲು ಸರ್ಕಾರ ಯೋಜಿಸಿದೆ ಎಂದು ವರದಿ ತಿಳಿಸಿದೆ.

  5. ಈ ಯೋಜನೆಯ ಪೈಲಟ್ ರೂಪದಲ್ಲಿ ನಡೆಯುತ್ತಿದೆ ಮತ್ತು ಟೋಲ್ ಶುಲ್ಕವನ್ನು ಪಾವತಿಸದ ಮಾಲೀಕರಿಗೆ ದಂಡ ವಿಧಿಸಲು ಈ ಪರಿವರ್ತನೆಯನ್ನು ಸುಗಮಗೊಳಿಸಲು ಕಾನೂನು ತಿದ್ದುಪಡಿಗಳನ್ನು ಸಹ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

Published by:Ashwini Prabhu
First published: