ಜೆಎನ್​ಯು ಗಲಭೆ: ಜ.3ರಂದು ಸಿಸಿಟಿವಿ, ಸರ್ವರ್​ ರೂಮ್​ ಮೇಲೆ ದಾಳಿಯಾಗಿಲ್ಲ; ಆರ್​ಟಿಐ ಮಾಹಿತಿಯಲ್ಲಿ ಬಹಿರಂಗ

JNU Violence: ಘಟನೆ ಕುರಿತು ಮಾತನಾಡಿರುವ ವಿವಿ ಉಪಕುಲಪತಿ ಸರ್ವರ್​ ರೂಂನಲ್ಲಿ ಹಿಂದಿನ ದಿನ ನಡೆದ ಘಟನೆಗೂ ಜನವರಿ 5ರಂದು ಆದ ದಾಳಿಗೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

ಕ್ಯಾಂಪಸ್​ ಚಿತ್ರಣ

ಕ್ಯಾಂಪಸ್​ ಚಿತ್ರಣ

 • Share this:
  ನವದೆಹಲಿ (ಜ.22): ಜೆಎನ್​ಯು ಕ್ಯಾಂಪಸ್​ನಲ್ಲಿ ಜನವರಿ 5ರಂದು ದಾಳಿ ಘಟನೆ ಕುರಿತು ಆರ್​ಟಿಐ ಅಡಿ ಸಲ್ಲಿಕೆಯಾಗಿರುವ ಮಾಹಿತಿಗೂ ಹಾಗೂ ಎಫ್​ಐಆರ್​ನಲ್ಲಿ ದಾಖಲಾಗಿರುವ ದೂರಿಗೂ ವ್ಯತ್ಯಾಸ ಕಂಡು ಬಂದಿದ್ದು, ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

  ಜವಹಾರ್​ ಲಾಲ್​ ವಿಶ್ವವಿದ್ಯಾಲಯದಲ್ಲಿ ಜನವರಿ 3ರಂದು ನಡೆದ ದಾಳಿ ವೇಳೆ ವಿವಿಯ ಬಯೋಮೆಟ್ರಿಕ್​ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾದ ಸರ್ವರ್​ ರೂಂಗೆ ಯಾವುದೇ ಹಾನಿಯಾಗಿರಲಿಲ್ಲ ಎಂದು ಮಾಹಿತಿ ಹಕ್ಕು ಮಾಹಿತಿಯಲ್ಲಿ ಬಹಿರಂಗವಾಗಿದೆ,

  ಜ. 5ರಂದು ವಿದ್ಯಾರ್ಥಿಗಳ ಗುಂಪು ನಡೆಸಿದ ದಾಳಿ ವೇಳೆ ವಿವಿಯ ಮಾಹಿತಿ ವ್ಯವಸ್ಥೆ ಕಚೇರಿ ಬಾಗಿಲು ಮುರಿದು ಒಳನುಗ್ಗಿದ ವಿದ್ಯಾರ್ಥಿಗಳು, ಸರ್ವರ್​ ಹಾಗೂ ಬಯೋಮೆಟ್ರಿಕ್​ ವ್ಯವಸ್ಥೆಯನ್ನು ಹಾಳು ಮಾಡಿದ್ದರು ಎಂದು ವಿಶ್ವವಿದ್ಯಾಲಯದಿಂದ ಎಫ್​ಐಆರ್​ ದಾಖಲಿಸಲಾಗಿತ್ತು.

  ಈ ಧ್ವಂಸ ಪ್ರಕರಣದ ಮಾಹಿತಿ ಕೋರಿ ಲೈ ಫ್​ ಮತ್ತು ಲಿಬರ್ಟಿ ಕಾರ್ಯಕರ್ತರು ಆರ್​ಟಿಐ ಸಲ್ಲಿಸಿದ್ದರು. ಈ ಆರ್​ಟಿಐಗೆ ಪ್ರತಿಕ್ರಿಯಿಸಿರುವ ಜೆಎನ್​ಯು ಆಡಳಿತ ಮಂಡಳಿ, ಜ.3ರಂದೇ ವಿದ್ಯುತ್​ ಸಂಚಾರದಲ್ಲಿನ ವ್ಯತ್ಯಾಯದಿಂದ ಮಾಹಿತಿ ಕಚೇರಿ ಮತ್ತು ಬಯೋಮೆಟ್ರಿಕ್​ ವ್ಯವಸ್ಥೆ ಹಾಳಾಗಿತ್ತು ಎಂದು ಇದಕ್ಕೆ ಉತ್ತರಿಸಿದೆ.

  ಇದೇ ವೇಳೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾದ ಸಮಯದಲ್ಲಿನ ಜೆಎನ್​ಯು ಕ್ಯಾಂಪಸ್​ನ ಉತ್ತರ ಮತ್ತು ಮುಖ್ಯ ಗೇಟ್​ಗಳ ನಿರಂತರ  ಸಿಸಿಟಿವಿ ದೃಶ್ಯಾವಳಿ ಕೂಡ ಇಲ್ಲ ಎಂದು ಉತ್ತರಿಸಿದ್ದಾರೆ.

  ಜನವರಿ 5ರಂದು ವಿವಿಯ ಕ್ಯಾಂಪಸ್​ನಲ್ಲಿ ದಾಳಿ ನಡೆಸಿದ ವಿದ್ಯಾರ್ಥಿಗಳ ಗುಂಪು ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಹಾಗೂ ಬಯೋಮೆಟ್ರಿಕ್​ ವ್ಯವಸ್ಥೆಯನ್ನು ಹಾಳು ಮಾಡಿದ್ದರು ಎಂದು ಮತ್ತೊಂದು ದೂರು ದಾಖಲಾಗಿದೆ.

  ಘಟನೆ ಕುರಿತು ವಿವಿಯಲ್ಲಿ ನಡೆಸಲಾಗಿರುವ ವಿಧ್ವಂಸಕ ಕೃತ್ಯ ಹಾಗೂ ಆರ್​ಟಿಐ ಮಾಹಿತಿ ಕೇಳಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಅನೇಕ ವ್ಯತ್ಯಾಸಗಳು ಕಂಡು ಬಂದಿದೆ.

  ಘಟನೆ ಕುರಿತು ಮಾತನಾಡಿರುವ ವಿವಿ ಉಪಕುಲಪತಿ ಸರ್ವರ್​ ರೂಂನಲ್ಲಿ ಹಿಂದಿನ ದಿನ ನಡೆದ ಘಟನೆಗೂ ಜನವರಿ 5ರಂದು ಆದ ದಾಳಿಗೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

  ಇದನ್ನು ಓದಿ: ಆರು ಗಂಟೆಗಳ ಕಾಲ ಕಾದು, ಕಡೆಗೂ ಕೊನೆ ದಿನ ನಾಮಪತ್ರ ಸಲ್ಲಿಸಿದ ಮುಖ್ಯಮಂತ್ರಿ ಕೇಜ್ರಿವಾಲ್! ಇನ್ನು ಅಸಲಿ ಆಟ ಶುರು

  ಜನವರಿ 4ರಂದು ಕ್ಯಾಂಪಸ್​ಗೆ ಬಂದ ಗುಂಪು, ಎಡಪಂಥೀಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಬಯೋಮೆಟ್ರಿಕ್​ ವ್ಯವಸ್ಥೆ ಹಾಳು ಮಾಡಿದರಿಂದ ಚಳಿಗಾಲದ ಸೆಮಿಸ್ಟರ್​ ನೋಂದಣಿಗೆ ಕೂಡ ಹಾನಿಯಾಗಿದೆ ಎಂದರು.

  ಜನವರಿ 5ರಂದು ಕ್ಯಾಂಪಸ್​ ಒಳನುಗ್ಗಿದ ಶಸ್ತ್ರ ಸಜ್ಜಿತ ಮುಸುಕುಧಾರಿಗಳ ಗುಂಪು, ವಿದ್ಯಾರ್ಥಿ ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸುವುದರ ಜೊತೆ ವಿವಿ ಆಸ್ತಿಪಾಸ್ತಿಗೂ ಹಾನಿ ಮಾಡಿದ್ದರು.

  (ವರದಿ: ನಿತೀಶ್​ ಕಶ್ಯಪ್​)
  First published: