• Home
 • »
 • News
 • »
 • national-international
 • »
 • Padma Awards 2021| ಡಾ.ಚಂದ್ರಶೇಖರ ಕಂಬಾರರಿಗೆ ಪದ್ಮಭೂಷಣ, ಎಸ್​ಪಿಬಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ

Padma Awards 2021| ಡಾ.ಚಂದ್ರಶೇಖರ ಕಂಬಾರರಿಗೆ ಪದ್ಮಭೂಷಣ, ಎಸ್​ಪಿಬಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ

ಪದ್ಮ ಪ್ರಶಸ್ತಿ

ಪದ್ಮ ಪ್ರಶಸ್ತಿ

ಖ್ಯಾತ ಹಿನ್ನೆಲೆ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ವಿಶೇಷವಾಗಿ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಪದ್ಮ ವಿಭೂಷಣ ನೀಡಲಾಗಿದೆ. ಒಟ್ಟು 119 ಸಾಧಕರಿಗೆ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟ ಮಾಡಲಾಗಿದೆ.

ಮುಂದೆ ಓದಿ ...
 • Share this:

ನವದೆಹಲಿ; ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಅವರಿಗೆ ಈ ಗೌರವ ನೀಡಲಾಗುತ್ತದೆ. 2021ನೇ ಸಾಲಿನಲ್ಲಿ ಒಟ್ಟು 119 ಮಂದಿಯನ್ನು ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.


ಕರ್ನಾಟಕದ ಐದು ಮಂದಿ ಸಾಧಕರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಿಂದ ಡಾ.ಚಂದ್ರಶೇಖರ ಕಂಬಾರ ಅವರಿಗೆ  ಪದ್ಮ ಭೂಷಣ ಹಾಗೂ ಆರೋಗ್ಯ ಕ್ಷೇತ್ರದಿಂದ ಡಾ.ಬಿ.ಎಂ. ಹೆಗ್ಡೆ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಳಿದಂತೆ ಕ್ರೀಡಾ ಕ್ಷೇತ್ರದಿಂದ ಕೆ.ವೈ. ವೆಂಕಟೇಶ್, ಕಲೆ ಮಾತಾ ಬಿ. ಮಂಜಮ್ಮ ಹಾಗೂ ಶಿಕ್ಷಣ ಕ್ಷೇತ್ರದಿಂದ ರಂಗಸ್ವಾಮಿ ಲಕ್ಷ್ಮೀ ನಾರಾಯಣ ಕಶ್ಯಪ್ ಅವರಿಗೆ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.


ಇದನ್ನು ಓದಿ: ರೈತ ಕ್ರಾಂತಿಗೆ ಎಚ್​ಡಿಕೆ ಬೆಂಬಲ; ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆ ಕೈ ಬಿಡಬೇಕು ಎಂದ ಮಾಜಿ ಸಿಎಂ


ಖ್ಯಾತ ಹಿನ್ನೆಲೆ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ವಿಶೇಷವಾಗಿ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಪದ್ಮ ವಿಭೂಷಣ ನೀಡಲಾಗಿದೆ. ಒಟ್ಟು 119 ಸಾಧಕರಿಗೆ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟ ಮಾಡಲಾಗಿದೆ.


ಪದ್ಮ ವಿಭೂಷಣ


 • ಶಿಂಜೊ ಅಬೆ

 • ಎಸ್​ಪಿ ಬಾಲಸುಬ್ರಹ್ಮಣ್ಯ (ಮರಣೋತ್ತರ)

 • ಡಾ.ಬಿ.ಎಂ.ಹೆಗ್ಡೆ

 • ನರಿಂದರ್ ಸಿಂಗ್ ಕಪನ್ಯಾ (ಮರಣೋತ್ತರ)

 • ಮೌಲಾನಾ ವಾಹಿದುದ್ದಿನ್ ಖಾನ್

 • ಬಿಬಿ ಲಾಲ್

 • ಸುದರ್ಶನ ಸಾಹೋ


ಪದ್ಮ ಭೂಷಣ
 •  ಕೃಷ್ಣ ನಾಯರ್ ಶಾಂತಕುಮಾರಿ ಚಿತ್ರ

 • ತರುಣ್ ಗೊಗೊಯ್ (ಮರಣೋತ್ತರ)

 • ಚಂದ್ರಶೇಖರ ಕಂಬಾರ

 • ಸುಮಿತ್ರಾ ಮಹಾಜನ್

 • ನೃಪೇಂದ್ರ ಮಿಶ್ರಾ

 • ರಾಮವಿಲಾಸ ಪಾಸ್ವಾನ್ (ಮರಣೋತ್ತರ)

 • ಕೇಶುಬಾಯ್ ಪಟೇಲ್ (ಮರಣೋತ್ತರ)

 • ಕಲ್ಬೆ ಸಾದಿಕ್ (ಮರಣೋತ್ತರ)

 • ರಜನಿಕಾಂತ್ ದೇವಿದಾಸ್ ಶ್ರಾಫ್

 • ತಾರಾಲೋಚನ್ ಸಿಂಗ್


Published by:HR Ramesh
First published: