Jammu and Kashmirದಲ್ಲಿ ಮುಂದುವರೆದ ಎನ್​ಕೌಂಟರ್​​; ಹೆಚ್ಚಿನ ಭದ್ರತಾ ಪಡೆ ಕಳುಹಿಸಲು ಮುಂದಾದ ಕೇಂದ್ರ

ಕಣಿವೆ ರಾಜ್ಯದ ನಾಗರಿಕರಿಗೆ ಭದ್ರತೆ ನೀಡಲು ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇತರ ಪಡೆಗಳಿಗೆ ಸಹಾಯ ಮಾಡಲು ಸುಮಾರು 25 ಹೆಚ್ಚು ಪಡೆಗಳ ಸೈನ್ಯವನ್ನು ಕಳುಹಿಸಲು ನಿರ್ಧರಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ನಾಗರೀಕರ ಹತ್ಯೆ ಮುಂದುವರದಿದ್ದು, ಇಲ್ಲಿನ ಸ್ಥಿತಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜೊತೆಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್​ಕೌಂಟರ್​ (encounter) ಮುಂದುವರೆದಿದ್ದು, ನಿನ್ನೆ ಇಬ್ಬರು ಉಗ್ರರನ್ನು (miltants) ಹತ್ಯೆ ಮಾಡಲಾಗಿದೆ. ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಪರಿಣಾಮ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು (Armed Force) ಕಳುಹಿಸಲು ನಿರ್ಧರಿಸಿದೆ. ಮೂಲಗಳ ಪ್ರಕಾರ, ಕಣಿವೆ ರಾಜ್ಯದ ನಾಗರಿಕರಿಗೆ ಭದ್ರತೆ ನೀಡಲು ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇತರ ಪಡೆಗಳಿಗೆ ಸಹಾಯ ಮಾಡಲು ಜಮ್ಮು ಮತ್ತು ಕಾಶ್ಮೀರಕ್ಕೆ ಸುಮಾರು 25 ಹೆಚ್ಚು ಪಡೆಗಳ ಸೈನ್ಯವನ್ನು ಕಳುಹಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ (central Government ) ಅಧಿಕೃತ ಆದೇಶ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.

    ಹಂತ ಹಂತವಾಗಿ ಸೇನಾ ಪಡೆ ರವಾನೆ

    ಜಮ್ಮು ಮತ್ತು ಕಾಶ್ಮೀರಕ್ಕೆ ಹಂತ ಹಂತವಾಗಿ ಸಿಆರ್​ಪಿಎಫ್​ನ (CRPF) ಹೆಚ್ಚುವರಿ ಪಡೆಗಳುನ್ನು ಕಳುಹಿಸಲಾಗುವುದು. ಮೊದಲ ಹಂತದಲ್ಲಿ 10 ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುವುದು ಮುಂದಿನ ಎರಡು ಹಂತದಲ್ಲಿ ಉಳಿದ 15 ಪಡೆಗಳನ್ನು ಕಳುಹಿಸಲಾಗವುದು

    ಶೀಘ್ರದಲ್ಲೇ ಅಧಿಕೃತ ಆದೇಶ

    ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ದೇಶದ ವಿವಿಧ ಭಾಗಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಆರ್​ಪಿಎಫ್​ ಪಡೆಗಳನ್ನು ಕರೆಸಿಕೊಂಡು ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುವುದು. ಶೀಘ್ರದಲ್ಲೇ, ಈ ಸಂಬಂಧ ಭಾರತೀಯ ಸೇನೆ ಅಧಿಕೃತ ಆದೇಶ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.

    ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; 4 ಉಗ್ರರ ಹತ್ಯೆ!

    ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ

    ಈಗಾಗಲೇ ಕಣಿವೆ ರಾಜ್ಯಕ್ಕೆ ಆಗಮಿಸುವ 25ಕ್ಕೂ ಹೆಚ್ಚು ಸಿಆರ್​​ಪಿಎಫ್​ ಪಡೆಗಳಿಗೆ, ವಸತಿ, ಸಾರಿಗೆ ಇತ್ಯಾದಿಗಳ ವ್ಯವಸ್ಥೆ ಈಗಾಗಲೇ ಆರಂಭವಾಗಿದೆ. ಯಾವ ಪಡೆಗಳನ್ನು ಕರೆಸಿಕೊಳ್ಳುವುದು ಎಂಬ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು. ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಸಂಬಂಧ ಈಗಾಗಲೇ ವ್ಯವಸ್ಥೆಗೆ ಮುಂದಾಗಲಾಗಿದೆ.

    ಇದನ್ನು ಓದಿ: 100 ಕೋಟಿ ಡೋಸ್ ಕೋವಿಡ್-19 ಲಸಿಕೆ ವಿತರಣೆ; ಕೆಂಪು ಕೋಟೆಯಲ್ಲಿ ಹಾರಾಡಲಿದೆ 1,400 ಕೆಜಿ ತೂಕದ ತಿರಂಗ!

    ಅ. 25- 26ಕ್ಕೆ ಕಣಿವೆ ರಾಜ್ಯಕ್ಕೆ ಅಮಿತ್​ ಶಾ

    ಡಿಜಿ ಸಿಆರ್‌ಪಿಎಫ್ ಕುಲದೀಪ್ ಸಿಂಗ್ ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಮೇಲ್ವಿಚಾರಣಾ ಕಾರ್ಯಾಚರಣೆ ನಡೆಸಿದ್ದು, ಅತಿದೊಡ್ಡ ಅರೆಸೇನಾ ಪಡೆಯ ಇತರ ಉನ್ನತ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದಾರೆ. ಅ. 23 ಮತ್ತು 25ಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಅಲ್ಲಿಯವರೆಗೂ ಡಿಜಿ ಅಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ.

    ಕಳೆದ 15ದಿನದಲ್ಲಿ 15 ಭಯೋತ್ಪಾದಕರ ಹತ್ಯೆ

    ಬುಧವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್​​ಕೌಂಟರ್​ನಲ್ಲಿ ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಶೋಪಿಯಾನ್ ಜಿಲ್ಲೆಯ ಡ್ರಾಗಡ್ ಪ್ರದೇಶದಲ್ಲಿ ಉಗ್ರರು ಇರುವುದರ ಬಗ್ಗೆ ಮಾಹಿತಿ ಪಡೆದ ನಂತರ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಕಳೆದ 10 ವರ್ಷಗಳಲ್ಲಿ ಭಾರತೀಯ ಸೇನೆಯ ಸುದೀರ್ಘ ಕಾರ್ಯಾಚರಣೆ ಮಾಂಧರ್ ಸೆಕ್ಟರ್‌ನಲ್ಲಿ ನಡೆಯುತ್ತಿದೆ. ಕಳೆದ ಎರಡು ವಾರಗಳಲ್ಲಿ ಒಟ್ಟು 15 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಕಳೆದ 15 ದಿನಗಳಲ್ಲಿ 11 ನಾಗರಿಕರು ಸಾವನ್ನಪ್ಪಿದ್ದು, ಇವರು ಸ್ಥಳೀಯರಲ್ಲ ಎನ್ನಲಾಗಿದೆ.
    Published by:Seema R
    First published: