Censor Board: ಸಿನಿ ನಿರ್ಮಾಪಕರಿಗೆ ಸಿಹಿ ಸುದ್ದಿ: ನಿಯಮ ಬದಲಿಸಿದ ಸೆನ್ಸಾರ್​ ಬೋರ್ಡ್​

Censor Board: ಸಂಕಷ್ಟಕ್ಕೆ ಸಿಲುಕಿರುವ ನಿರ್ಮಾಪಕರು ಒಟಿಟಿಯಲ್ಲಿ ತಮ್ಮ ಸಿನಿಮಾಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಆದರೆ ಅವರಿಗೂ ಒಂದು ಕಷ್ಟ ಎದುರಾಗಿದೆ ಅದು ಸೆನ್ಸಾರ್​ ಮಂಡಳಿಯಿಂದ ಪಡೆಯುವ ಪ್ರಮಾಣಪತ್ರ. ಇದು ಸಿಗದೆ ಯಾವ ಸಿನಿಮಾಗಳೂ ಬಿಡುಗಡೆ ಮಾಡುವಂತಿಲ್ಲ. 

Anitha E | news18-kannada
Updated:May 15, 2020, 7:03 AM IST
Censor Board: ಸಿನಿ ನಿರ್ಮಾಪಕರಿಗೆ ಸಿಹಿ ಸುದ್ದಿ: ನಿಯಮ ಬದಲಿಸಿದ ಸೆನ್ಸಾರ್​ ಬೋರ್ಡ್​
ಪ್ರಾತಿನಿಧಿಕ ಚಿತ್ರ
  • Share this:
ಲಾಕ್​ಡೌನ್​ನಿಂದಾಗಿ ಎಲ್ಲ ಸಿನಿ ರಂಗದಲ್ಲೂ ಸಾಕಷ್ಟು ನಷ್ಟವಾಗಿದೆ. ಸಿನಿ ಕಾರ್ಮಿಕರು, ನಿರ್ಮಾಪಕರು ಸೇರಿದಂತೆ ಸಿನಿಮಾಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸಾಲ ಮಾಡಿ ಸಿನಿಮಾ ನಿರ್ಮಿಸಿರುವ ನಿರ್ಮಾಪಕರು ಬಡ್ಡಿ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಸಂಕಷ್ಟಕ್ಕೆ ಸಿಲುಕಿರುವ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಆದರೆ ಅವರಿಗೂ ಒಂದು ಕಷ್ಟ ಎದುರಾಗಿದೆ. ಅದು ಸೆನ್ಸಾರ್​ ಮಂಡಳಿಯಿಂದ ಪಡೆಯುವ ಪ್ರಮಾಣಪತ್ರ. ಇದು ಸಿಗದೆ ಯಾವ ಸಿನಿಮಾಗಳೂ ಬಿಡುಗಡೆ ಮಾಡುವಂತಿಲ್ಲ.

Corona Effect on Sandalwood Stars big budget Films, Corona
ಪ್ರಾತಿನಿಧಿಕ ಚಿತ್ರ


ಆದರೆ ಚಿಕ್ಕಪುಟ್ಟ ನಿರ್ಮಾಪಕರ ಕಷ್ಟಕ್ಕೆ ಸ್ಪಂದಿಸಿರುವ ಸೆನ್ಸಾರ್​ ಮಂಡಳಿ, ಲಾಕ್​ಡೌನ್​ನಲ್ಲಿ ನಿಯಮಗಳನ್ನು ಬದಲಿಸಿದೆಯಂತೆ. ಸದ್ಯಕ್ಕೆ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಬಯಸುವ ನಿರ್ಮಾಪಕರು ತಮ್ಮ ಚಿತ್ರಗಳನ್ನು ಆನ್​ಲೈನ್​ ಮೂಲಕ ಪ್ರದರ್ಶಿಸಿ, ಸೆನ್ಸಾರ್​ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆಯಂತೆ.

due to lock down central board of film certification has changed their rules
ಪ್ರಾತಿನಿಧಿಕ ಚಿತ್ರ


ಸದ್ಯಕ್ಕೆ ಆನ್​ಲೈನ್​ ಮೂಲಕ ಸೆನ್ಸಾರ್ ಕ್ಲಿಯರ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ ಸೆನ್ಸಾರ್​ ಮಂಡಳಿ. ಈ ಮೂಲಕ ಪ್ರಮಾಣಪತ್ರ ಪಡೆದ ಸಿನಿಮಾಗಳನ್ನು ಸುಲಭವಾಗಿ ಒಟಿಟಿ ಮೂಲಕ ಬಿಡುಗಡೆ ಮಾಡಬಹುದಾಗಿದೆ.

due to lock down central board of film certification has changed their rules 

ಇನ್ನು ಸೆನ್ಸಾರ್​ ಮಂಡಳಿಯಿಂದ ಪ್ರಮಾಣಪತ್ರ ಪಡೆದ ಸಿನಿಮಾಗಳನ್ನು ಒಟಿಟಿ ಪ್ಲಾಟ್​ಫಾರಂನಲ್ಲಿ ರಿಲೀಸ್​ ಮಾಡಲು ಸಾಕಷ್ಟು ನಿರ್ಮಾಪಕರು ಮುಂದೆ ಬಂದಿದ್ದಾರೆ. ಅಕ್ಷಯ್​ ಕುಮಾರ್ ನಟನೆಯ ಲಕ್ಷ್ಮಿಬಾಂಬ್​, ಅನುಷ್ಕಾ ಶೆಟ್ಟಿ ಅಭಿನಯದ ನಿಶ್ಯಬ್ಧಂ ಅನ್ನು ಒಟಿಟಿ ಮೂಲಕ ರಿಲೀಸ್​ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

Suhana Khan: ಸೀರೆಯುಟ್ಟ ಕಿಂಗ್​ ಖಾನ್​ ಮಗಳು ಸುಹಾನಾ ಖಾನ್​ ಮನಸ್ಸು ಮುರಿದವರಾರು..? 
First published: May 15, 2020, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading