Union Budget 2019: ಗುರುವಾರ ಸಂಸತ್​​ನಲ್ಲಿ ಕೇಂದ್ರ ಆರ್ಥಿಕ ಸಮೀಕ್ಷೆ ಮಂಡನೆ

2018ರಲ್ಲಿ ಕೃಷ್ಣಮೂರ್ತಿ ಸುಬ್ರಮಣಿಯನ್‌ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿದ್ದರು. ಈ ಮುನ್ನ ಇದೇ ಸ್ಥಾನದಲ್ಲಿದ್ದ ಅರವಿಂದ್‌ ಸುಬ್ರಮಣಿಯನ್ ಅವರು, ತಮ್ಮ ಕೌಟುಂಬಿಕ ಸಮಸ್ಯೆಗಳ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿದಿದ್ದರು.

Ganesh Nachikethu
Updated:July 2, 2019, 5:11 PM IST
Union Budget 2019: ಗುರುವಾರ ಸಂಸತ್​​ನಲ್ಲಿ ಕೇಂದ್ರ ಆರ್ಥಿಕ ಸಮೀಕ್ಷೆ ಮಂಡನೆ
ಪ್ರಧಾನಿ ಮೋದಿ
Ganesh Nachikethu
Updated: July 2, 2019, 5:11 PM IST
ನವದೆಹಲಿ(ಜೂನ್​​​.02): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆಯನ್ನು, ಇದೇ ಗುರುವಾರ(ಜು.04) ಸಂಸತ್​​ನಲ್ಲಿ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮಂಡಿಸಲಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಬಜೆಟ್ ಮಂಡನೆಗೂ ಮುನ್ನವೇ ಈ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ.

ಈ ಬಗ್ಗೆ ಖುದ್ದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು, ಟ್ವೀಟ್​ ಮಾಡಿದ್ದಾರೆ. "ಗುರುವಾರ ನನ್ನ ಪಾಲಿಗೆ ಭಾರೀ ಸಂತಸದ ದಿನ. ಎರಡನೇ ಅವಧಿಗೆ ಕೇಂದ್ರದಲ್ಲಿ ಗದ್ದುಗೆ ಹಿಡಿದಿರುವ ಹೊಸ ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಲಿದ್ದೇನೆ. ಇದಕ್ಕಾಗಿ ತುಂಬಾ ಉತ್ಸಾಹದಿಂದ ಎದುರು ನೊಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.



ಆರ್ಥಿಕ ಸಮೀಕ್ಷೆ ಎಂದರೇನು?: ಪ್ರತಿವರ್ಷ ಬಜೆಟ್‌ ಮಂಡಿಸುವ ಒಂದು ದಿನದ ಮುನ್ನಾ ಆರ್ಥಿಕ ಸಮೀಕ್ಷೆ ಮಂಡಿಸುವುದು ಕೇಂದ್ರದ ಸಂಪ್ರದಾಯ. ಪ್ರಸಕ್ತ ಆರ್ಥಿಕ ವರ್ಷದ ಆಗುಹೋಗುಗಳು ಮತ್ತು ಮುಂ​ದಿನ ವರ್ಷದ ಆರ್ಥಿಕತೆ ಸಾಗುವ ದಿಕ್ಸೂಚಿಯೇ ಈ ಆರ್ಥಿಕ ಸಮೀಕ್ಷೆ. ಹೆಸರೇ ಸೂಚಿಸುವಂತೆ ದೇಶದ ಆರ್ಥಿಕತೆಯ ಸಮೀಕ್ಷೆ ಇದು. ಸಾಮಾನ್ಯವಾಗಿ ಆರ್ಥಿಕ ಸಮೀಕ್ಷೆ​ಯನ್ನು ಬಜೆಟ್‌ ಹಿಂದಿನ ದಿನ ಮಂಡಿ­ಸ­ಲಾಗುತ್ತದೆ. ಈ ಸಮೀಕ್ಷೆಯು ದೇಶದ ಆರ್ಥಿಕತೆಯ ಅಧಿಕೃತ ವರದಿ.

ಇದನ್ನೂ ಓದಿ: ಪಕ್ಷ ಮರು ಸಂಘಟನೆಗೆ ನೀವು ಸಂಪೂರ್ಣ ಸ್ವತಂತ್ರರು; ರಾಹುಲ್​ಗೆ ಕಾಂಗ್ರೆಸ್​​ ಮುಖ್ಯಮಂತ್ರಿಗಳು ಕಿವಿಮಾತು

ದೇಶದ ಪ್ರಸಕ್ತ ವರ್ಷದ ಆರ್ಥಿಕತೆಯ ಸಂಪೂರ್ಣ ವಿವರಗಳನ್ನು ಈ ಹೊತ್ತಿಗೆ ಹೊಂದಿರುತ್ತದೆ. ಜತೆಗೆ ಆರ್ಥಿಕತೆ ಅಭಿವೃದ್ಧಿ ಹೊಂದಬಹುದಾದ ಅವಕಾಶಗಳು ಮತ್ತು ಈ ಅಭಿವೃದ್ಧಿ ಹೊಂದುವ ಹಾದಿಯಲ್ಲಿ ಎದುರಿಸಬೇಕಾ​ಗುವ ಸವಾಲುಗಳನ್ನೊಳ​ಗೊಂಡ ಸಮಗ್ರ ಮಾಹಿತಿಯೂ ಇರುತ್ತದೆ. ದೇಶದ ವಿವಿಧ ಆರ್ಥಿಕ ವಲಯವಾರು ಏರಿಳಿತಗಳ ಪರಾಮರ್ಶೆ ಮತ್ತು ಸುಧಾರ​ಣೆಗೆ ಅಗತ್ಯವಿರುವ ಪರಿಹಾರೋ​ಪಾಯಗಳನ್ನು ಸೂಚಿಸ​ಲಾಗಿರುತ್ತದೆ.

2018ರಲ್ಲಿ ಕೃಷ್ಣಮೂರ್ತಿ ಸುಬ್ರಮಣಿಯನ್‌ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿದ್ದರು. ಈ ಮುನ್ನ ಇದೇ ಸ್ಥಾನದಲ್ಲಿದ್ದ ಅರವಿಂದ್‌ ಸುಬ್ರಮಣಿಯನ್ ಅವರು, ತಮ್ಮ ಕೌಟುಂಬಿಕ ಸಮಸ್ಯೆಗಳ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿದಿದ್ದರು.
-------------
First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...