Cooking Oil Price: ಶೀಘ್ರದಲ್ಲಿಯೇ ಅಡುಗೆ ಎಣ್ಣೆ ದರ ಅಗ್ಗ; ಆಮದು ಸುಂಕ ಕಡಿತಗೊಳಿಸಿದ ಕೇಂದ್ರ

ಸರ್ಕಾರ ಕಚ್ಛಾ ತೈಲದ ಮೇಲಿನ ಸೆಸ್​ ಸೇರಿದಂತೆ ಇತರೆ ಶುಲ್ಕಗಳ ಮೇಲಿನ ಆಮದು ಸುಂಕವನ್ನು ಶೇ 30.25ರಿಂದ ಶೇ 24.75ರಷ್ಟಕ್ಕೆ ಇಳಿಸಿದೆ.

ಅಡುಗೆ ಎಣ್ಣೆ

ಅಡುಗೆ ಎಣ್ಣೆ

 • Share this:
  ನವದೆಹಲಿ (ಸೆ. 11): ಹಬ್ಬಗಳ ಸಾಲು ಆರಂಭವಾಗುತ್ತಿದ್ದಂತೆ ದೇಶದ ಜನರಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಲು ಮುಂದಾಗಿದೆ. ನಿರಂತರವಾಗಿ ಏರಿಕೆ ಕಾಣುತ್ತಿದ್ದ ಅಡುಗೆ ಎಣ್ಣೆ ದರ (cooking oil price) ಇಳಿಸಲು ಕೇಂದ್ರ ನಿರ್ಧರಿಸಿದೆ. ಇದೇ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ (import Duty) ಕಡಿತಗೊಳಿಸಲು ಮುಂದಾಗಿದೆ, ಈ ಸಂಬಂಧ ಇಂದು ಕೇಂದ್ರ ಸರ್ಕಾರ ಸಭೆ ನಡೆಸಿದೆ. ಸಾಮಾನ್ಯ ಜನರ ದೃಷ್ಟಿಕೋನದಲ್ಲಿಟ್ಟುಕೊಂಡು ಅಡುಗೆ ಎಣ್ಣೆ ಮೇಲಿನ ಆಮದು ಸುಂಕವನ್ನು 5.5 ರಷ್ಟು ಇಳಿಕೆ ಮಾಡಲು ನಿರ್ಧರಿಸಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ರಾಜ್ಯ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಈ ತೀರ್ಮಾನ ನಡೆಸಲಾಗಿದೆ. ಸರ್ಕಾರ ಕಚ್ಛಾ ತೈಲದ ಮೇಲಿನ ಸೆಸ್​ ಸೇರಿದಂತೆ ಇತರೆ ಶುಲ್ಕಗಳ ಮೇಲಿನ ಆಮದು ಸುಂಕವನ್ನು ಶೇ 30.25ರಿಂದ ಶೇ 24.75ರಷ್ಟಕ್ಕೆ ಇಳಿಸಿದೆ.

  ಆಮದು ಸುಂಕ ಇಳಿಕೆ

  ಇನ್ನು ಕಚ್ಚಾ ಸೋಯಾ ಬೀನ್​ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇ 30.25ರಿಂದ ಶೇ 25.75ರಷ್ಟು ಇಳಿಸಲಾಗಿದೆ, ಆರ್​ಬಿಪಿ ಪಾಮ್​ ಎಣ್ಣೆ ಮೇಲಿನ ಆಮದನ್ನು 4.25% ರಿಂದ 35.75 ಕ್ಕೆ ಇಳಿಸಲಾಗಿದೆ. ಜೊತೆಗೆ, ಸಂಸ್ಕರಿಸಿದ ಸೋಯಾಬೀನ್​ ಎಣ್ಣೆಯು ಶೇಕಡಾ 35.75 ಶೇಕಡಾ 41.25 ರಷ್ಟು ಕಡಿತ ಗೊಳಿಸಲಾಗಿದೆ.
  ಕಳೆದ ಒಂದು ವರ್ಷದಲ್ಲಿ ಖಾದ್ಯ ತೈಲ ಬೆಲೆಗಳು ಶೇಕಡಾ 50 ರಷ್ಟು ಏರಿಕೆಯಾಗುವ ಮೂಲಕ ಮಧ್ಯಮ ವರ್ಗದ ಜನರು ಸಾಕಷ್ಟು ಸಂಕಷ್ಟ ಅನುಭವಿಸುವಂತೆ ಆಗಿತ್ತು. ಈ ಹಿನ್ನಲೆ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ. ಕಳೆದ ತಿಂಗಳು ಕೂಡ ಸರ್ಕಾರ ಖಾದ್ಯ ತೈಲಗಳ ಆಮದು ಸುಂಕವನ್ನು ಕಡಿತಗೊಳಿಸಿತ್ತು. ಅದರಲ್ಲೂ ಅಡುಗೆ ಎಣ್ಣೆ ಬೆಲೆಯನ್ನು ಕಡಿತಗೊಳಿಸಿತು. ಆಗಸ್ಟ್​ನಲ್ಲಿ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಸುಂಕವನ್ನು ಶೇಕಡಾ 7.5 ರಷ್ಟು ಕಡಿಮೆ ಮಾಡಲಾಗಿದೆ

  ಖಾದ್ಯ ತೈಲಗಳ ಲಭ್ಯತೆಯಲ್ಲಿ ಪಾರದರ್ಶಕತೆ ತರಲು ಈ ಕ್ರಮಕ್ಕೆ ಮುಂದಾಗಲಾಗಿದೆ ಇದೇ ಕಾರಣಕ್ಕೆ ಸಾರ್ವಜನಿಕ ವಿತರಣಾ ಕಾರ್ಯದರ್ಶಿ ರಾಜ್ಯ ಅಧಿಕಾರಿಗಳನ್ನು ಭೇಟಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

  ಇದನ್ನು ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್​ ರೂಪಾನಿ; ಗುಜರಾತ್​ನಲ್ಲಿ ​ಅಚ್ಚರಿಯ ರಾಜಕೀಯ ಬೆಳವಣಿಗೆ

  ಉತ್ತಮ ಇಳುವರಿ ನಿರೀಕ್ಷೆ ಕೂಡ

  ಅಷ್ಟೇ ಅಲ್ಲದೇ ಮುಂದಿನ ತಿಂಗಳಿನಿಂದ ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಈ ಹಿನ್ನಲೆ ಅಕ್ಟೋಬರ್‌ನಿಂದ ಖಾದ್ಯ ತೈಲಗಳ ಬೆಲೆಯನ್ನು ಕಡಿಮೆ ಆಗುವ ನಿರೀಕ್ಷೆಯಿದೆ. ಆಮದು ಸುಂಕ ಸಡಿಲಿಕೆಗಳನ್ನು ವಿಸ್ತರಿಸುವ ಅಗತ್ಯವಿಲ್ಲ. ಸರ್ಕಾರ ಕೂಡ ಅಡುಗೆ ಎಣ್ಣೆ ದರ ಏರಿಕೆಯಾಗುತ್ತಿರುವ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಇದರಿಂದ ಅಡುಗೆ ಎಣ್ಣೆಯ ದರಗಳನ್ನು ಪರೀಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ಚಿಲ್ಲರೆ ಬೆಲೆಗಳನ್ನು ತಗ್ಗಿಸಲು ಕೇಂದ್ರ ಸರ್ಕಾರವು ಈಗಾಗಲೇ ಪಾಮ್ ಎಣ್ಣೆ ಸೇರಿದಂತೆ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ ಎಂದು ತಿಳಿಸಿದೆ.

  ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿರುವ ಪರಿಣಾಮ ಈ ಬಾರಿ ಸೋಯಾ ಬೀನ್​ ಉತ್ತಮ ಇಳುವರಿ ಬರುವ ಸಾಧ್ಯತೆ ಇದೆ. ಇದರ ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇದರಿಂದ ದೇಶದಲ್ಲೂ ಕೂಡ ಶೀಘ್ರದಲ್ಲಿಯೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
  Published by:Seema R
  First published: