Monkeypox: ಭಾರತದಲ್ಲಿ ಮಂಕಿಪಾಕ್ಸ್ ಟೆನ್ಶನ್, ಮಹಾಮಾರಿ ಕಂಟ್ರೋಲ್‌ಗೆ ಕೇಂದ್ರದಿಂದ ಗೈಡ್‌ಲೈನ್

ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ (Case) ಪತ್ತೆಯಾಗುತ್ತಿರುವಂತೆ ಕೇಂದ್ರ ಸರ್ಕಾರ (Central Government) ಕೂಡ ಅಲರ್ಟ್ (Alert) ಆಗಿದೆ. ಎಲ್ಲಾ ರಾಜ್ಯಗಳಿಗೆ (States) ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಇದರ ಬೆನ್ನಲ್ಲೇ ಮಂಕಿಪಾಕ್ಸ್ ನಿಯಂತ್ರಣ (Control) ಮಾಡುವ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ (Central Health Department) ಮಾರ್ಗಸೂಚಿ (Guideline) ಪ್ರಕಟಿಸಿದೆ.

ಮಂಕಿಪಾಕ್ಸ್ ರೋಗದ ಗ್ರಾಫಿಕ್ಸ್ ಚಿತ್ರ

ಮಂಕಿಪಾಕ್ಸ್ ರೋಗದ ಗ್ರಾಫಿಕ್ಸ್ ಚಿತ್ರ

  • Share this:
ನವದೆಹಲಿ: ವಿದೇಶಗಳನ್ನು ಕಾಡುತ್ತಿದ್ದ ಮಂಕಿಪಾಕ್ಸ್ ಕಾಯಿಲೆ (Monkeypox disease) ಇದೀಗ ಭಾರತಕ್ಕೂ (India) ಕಾಲಿಟ್ಟಿದೆ. ಈಗಾಗಲೇ ಕೇರಳದ (Kerala) ವ್ಯಕ್ತಿಯೊಬ್ಬನಲ್ಲಿ ಮಂಕಿಪಾಕ್ಸ್ ಸೋಂಕು (infection) ಇರುವುದು ದೃಢಪಟ್ಟಿದೆ. ಈ ವಿಚಾರ ಭಾರತೀಯರ (Indians) ಆತಂತಕ್ಕೆ (Tension) ಕಾರಣವಾಗಿದೆ. ಅಷ್ಟೇ ಅಲ್ಲ ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ (Case) ಪತ್ತೆಯಾಗುತ್ತಿರುವಂತೆ ಕೇಂದ್ರ ಸರ್ಕಾರ (Central Government) ಕೂಡ ಅಲರ್ಟ್ (Alert) ಆಗಿದೆ. ಎಲ್ಲಾ ರಾಜ್ಯಗಳಿಗೆ (States) ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಇದರ ಬೆನ್ನಲ್ಲೇ ಮಂಕಿಪಾಕ್ಸ್ ನಿಯಂತ್ರಣ (Control) ಮಾಡುವ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ (Central Health Department) ಮಾರ್ಗಸೂಚಿ (Guideline) ಪ್ರಕಟಿಸಿದೆ.

 ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

 ಕೇರಳದಲ್ಲಿ ಮಂಕಿಪಾಕ್ಸ್​ನ ಮೊದಲ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಗಳಿಗೆ ಪತ್ರ ಬರೆದಿದ್ದು, ರೋಗ ನಿಯಂತ್ರಣ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ.

ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?

ಮಂಕಿಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಭಾರತದ ಕೆಲವೆಡೆ ರೋಗದ ಲಕ್ಷಣಗಳು ಕಂಡುಬಂದಿದ್ದು ರಾಜ್ಯಗಳ ಗಡಿಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕು. ಕಾಯಿಲೆ ಗುಣಲಕ್ಷಣಗಳು ಕಂಡುಬಂದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಅಂತ ಕೇಂದ್ರ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: Explained: ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?

 ಸೋಂಕಿತರ ಬಗ್ಗೆ ನಿಗಾವಹಿಸಿ

ಸೋಂಕಿತರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ರೋಗದ ಮಾದರಿಯನ್ನು ಸಂಗ್ರಹಿಸಿ ತಕ್ಷಣ ಪರೀಕ್ಷೆಗೆ ಕಳುಹಿಸಬೇಕು. ಸೋಂಕಿತ ಪ್ರದೇಶಗಳಲ್ಲಿ ಸದಾ ನಿಗಾ ವಹಿಸಲು ಹಾಗೂ ಚಿಕಿತ್ಸೆ ವೇಳೆ ವೈದ್ಯರು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮತ್ತೊಂದು ಹೊಸ ಗೈಡ್‌ಲೈನ್ ಹೊರಡಿಸಿರುವ ಕೇಂದ್ರ ಸರ್ಕಾರ

ಅಂತಾರಾಷ್ಟ್ರೀಯ ಪ್ರಯಾಣಿಕರು ಅನಾರೋಗ್ಯವಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರಬಾರದು ಅಂತ ಸೂಚಿಸಿದೆ. ಇಲಿಗಳು, ಅಳಿಲುಗಳು, ಮಂಗಗಳು ಮತ್ತು ಸಸ್ತನಿಗಳು ಸೇರಿದಂತೆ ಸತ್ತ ಅಥವಾ ಜೀವಂತ ಕಾಡು ಪ್ರಾಣಿಗಳ ಸಂಪರ್ಕದಿಂದ ದೂರವಿರಬೇಕು ಅಂತ ತಿಳಿಸಿದೆ.

ಕಾಡುಪ್ರಾಣಿಗಳ ಮಾಂಸ ತಿನ್ನಬೇಡಿ

ಕಾಡು ಪ್ರಾಣಿಗಳ ಮಾಂಸವನ್ನು ತಿನ್ನಬಾರದು ಅಂತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆಫ್ರಿಕಾ ಸೇರಿದಂತೆ ಇತರ ದೇಶಗಳಲ್ಲಿ ಕಾಡು ಪ್ರಾಣಿಗಳಿಂದ ಉತ್ಪಾದಿಸಿದ ಉತ್ಪನ್ನಗಳಾದ ಕ್ರೀಮ್‌ ಲೋಷನ್‍ಗಳನ್ನು ಬಳಸಬಾರದು ಮತ್ತು ತರಬಾರದೆಂದು ಗೈಡ್‍ಲೈನ್‍ನಲ್ಲಿ ಸ್ಪಷ್ಟಪಡಿಸಲಾಗಿದೆ.

ನಿರ್ಲಕ್ಷ್ಯ ಮಾಡದೇ ಹತ್ತಿರದ ಆಸ್ಪತ್ರೆಗೆ ತೆರಳಿ

 ಜೊತೆಗೆ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಔಷಧಿ ಪಡೆಯಿರಿ ಮತ್ತು ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ. ಜೊತೆಗೆ ಸೋಂಕಿತರೊಂದಿಗೆ ಸಂಪರ್ಕಿಸಿದವರ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Monkeypox In Kerala: ಭಾರತದಲ್ಲೂ ಮಂಕಿಪಾಕ್ಸ್ ಪತ್ತೆ! ಕೇರಳದ ವ್ಯಕ್ತಿಗೆ ಡೆಡ್ಲಿ ವೈರಸ್​, ಕರ್ನಾಟಕಕ್ಕೂ ಆತಂಕ

ಕೇರಳದಲ್ಲಿ ಪತ್ತೆಯಾಗಿದ್ದ ಮಂಕಿಪಾಕ್ಸ್ ಕೇಸ್

ಯುಎಇಯಿಂದ ವಾಪಸ್ ಆಗಿದ್ದ ಕೇರಳದ 35 ವರ್ಷ ಪ್ರಾಯದ ವ್ಯಕ್ತಿಯೋರ್ವನಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಇತ್ತೀಚೆಗೆ ವಿದೇಶದಿಂದ ಹಿಂದಿರುಗಿದ ಕೇರಳದ ಕೊಲ್ಲಂನ ವ್ಯಕ್ತಿಯೊಬ್ಬನಿಗೆ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿತ್ತು. ಅತನನ್ನು ಆಸ್ಪತ್ರೆಗೆ ದಾಖಲಿಸಿ ಮಾದರಿಗಳನ್ನು ಪರೀಕ್ಷೆ ನಡೆಸಿದಾಗ ಬಳಿಕ ಸೋಂಕು ಇರುವುದು ಖಚಿತಗೊಂಡಿದೆ. ಇದೀಗ ಸೋಂಕು ಖಚಿತಗೊಂಡಂತೆ ಆ ವ್ಯಕ್ತಿಯನ್ನು ಸಂಪರ್ಕ ಹೊಂದಿದವರ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
Published by:Annappa Achari
First published: