ಪರಿಣಿತಿಗೆ ತಕ್ಕಂತೆ ಕೆಲಸ; ಸ್ವಂತ ವ್ಯವಹಾರಕ್ಕೆ ಉತ್ತೇಜನ: ಕಾರ್ಮಿಕರ ಉದ್ಧಾರಕ್ಕೆ ಹೊಸ ಆ್ಯಪ್

ಕಾರ್ಮಿಕರು ತಮ್ಮ ಪರಿಣಿತಿ ಆಧಾರದ ಮೇಲೆ ಕೆಲಸ ಪಡೆಯಬೇಕು ಹಾಗೂ ವೇತನದ ಕೊರತೆ ಎದುರಿಸಬಾರದೆನ್ನುವುದು; ಸ್ವಂತ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವೆನ್ನಲಾಗಿದೆ.

news18-kannada
Updated:June 10, 2020, 12:33 PM IST
ಪರಿಣಿತಿಗೆ ತಕ್ಕಂತೆ ಕೆಲಸ; ಸ್ವಂತ ವ್ಯವಹಾರಕ್ಕೆ ಉತ್ತೇಜನ: ಕಾರ್ಮಿಕರ ಉದ್ಧಾರಕ್ಕೆ ಹೊಸ ಆ್ಯಪ್
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಜೂನ್ 10): ಲಾಕ್​ಡೌನ್ ಘೋಷಣೆಯಾದಾಗಿನಿಂದಲೂ ವಲಸೆ ಕಾರ್ಮಿಕರನ್ನು ತೀರಾ ನಿರ್ಲಕ್ಷಿಸುತ್ತಾ ಬರಲಾಗುತ್ತಿದೆ ಎಂಬ ಟೀಕೆ ಕೇಂದ್ರ ಸರ್ಕಾರದ ವಿರುದ್ದ ಕೇಳಿಬರುತ್ತಲೇ ಇದೆ. ಇದೀಗ ಮೋದಿ ಸರ್ಕಾರ ವಲಸೆ ಕಾರ್ಮಿಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಹಾ ಯೋಜನೆಯೊಂದರ ಚಿಂತನೆಯಲ್ಲಿದೆ. ಈ ಯೋಜನೆ ಅನುಷ್ಠಾನಗೊಳ್ಳುವುದು ಬಹುತೇಕ ಖಚಿತವೆನ್ನಲಾಗಿದೆ. ಈ ಯೋಜನೆಯ ನೀಲನಕ್ಷೆ ನ್ಯೂಸ್18ಗೆ ಸಿಕ್ಕಿದ್ದು, ಇದು ವಲಸೆ ಕಾರ್ಮಿಕರ ಪುನಶ್ಚೇತನಕ್ಕೆ ಕೇಂದ್ರ ಪ್ರಯತ್ನಿಸುತ್ತಿರುವುದು ತಿಳಿದುಬಂದಿದೆ.

ಈ ಯೋಜನೆಯ ಕೆಂದ್ರ ಬಿಂದುವಾಗಿ ಒಂದು ಆ್ಯಪ್ ಆವಿಷ್ಕಾರವಾಗಿದೆ. ಪ್ರಧಾನಿ ಮೋದಿ ಸದ್ಯದಲ್ಲೇ ಈ ಆ್ಯಪ್ ಬಿಡುಗಡೆ ಮಾಡಲಿದ್ದಾರೆ. ಇದರಲ್ಲಿ ವಲಸೆ ಕಾರ್ಮಿಕರ ವಿದ್ಯಾರ್ಹತೆ, ವೃತ್ತಿ ಪರಿಣಿತಿ ಇತ್ಯಾದಿ ವಿವರಗಳೆಲ್ಲವನ್ನೂ ದಾಖಲಾಗಿರುತ್ತದೆ. ಈ ವಿವರವನ್ನು ಕಾರ್ಮಿಕ ಇಲಾಖೆಗೂ ವರ್ಗಾಯಿಸಲಾಗುತ್ತದೆ.

“ಕಾರ್ಮಿಕರು ತಮ್ಮ ವಿದ್ಯೆ, ಪ್ರತಿಭೆ ಅಥವಾ ಪರಿಣಿತಿ ಆಧಾರದ ಮೇಲೆ ಕೆಲಸಗಳನ್ನ ಪಡೆಯಬೇಕೆನ್ನುವುದು ಈ ಯೋಜನೆಯ ಮುಖ್ಯ ಉದ್ದೇಶ. ಹಾಗೆಯೇ, ಈ ಕಾರ್ಮಿಕರಿಗೆ ಕೈತುಂಬ ಕೆಲಸ ಹಾಗೂ ಸರಿಯಾದ ವೇತನ ಸಿಗಬೇಕೆಂಬ ಆಶಯವೂ ಇದೆ” ಎಂದು ಸರ್ಕಾರಿ ಅಧಿಕಾರಿಯೊಬ್ಬರು ನ್ಯೂಸ್18ಗೆ ತಿಳಿಸಿದ್ಧಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಎನ್​ಕೌಂಟರ್; 4 ದಿನಗಳಲ್ಲಿ 11 ಉಗ್ರರ ಹತ್ಯೆ

ದೇಶದ ಬಹುತೇಕ ಕಾರ್ಮಿಕರು ಅಸಂಘಟಿತ ವಲಯಗಳಲ್ಲಿ ಇರುವುದರಿಂದ ಅವರ ವಿವರಗಳನ್ನ ಪಡೆಯುವುದು ಕೇಂದ್ರ ಸರ್ಕಾರಕ್ಕೆ ಕಷ್ಟಸಾಧ್ಯ. ರಾಜ್ಯ ಸರ್ಕಾರಗಳ ನೆರವು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತು ಕಾರ್ಮಿಕ ಸಚಿವಾಲಯಗಳು ರಾಜ್ಯ ಸರ್ಕಾರಗಳ ಮೂಲಕ ಕಾರ್ಮಿಕರ ವಿವರಗಳನ್ನ ಪಡೆಯಲು ಪ್ರಯತ್ನಿಸುತ್ತಿವೆ. ಕಾರ್ಮಿಕರ ಸಮೀಕ್ಷೆ ನಡೆಸಿ ಎಲ್ಲಾ ವಿವರಗಳನ್ನ ನೀಡಬೇಕೆಂದು ರಾಜ್ಯ ಸರ್ಕಾರಗಳಿಗೆ ಕೋರಿಕೊಳ್ಳಲಾಗಿದೆ.

ಈ ಎಲ್ಲಾ ಮಾಹಿತಿಯನ್ನ ಕೇಂದ್ರೀಯ ವ್ಯವಸ್ಥೆಯೊಂದರಲ್ಲಿ ಕ್ರೋಢೀಕರಿಸಲಾಗುತ್ತದೆ. ಇದೇ ಮಾಹಿತಿಯನ್ನು ಕೇಂದ್ರದ ಸಾಮಾಜಿಕ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಉದಾಹರಣೆಗೆ, ಕಾರ್ಮಿಕರ ಖಾತೆಗೆ ನೇರ ಹಣ ವರ್ಗಾವಣೆ ಇತ್ಯಾದಿ ಕಾರ್ಯಗಳಿಗೂ ಈ ವಿವರ ಉಪಯೋಗಕ್ಕೆ ಬರುತ್ತದೆ.

“ಜನ್ ಧನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಇರುವಂಥ ಲಾಭದ ರೀತಿಯಲ್ಲಿ ಇದು ಇರುತ್ತದೆ. ಅದಷ್ಟೇ ಅಲ್ಲ, ಕಾರ್ಮಿಕರು ತಮ್ಮದೇ ಸ್ವಂತ ವ್ಯವಹಾರ ಮಾಡಬೇಕೆಂದಿದ್ದರೆ ಅದಕ್ಕೆ ಈ ಆ್ಯಪ್ ಅನುವು ಮಾಡಿಕೊಡುತ್ತದೆ” ಎಂದು ಈ ಯೋಜನೆಯ ರೂಪುರೇಖೆಯಲ್ಲಿ ಭಾಗಿಯಾದ ಅಧಿಕಾರಿ ಹೇಳುತ್ತಾರೆ.ಇದನ್ನೂ ಓದಿ: ಶಾಲೆ ತೆರೆಯಬೇಡಿ, ಈ ವರ್ಷವನ್ನು ಝೀರೋ ಅಕಾಡೆಮಿಕ್ ವರ್ಷ ಎಂದು ಘೋಷಿಸಿ: ಶಿಕ್ಷಕರು, ಪೋಷಕರಿಂದ ಒತ್ತಾಯ

ಈ ಯೋಜನೆಯು ಕಾರ್ಮಿಕರಿಗೆ ತಮ್ಮ ಕಾರ್ಯಸ್ಥಾನಗಳಿಗೆ ಮರಳಲು ಉತ್ತೇಜಿಸುತ್ತದೆ. ಕಾರ್ಮಿಕರು ಮತ್ತೆ ವಾಪಸ್ ಬಂದರೆ ಅವರಿಗೆ ಸರಿಯಾದ ಸೌಲಭ್ಯಗಳನ್ನ ಒದಗಿಸುವಂತೆ ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಆದರೂ ಕೂಡ ಕಾರ್ಮಿಕರಿಗೆ ಮತ್ತೆ ಕೆಲಸ ಸಿಗುವ ವಿಶ್ವಾಸ ಮೂಡಿಲ್ಲ.ಇನ್ನು, ಕಾರ್ಪೊರೇಟ್ ಉದ್ಯಮಗಳು ಹಾಗೂ ಸಣ್ಣ-ಮಧ್ಯಮ ಉದ್ಯಮ ವಲಯಗಳು ಕಾರ್ಯಾರಂಭ ಮಾಡಿದ್ದಾವಾದರೂ ಕಾರ್ಮಿಕರ ಕೊರತೆ ಕಾಡುತ್ತಿದೆ. ಬಹುತೇಕ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೊರಟು ಹೋಗಿರುವುದು ಎಲ್ಲರಿಗೂ ತಲೆನೋವು ತಂದಿದೆ. ಈ ಕಾರ್ಮಿಕರನ್ನು ವಾಪಸ್ ಬರುವಂತೆ ಮನವೊಲಿಸಿವುದು ಬಹಳ ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಈ ವಿನೂತನ ಕಾರ್ಮಿಕರ ಅಭ್ಯುದಯದ ಯೋಜನೆಯು ನೆರವಿಗೆ ಬರಬಹುದು. ಕಾರ್ಮಿಕರಲ್ಲಿ ವಿಶ್ವಾಸ ಮೂಡಿಸಬಹುದು. ಈ ಆಶಯದಲ್ಲಿ ಕೇಂದ್ರ ಸರ್ಕಾರವೂ ಇದೆ.

ವರದಿ: Pallavi Ghosh, CNN-News18
First published: June 10, 2020, 12:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading