Dragon Fruit Cultivation: ಡ್ರ್ಯಾಗನ್ ಹಣ್ಣಿನ ಕೃಷಿಯನ್ನು 50,000 ಹೆಕ್ಟೇರ್ ಗಳಿಗೆ ಹೆಚ್ಚಿಸಲು ನಿರ್ಧರಿಸಿದ ಕೇಂದ್ರ ಸರ್ಕಾರ

ಭಾರತವು ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ಯಾವಾಗಲೂ ಕೃಷಿಗೆ ಹೆಚ್ಚಿನ ಮಹತ್ವ ಸಿಗಬೇಕೆಂದು ಪ್ರತಿ ಭಾರತೀಯನ ಆಶಯವಾಗಿರುತ್ತದೆ. ಈ ಆಶಯದ ನಿಟ್ಟಿನಲ್ಲಿ ಈಗಾಗಲೇ ದೇಶದ ಕೆಲವು ರಾಜ್ಯಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಮುಖ್ಯವಾಗಿ, ಗುಜರಾತ್ ಮತ್ತು ಹರಿಯಾಣ ಸರ್ಕಾರಗಳು ತಮ್ಮ ರಾಜ್ಯದ ಜನರಿಗೆ ಕೃಷಿ ಮಾಡಲು ಪ್ರೋತ್ಸಾಹ ಧನವನ್ನು ನೀಡುತ್ತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತವು ಕೃಷಿ (Agriculture) ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ಯಾವಾಗಲೂ ಕೃಷಿಗೆ ಹೆಚ್ಚಿನ ಮಹತ್ವ ಸಿಗಬೇಕೆಂದು ಪ್ರತಿ ಭಾರತೀಯನ ಆಶಯವಾಗಿರುತ್ತದೆ. ಈ ಆಶಯದ ನಿಟ್ಟಿನಲ್ಲಿ ಈಗಾಗಲೇ ದೇಶದ (Country) ಕೆಲವು ರಾಜ್ಯಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಮುಖ್ಯವಾಗಿ, ಗುಜರಾತ್ (Gujarat) ಮತ್ತು ಹರಿಯಾಣ ಸರ್ಕಾರಗಳು (Haryana Government) ತಮ್ಮ ರಾಜ್ಯದ ಜನರಿಗೆ ಕೃಷಿ ಮಾಡಲು ಪ್ರೋತ್ಸಾಹ ಧನವನ್ನು ನೀಡುತ್ತಿವೆ. ಈ ಎರಡು ರಾಜ್ಯಗಳು ಆಗಾಗ ರಾಷ್ಟ್ರೀಯ ಸಮಾವೇಶವನ್ನು ಅಯೋಜಿಸಿ ತಮ್ಮ ರೈತರಿಗೆ, ಗ್ರಾಹಕರಿಗೆ ಕೃಷಿಯ ಪ್ರಯೋಜನಗಳ ಬಗ್ಗೆ ಉತ್ತಮ ಮಾಹಿತಿ ನೀಡುತ್ತಿವೆ. ಕೇಂದ್ರ ಸರ್ಕಾರವು (Central Government) ಗುಜರಾತ್ ಮತ್ತು ಹರಿಯಾಣ ಸರ್ಕಾರಗಳ ಈ ಕೃಷಿ ಹೆಜ್ಜೆಗಳನ್ನು ಅನುಸರಿಸಲು ನಿರ್ಧರಿಸುತ್ತಿದೆ.

ಡ್ರಾಗನ್‌ ಹಣ್ಣನ್ನು ಬೆಳೆಯುವುದಕ್ಕೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ
ಅದರಲ್ಲೂ ಈ ಎರಡು ರಾಜ್ಯಗಳು ಸೂಪರ್‌ ಹಣ್ಣು ಎಂದು ಪ್ರಸಿದ್ಧಿ ಪಡೆದಿರುವ ಡ್ರಾಗನ್‌ ಹಣ್ಣನ್ನು ಜಾಸ್ತಿ ಬೆಳೆಯುವಂತೆ ತಮ್ಮ ರಾಜ್ಯದ ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿವೆ.  ಇದೇ ಕೆಲಸವನ್ನು ಕೇಂದ್ರವು ಮಾಡಲು ಹೊರಟಿದೆ. ದೇಶದ ಯಾವುದೇ ರಾಜ್ಯದ ರೈತನು ಈ ಹಣ್ಣನ್ನು ಬೆಳೆಯುವುದಕ್ಕೆ ನಿರ್ಧರಿಸಿದರೆ, ಆ ರೈತನಿಗೆ ಕೇಂದ್ರ ಸರ್ಕಾರವು ಪ್ರೋತ್ಸಾಹವನ್ನು ನೀಡುತ್ತದೆ.

ಈ ಹಣ್ಣಿನಲ್ಲಿರುವ ಪೌಷ್ಠಿಕಾಂಶದ ಮೌಲ್ಯಗಳಿಂದಾಗಿ ಹಣ್ಣಿನ ವೆಚ್ಚದ ಪರಿಣಾಮ ಮತ್ತು ಈ ಹಣ್ಣಿಗೆ ಇರುವ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ, ಡ್ರ್ಯಾಗನ್‌ ಹಣ್ಣಿನ ಕೃಷಿಯನ್ನು ಭಾರತದಲ್ಲಿ ವಿಸ್ತರಿಸಬಹುದು ಎಂದು ಕೇಂದ್ರವು ಯೋಚಿಸಿದೆ. ಪ್ರಸ್ತುತವಾಗಿ, ಈ ವಿದೇಶಿ ಹಣ್ಣನ್ನು ಭಾರತದಲ್ಲಿ 3,000 ಹೆಕ್ಟೇರ್‌ಗಳಲ್ಲಿ ಬೆಳೆಸಲಾಗುತ್ತದೆ. ಐದು ವರ್ಷಗಳಲ್ಲಿ ಈ ಹಣ್ಣಿನ ಕೃಷಿಯನ್ನು 50,000 ಹೆಕ್ಟೇರ್‌ಗಳಿಗೆ ಹೆಚ್ಚಿಸುವ ಯೋಜನೆಯನ್ನು ಪ್ರಸ್ತುತ ಕೇಂದ್ರ ಸಾಕಾರಗೊಳಿಸಲು ನಿರ್ಧರಿಸಿದೆ.

ಡ್ರ್ಯಾಗನ್ ಫ್ರೂಟ್ ಅನ್ನು ಕಮಲಮ್ ಎಂದು ಮರುನಾಮಕರಣ
ಗುಜರಾತ್ ಸರ್ಕಾರವು ಇತ್ತೀಚೆಗೆ ಡ್ರ್ಯಾಗನ್ ಫ್ರೂಟ್ ಅನ್ನು ಕಮಲಮ್ (ಕಮಲ) ಎಂದು ಮರುನಾಮಕರಣ ಮಾಡಿತು ಮತ್ತು ಅದನ್ನು ಬೆಳೆಸುವ ರೈತರಿಗೆ ಪ್ರೋತ್ಸಾಹವನ್ನು ಘೋಷಿಸಿತು. ಈ ವಿಲಕ್ಷಣ ಹಣ್ಣಿನ ತಳಿಯನ್ನು ನೆಡಲು ಸಿದ್ಧರಾಗಿರುವ ರೈತರಿಗೆ ಹರಿಯಾಣ ಸರ್ಕಾರವು ಅನುದಾನವನ್ನು ನೀಡುತ್ತಿದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಪೋಷಕಾಂಶಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಸತುವಿನಂಶಗಳು ಇರುವುದರಿಂದ,ಈ ಹಣ್ಣು ಡಯಾಬಿಟಿಸ್‌ ರೋಗಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಹಣ್ಣಿಗೆ ಬೇಡಿಕೆ
ಇತ್ತೀಚಿಗೆ ನಡೆದ ರಾಷ್ಟ್ರೀಯ ಹಣ್ಣಿನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ, ಪೌಷ್ಠಿಕಾಂಶದ ಮೌಲ್ಯಗಳಿಂದಾಗಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಈ ಹಣ್ಣಿಗೆ ಬೇಡಿಕೆ ಹೆಚ್ಚಿದೆ. “ಐದು ವರ್ಷಗಳಲ್ಲಿ ಐವತ್ತು ಸಾವಿರ ಹೆಕ್ಟೇರ್‌ಗಳಲ್ಲಿ ಈ ಹಣ್ಣಿನ ಕೃಷಿಯನ್ನು ಸಾಧಿಸಬೇಕೆಂಬ ಗುರಿಯಿದೆ. ಆಗ ಈ ಹಣ್ಣಿಗೂ ಬೇಡಿಕೆ ಉಳಿಯುತ್ತದೆ. ರೈತರಿಗೂ ಉತ್ತಮ ಬೆಲೆ ಸಿಗುತ್ತದೆ. ಈ ಹಣ್ಣನ್ನು ಕಳಪೆ ಗುಣಮಟ್ಟದ ಮತ್ತು ಮಳೆಯಾಶ್ರಿತ ಭೂಮಿಯಲ್ಲಿ ಬೆಳೆಸಬಹುದಾಗಿರುವುದರಿಂದ ಈ ಹಣ್ಣಿನ ಕೃಷಿ ಮಾಡುವುದು ಉತ್ತಮವಾಗಿದೆ ಎಂದು ಶ್ರೀ ಅಹುಜಾ ಹೇಳಿದರು.

ಇದನ್ನೂ ಓದಿ: Eco-Friendly Refrigerator: ಹಣ್ಣು, ತರಕಾರಿಗಳನ್ನು ತಾಜಾವಾಗಿರಿಸುತ್ತೆ ಈ ಪರಿಸರ ಸ್ನೇಹಿ ಫ್ರಿಡ್ಜ್!

ರೈತರಿಗೆ ಉತ್ತಮ ಗುಣಮಟ್ಟದ ನಾಟಿ ಸಾಮಗ್ರಿಗಳನ್ನು ಒದಗಿಸಲು ಕೇಂದ್ರವು ರಾಜ್ಯಗಳಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಸಮಾವೇಶದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (MIDH) ಅಡಿಯಲ್ಲಿ ರಾಜ್ಯಗಳು ಮತ್ತು ರೈತರಿಗೆ ನಿರ್ದಿಷ್ಟ ಗುರಿ ಆಧಾರಿತ ಸಹಾಯವನ್ನು ಕೇಂದ್ರವು ಒದಗಿಸಬಹುದು ಎಂದು ಹೇಳಿದರು.

ಕಡಿಮೆ ನೀರು ಹಾಗೂ ಒಣ ಭೂಮಿಯಲ್ಲಿಯೂ ಬೆಳೆಯಬಹುದಾದ ಹಣ್ಣು
“ಆಹಾರ ಸಂಸ್ಕರಣಾ ಸಚಿವಾಲಯದ ಸಹಾಯದಿಂದ ಸಂಸ್ಕರಣಾ ಮೂಲಸೌಕರ್ಯವನ್ನು ಸಹ ಅಭಿವೃದ್ಧಿಪಡಿಸಬಹುದು. ಇದರ ಕೃಷಿಯಿಂದ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ”ಎಂದು ಹೇಳಿದರು. ಅಧಿಕಾರಿಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಈ ಹಣ್ಣಿನ ಸಸ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ ಮತ್ತು ಇದನ್ನು ಒಣ ಭೂಮಿಯಲ್ಲಿಯೂ ಸಹ ಬೆಳೆಸಬಹುದು.

ಇದೀಗ ಡ್ರ್ಯಾಗನ್ ಹಣ್ಣು ಕೆಜಿಗೆ ₹400 ದರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ₹100ಕ್ಕೆ ಸಿಗುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಆಯುಕ್ತ ಪ್ರಭಾತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು. “ಬೇಸಾಯದ ವೆಚ್ಚ ಆರಂಭದಲ್ಲಿ ಹೆಚ್ಚು. ಆದರೆ ಸಸ್ಯಕ್ಕೆ ಉತ್ಪಾದಕ ಭೂಮಿಯ ಅಗತ್ಯವಿಲ್ಲ. ಈ ಹಣ್ಣು ಕಡಿಮೆ ಫಲವತ್ತಾದ ಪ್ರದೇಶದಿಂದ ಗರಿಷ್ಠ ಉತ್ಪಾದನೆಯನ್ನು ನೀಡುತ್ತದೆ. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ’ ಎಂದು ಡಾ.ಕುಮಾರ್ ತಿಳಿಸಿದರು.

ಈ ಬಗ್ಗೆ ಜಿ.ಕರುಣಾಕರನ್ ಅವರು ಹೇಳಿದ್ದೇನು
ಹೆಚ್ಚಿನ ರಾಜ್ಯ ಸರ್ಕಾರಗಳನ್ನು ಪ್ರೇರೇಪಿಸಲು ಕೇಂದ್ರವು ವಾರ್ಷಿಕ ಕ್ರಿಯಾ ಯೋಜನೆಯನ್ನು ರೂಪಿಸಲು ಯೋಜಿಸಿದೆ. ಈ ಸಮಯದಲ್ಲಿ, ಈ ಹಣ್ಣನ್ನು ಬೆಳೆಸುವ ರಾಜ್ಯಗಳಲ್ಲಿ ಮಿಜೋರಾಂ ಅಗ್ರಸ್ಥಾನದಲ್ಲಿದೆ. "ಶೀತ ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಡ್ರ್ಯಾಗನ್ ಹಣ್ಣನ್ನು ಸುಲಭವಾಗಿ ಬೆಳೆಯಬಹುದು. ಉತ್ಪಾದನೆ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್‌ನ ಜಿ.ಕರುಣಾಕರನ್ ಹೇಳಿದರು.

ಇದನ್ನೂ ಓದಿ:  Stolen Pig: ಕೊಲ್ಕತ್ತಾ ಪೊಲೀಸರಿಗೆ ಹಂದಿ ಹುಡುಕೋ ಕೆಲಸ ಕೊಟ್ಟ ಹೈಕೋರ್ಟ್!

ಭಾರತವು ಈಗ ಸುಮಾರು 15,491 ಟನ್‌ಗಳಷ್ಟು ಡ್ರ್ಯಾಗನ್ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದೆ ಮತ್ತು 40,000 ಹೆಕ್ಟೇರ್‌ಗಳಲ್ಲಿ ಹಣ್ಣುಗಳನ್ನು ಬೆಳೆಯುವ ಚೀನಾ ಮತ್ತು 60,000 ಹೆಕ್ಟೇರ್‌ಗಳಲ್ಲಿ ಹಣ್ಣುಗಳನ್ನು ಬೆಳೆಯುವ ವಿಯೆಟ್ನಾಂನ ಉತ್ಪಾದನೆಯನ್ನು ಸರಿಗಟ್ಟುವ ಸಾಮರ್ಥ್ಯವನ್ನು ಹೊಂದಿದೆ ಎಂದು ಡಾ ಕರುಣಾಕರನ್ ಹೇಳಿದರು. “ಇದಕ್ಕೆ ಆರಂಭಿಕ ಹೂಡಿಕೆ ಹೆಚ್ಚು. ಆದರೆ ಇದು ಒಂದು ವರ್ಷದೊಳಗೆ ಉತ್ತಮ ಆದಾಯವನ್ನು ತಂದು ಕೊಡುತ್ತದೆ. ಈ ಹಣ್ಣುಗಳ ಕೆಂಪು ಮತ್ತು ಗುಲಾಬಿ ತಳಿಗಳು ಉತ್ತಮ ಇಳುವರಿ ನೀಡುತ್ತವೆ” ಎಂದು ಡಾ.ಕರುಣಾಕರನ್ ಸಮಾವೇಶದಲ್ಲಿ ಹೇಳಿದರು.
Published by:Ashwini Prabhu
First published: