ಭಾರತದಲ್ಲಿ ಮಾರಾಟವಾಗುವ ವಸ್ತುಗಳಿಗೆ ಉತ್ಪಾದನೆಯಾದ ದೇಶದ ಟ್ಯಾಗ್​ ಹಾಕೋದು ಕಡ್ಡಾಯ; ಕೇಂದ್ರದ ಆದೇಶ

ಚೀನಾದ ಜೊತೆ ನಾವು ಸಾಕಷ್ಟು ಒಪ್ಪಂದ ಮಾಡಿಕೊಂಡಿದ್ದೇವೆ. ಹೀಗಾಗಿ ಚೀನಾದಿಂದ ನಾವು ಮಾಡಿಕೊಳ್ಳುತ್ತಿರುವ ಆಮದನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ, ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

news18-kannada
Updated:July 10, 2020, 9:55 AM IST
ಭಾರತದಲ್ಲಿ ಮಾರಾಟವಾಗುವ ವಸ್ತುಗಳಿಗೆ ಉತ್ಪಾದನೆಯಾದ ದೇಶದ ಟ್ಯಾಗ್​ ಹಾಕೋದು ಕಡ್ಡಾಯ; ಕೇಂದ್ರದ ಆದೇಶ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜು.10): ಚೀನಾದ 59 ಆ್ಯಪ್ ಗಳನ್ನು ನಿಷೇಧಿಸುವ ಮೂಲಕ ಚೀನಾ ವಿರುದ್ಧ ಭಾರತ ಆರ್ಥಿಕ ಸಮರ ಸಾರಿತ್ತು. ಈಗ ಅದರ ಮುಂದುವರೆದ ಭಾಗವಾಗಿ ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಉತ್ಪನ್ನಗಳ ಮೇಲೆ ಯಾವ ದೇಶದಲ್ಲಿ ಉತ್ಪದಾನೆಯಾಗಿದೆ ಎನ್ನುವ ಟ್ಯಾಗ್​ ಹಾಕುವುದನ್ನು ಕೇಂಧ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದ್ದು, ಉತ್ಪನ್ನದ ಹೆಸರು, ಪ್ಯಾಕ್​ನಲ್ಲಿ ಉತ್ಪನ್ನ ಎಷ್ಟಿದೆ ಎಂಬುದರ ಪ್ರಮಾಣ, ಉತ್ಪಾದಿಸಿದ ದಿನಾಂಕ, ಎಕ್ಸ್ ಪೆರಿ ಡೇಟ್ ಮತ್ತು ದರಗಳ ಜೊತೆಗೆ ಯಾವ ದೇಶದಲ್ಲಿ ಉತ್ಪದಾನೆ ಮಾಡಲಾಗಿದೆ ಎಂಬುದನ್ನು ಪ್ರಕಟಿಸುವಂತೆ ಸೂಚಿಸಿದೆ.

ಉತ್ಪಾದನೆ ಮಾಡಿದ ದೇಶಗಳ ಮಾಹಿತಿ ಪ್ರಕಟಿಸುವಂತೆ ಕೇಂದ್ರ ನಾಗರಿಕ ಪೂರೈಕೆ ಇಲಾಖೆಯು ಉತ್ಪಾದನಾ ಕಂಪನಿಗಳಿಗೆ ಮತ್ತು ಈ-ಕಾಮರ್ಸ್ ಕಂಪನಿಗಳಿಗೆ ಸೂಚನೆ ನೀಡಿದೆ. ಈ ಆದೇಶ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಮತ್ತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಕೂಡ ಆದೇಶದಲ್ಲಿ ತಿಳಿಸಲಾಗಿದೆ.

ಉತ್ಪನ್ನಗಳ ದೇಶದ ಮೂಲವನ್ನು ಪ್ರದರ್ಶಿಸಬೇಕಾದ ನಿಯಮ ಪಾಲಿಸದಿದ್ದರೆ ಮೊದಲೆರಡು ಸಲ ಬರೀ ದಂಡ ವಿಧಿಸಲಾಗುತ್ತೆ. ಮೂರನೇ ಸಲಕ್ಕೆ ದಂಡ ವಿಧಿಸುವುದರ ಜೊತೆಗೆ ಅಂತಹ ಕಂಪನಿಗಳ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳಲಾಗುತ್ತದೆ. ಮೊದಲ ಸಲ ನಿಯಮ ಉಲ್ಲಂಘನೆ ಮಾಡಿದರೆ 25 ಸಾವಿರ ರೂಪಾಯಿ ದಂಡ, ಎರಡನೇ ಸಲ ನಿಯಮ ಉಲ್ಲಂಘಿಸಿದರೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಮೂರನೇ ಸಲ ನಿಯಮ ಉಲ್ಲಂಘಿಸಿದರೆ 1.5 ಲಕ್ಷ ರೂಪಾಯಿ ದಂಡ ವಿಧಿಸುವುದರ ಜೊತೆಗೆ ಅಂತಹ ಕಂಪನಿಗಳು ಮತ್ತು ಈ-ಕಾಮರ್ಸ್ ಕಂಪನಿಗಳಿಗೆ ಒಂದು ವರ್ಷ ನಿಷೇಧ ಹೇರಲಾಗುತ್ತದೆ ಎಂದು ಕೇಂದ್ರ ನಾಗರಿಕ ಪೂರೈಕೆ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ‌.

ಈ ಕ್ರಮ ಏಕೆ?:

ಚೀನಾದ ಜೊತೆ ನಾವು ಸಾಕಷ್ಟು ಒಪ್ಪಂದ ಮಾಡಿಕೊಂಡಿದ್ದೇವೆ. ಹೀಗಾಗಿ ಚೀನಾದಿಂದ ನಾವು ಮಾಡಿಕೊಳ್ಳುತ್ತಿರುವ ಆಮದನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ, ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ಈ ಮೊದಲು ಯಾವ ದೇಶದಲ್ಲಿ ಉತ್ಪಾದನೆ ಆಗಿದೆ ಎನ್ನುವ ಟ್ಯಾಗ್​ ಅನ್ನು ಕಡ್ಡಾಯವಾಗಿ ಹಾಕಬೇಕು ಎನ್ನುವ ನಿಯಮ ಇರಲಿಲ್ಲ. ಹೀಗಾಗಿ, ಅನೇಕರು ಚೀನಾ ಪ್ರಾಡಕ್ಟ್​ಗಳಿಗೆ ಈ ಟ್ಯಾಗ್​ ಹಾಕುತ್ತಿರಲಿಲ್ಲ. ಇದರಿಂದ ಆ ವಸ್ತುಗಳು ಸುಲಭವಾಗಿ ನಮ್ಮ ದೇಶದಲ್ಲಿ ಮಾರಾಟವಾಗುತ್ತಿದ್ದವು. ಆದರೆ, ಈಗ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎನ್ನುವ ಆಂದೋಲ ಶುರುವಾಗಿದೆ. ಮೇಡ್​ ಇನ್​ ಚೀನಾ ಟ್ಯಾಗ್​ ಕಂಡರೆ ಜನರು ಈ ರೀತಿಯ ಪ್ರಾಡಕ್ಟ್​ಗಳನ್ನು ಕೊಂಡುಕೊಳ್ಳುವುದನ್ನು ನಿಲ್ಲಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.
Published by: Rajesh Duggumane
First published: July 10, 2020, 9:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading