ಕೊರೋನಾ ಸಾಂಕ್ರಾಮಿಕ ನಾನಾ ಕಾರಣಗಳಿಂದಾಗಿ ದೂರ ಇದ್ದ ಹಲವಾರು ಜನರನ್ನು ತಮ್ಮ ತಮ್ಮ ಕುಟುಂಬದೊಂದಿಗೆ ಒಟ್ಟುಗೂಡಿಸಿದೆ ಎಂದರೆ ತಪ್ಪಾಗಲಾರದು. ಜನರು ಹೆಚ್ಚೂ ಕಡಿಮೆ ಮನೆಯಲ್ಲೇ ಇರುವಂತಾಗಿದ್ದು, ಕುಟುಂಬದವರು ಒಟ್ಟಿಗೆ ಸಮಯ ಕಳೆಯುವಂತಾಗಿದೆ. ಒಟ್ಟಿಗೆ ಊಟ ಮಾಡುವುದು, ಮಾತನಾಡುವುದು, ಟಿವಿ ನೋಡವುದು ಇವೆಲ್ಲ ನಿಜಕ್ಕೂ ಹೆಚ್ಚಾಗಿದೆ. ಒಟ್ಟಾಗಿ ಕುಳಿತು ಊಟ ಮಾಡುವುದು ನಿಜಕ್ಕೂ ಚೆನ್ನಾಗಿರುತ್ತದಲ್ವಾ..? ಕುಟುಂಬದ ಔತಣಕೂಟಗಳು ಎಲ್ಲರನ್ನೂ ಸೆಳೆಯಲು ಉತ್ತಮ ಸಮಯವೇ ಸರಿ. ಆದರೆ, ಇಲ್ಲೊಂದು ವೈರಲ್ ವಿಡಿಯೋ ನೋಡಿದ್ರೆ ನಿಮಗೆ ಒಂದು ಕ್ಷಣ ನಿಜಕ್ಕೂ ಆತಂಕವಾಗುತ್ತದೆ. ಒಟ್ಟಿಗೆ ಮಾತನಾಡುತ್ತಾ ಊಟ ಮಾಡುತ್ತಿದ್ದವರಿಗೆ ದುಸ್ವಪ್ನ ಎದುರಾಗಿದೆ. ಇದ್ದಕ್ಕಿದ್ದಂತೆ ಸೀಲಿಂಗ್ ಫ್ಯಾನ್ ಮೇಲಿಂದ ಕೆಳಕ್ಕೆ ನೇರವಾಗಿ ಕುಟುಂಬದವರು ಊಟ ಮಾಡುತ್ತಾ ಇದ್ದ ಜಾಗಕ್ಕೆ ಬಂದು ಬೀಳುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಿಯೆಟ್ನಾಂನಲ್ಲಿರುವ ಆರು ಮಂದಿಯ ಕುಟುಂಬವು ಮಾತನಾಡುತ್ತಾ ಊಟವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಆದರೆ, ಸೀಲಿಂಗ್ ಫ್ಯಾನ್ ಇದ್ದಕ್ಕಿದ್ದಂತೆ ಅವರ ಮಧ್ಯದಲ್ಲಿ ಬಿದ್ದ ನಂತರ ಏನಾಯಿತು ಎಂಬುದೇ ಆಘಾತಕಾರಿ.
ಒಂದು ನಿಮಿಷದ ಈ ಚಿಕ್ಕ ವಿಡಿಯೋ ಕ್ಲಿಪ್‌ನಲ್ಲಿ 6 ಜನರ ಕುಟುಂಬ ಒಟ್ಟಿಗೆ ಚಾಪೆ ಮೇಲೆ ಕುಳಿತು ತಮ್ಮ ಭೋಜನವನ್ನು ಆನಂದಿಸುತ್ತಿದ್ದರು. ವಿಡಿಯೋ ಮುಂದುವರಿದಂತೆ ಸೀಲಿಂಗ್ ಫ್ಯಾನ್ ಇದ್ದಕ್ಕಿದ್ದಂತೆ ಮಧ್ಯದಲ್ಲಿ ಬಿದ್ದಿದೆ. ಅದರಿಂದ ಊಟಕ್ಕೆ ಅಡಚಣೆಯಾಗಿದೆ ಮತ್ತು ತಾಯಿ ಮಗುವಿನ ಮೆಲೆ ಫ್ಯಾನ್ ಬಿದ್ದ ಕಾರಣ ಅವನ ಕಡೆಗೆ ಹೋದರು. ಆದರೆ, ಅದೃಷ್ಟವಶಾತ್, ಮಗು ಸೇರಿದಂತೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಅಲ್ಲದೆ, ಉತ್ತಮ ಭಾಗವೆಂದರೆ ಕುಟುಂಬ ಈ ಸಮಯದಲ್ಲೂ ಶಾಂತ ಮತ್ತು ಸಂಯೋಜಿತ ನಡವಳಿಕೆ ತೋರುತ್ತಾರೆ.
ಈ ವಿಡಿಯೋವನ್ನು ನೀವೇ ಇಲ್ಲಿ ನೋಡಿ...
ಈ ವೈರಲ್ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ ವೈರಲ್ ಹಾಗ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಮತ್ತು ಇದನ್ನು 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲಾಗಿದೆ. ಅಲ್ಲದೆ, ಸುಮಾರು 500 ಜನರು ಇದಕ್ಕೆ ಲೈಕ್ ಕೊಟ್ಟಿದ್ದರೆ, ನೂರಾರು ಜನ ಕಮೆಂಟ್ ಮಾಡಿದ್ದಾರೆ. ಕುಟುಂಬವು ಯಾವುದೇ ಅಪಾಯವಿಲ್ಲದೆ ಪಾರಾಗಿರುವುದಕ್ಕೆ ನೆಟ್ಟಿಗರು ನಿರಾಳರಾಗಿದ್ದಾರೆ. ಮನೆಯೊಂದರ ಸಿಸಿ ಕ್ಯಾಮರಾ ವಿಡಿಯೋ ಇದಾಗಿದ್ದು, ಅದನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: Happy Birthday Vihaan: ಮತ್ತೊಂದು ಸಿನಿಮಾದಲ್ಲಿ ಗಣೇಶ್ ಮಗ ವಿಹಾನ್: ರಿಲೀಸ್ ಆಯ್ತು ಪೋಸ್ಟರ್..!
"ಅದು ಭಯಾನಕವಾಗಿದೆ..! ಅವರು ಬಹುತೇಕ ಅಪಾಯಕ್ಕೆ ಸಿಲುಕಿದ್ದರು. ಅದೃಷ್ಟವಂತ ಜನರು" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. "ಅವರು ಸುರಕ್ಷಿತವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Mysuru Gang Rape: ಮೈಸೂರು ಅತ್ಯಾಚಾರ ಪ್ರಕರಣ: ಆಕ್ರೋಶ ವ್ಯಕ್ತಪಡಿಸಿದ ನಟಿಯರಾದ ರಮ್ಯಾ-ಶ್ರುತಿ
ಹಾಗೆ, ''ಮೂವರ ನಡುವೆ ಫ್ಯಾನ್ ಬಿದ್ದಿದೆ. ಆದರೆ, ಯಾರಿಗೂ ಏನೂ ಆಗಿಲ್ಲ. ಇದು ಪವಾಡ'' ಎಂದೂ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ''ಅದು ನಿಜಕ್ಕೂ ಅದೃಷ್ಟವಂತ ಎಸ್ಕೇಪ್'' ಎಂದೂ ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಅವರು ಸುರಕ್ಷಿತವಾಗಿರುವುದು, ನನಗೆ ನಿಜಕ್ಕೂ ತುಂಬಾ ಸಂತಸವಾಗಿದೆ'' ಎಂದೂ ನೆಟ್ಟಿಗರೊಬ್ಬರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನಿಜಕ್ಕೂ ಭಯಾನಕ, ಅಲ್ಲವೇ..?
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ