• Home
  • »
  • News
  • »
  • national-international
  • »
  • Morbi Bridge: ಮೊರ್ಬಿ ಸೇತುವೆ ದುರಂತದ ಸಿಸಿಟಿವಿ ದೃಶ್ಯಾವಳಿ ವೈರಲ್, ತರಗೆಲೆಯಂತೆ ಉದುರಿದ ನೂರಾರು ಮಂದಿ!

Morbi Bridge: ಮೊರ್ಬಿ ಸೇತುವೆ ದುರಂತದ ಸಿಸಿಟಿವಿ ದೃಶ್ಯಾವಳಿ ವೈರಲ್, ತರಗೆಲೆಯಂತೆ ಉದುರಿದ ನೂರಾರು ಮಂದಿ!

ಸೇತುವೆ ಕುಸಿದು ಬಿದ್ದ ಸಿಸಿಟಿವಿ ದೃಶ್ಯ

ಸೇತುವೆ ಕುಸಿದು ಬಿದ್ದ ಸಿಸಿಟಿವಿ ದೃಶ್ಯ

ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಕೇಬಲ್ ತೂಗು ಸೇತುವೆ ಕುಸಿತದ ಅಪಘಾತದ ಸಿಸಿಟಿವಿ ದೃಶ್ಯಾವಳಿ ಭಾನುವಾರ ಸಂಜೆ ಹೊರಬಿದ್ದಿದೆ. ಸೇತುವೆಯ ಮೇಲೆ ಜನರು ಆರಾಮವಾಗಿ ನಿಂತಿರುವುದನ್ನು ಕಾಣಬಹುದು. ಇದು ತೂಗಾಡುವ ಸೇತುವೆಯಾಗಿದ್ದರಿಂದ, ಉಯ್ಯಾಲೆಯಂತಹ ಫೀಲ್ ನೀಡಿದ್ದರಿಂದ, ಕೆಲವರು ಅದನ್ನು ಚಲಿಸುತ್ತಿದ್ದಾರೆ. ಆಗ ಸೇತುವೆಯ ತಂತಿಗಳು ಒಡೆದು ಕ್ಷಣಾರ್ಧದಲ್ಲಿ ಸೇತುವೆ ಮೇಲೆ ನಿಂತಿದ್ದವರು ಕೆಳಗೆ ಹರಿಯುವ ಮಚ್ಚು ನದಿಗೆ ಬೀಳುತ್ತಾರೆ.

ಮುಂದೆ ಓದಿ ...
  • News18 Kannada
  • Last Updated :
  • Gujarat, India
  • Share this:

ಅಹಮದಾಬಾದ್(ಅ.31): ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ (Morbi Bridge) ಕೇಬಲ್ ತೂಗು ಸೇತುವೆ ಕುಸಿತದ ಅಪಘಾತದ ಸಿಸಿಟಿವಿ ದೃಶ್ಯಾವಳಿ (CCTV Footage) ಭಾನುವಾರ ಸಂಜೆ ಹೊರಬಿದ್ದಿದೆ. ಸೇತುವೆಯ ಮೇಲೆ ಜನರು ಆರಾಮವಾಗಿ ನಿಂತಿರುವುದನ್ನು ಕಾಣಬಹುದು. ಇದು ತೂಗಾಡುವ ಸೇತುವೆಯಾಗಿದ್ದರಿಂದ, ಉಯ್ಯಾಲೆಯಂತಹ ಫೀಲ್ ನೀಡಿದ್ದರಿಂದ, ಕೆಲವರು ಅದನ್ನು ಚಲಿಸುತ್ತಿದ್ದಾರೆ. ಆಗ ಸೇತುವೆಯ ತಂತಿಗಳು ಒಡೆದು ಕ್ಷಣಾರ್ಧದಲ್ಲಿ ಸೇತುವೆ ಮೇಲೆ ನಿಂತಿದ್ದವರು ಕೆಳಗೆ ಹರಿಯುವ ಮಚ್ಚು ನದಿಗೆ ಬೀಳುತ್ತಾರೆ. ಈ ಸಿಸಿಟಿವಿ ದೃಶ್ಯಾವಳಿಯಲ್ಲಿ, ಕೆಲವರು ನದಿಯಿಂದ (Gujarat) ಈಜಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಅಪಘಾತದಲ್ಲಿ 141 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಎರಡು ಡಜನ್‌ಗೂ ಹೆಚ್ಚು ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ:Viral Video: ಅಪ್ಪ ಕಳಿಸಿದ ಪೋಸ್ಟ್​ ಕಾರ್ಡ್​ ಬೆಲೆ ಸರಿಗಟ್ಟೋ ಯಾವ ವಸ್ತುವೂ ಇಲ್ಲ! ಭಾವುಕ ವಿಡಿಯೋ ನೋಡಿ


ಈ ಸೇತುವೆಯನ್ನು ದುರಸ್ತಿಗಾಗಿ 7 ತಿಂಗಳ ಕಾಲ ಮುಚ್ಚಿದ ನಂತರ ಅಕ್ಟೋಬರ್ 26 ರಂದು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಆದರೆ ಮರು ಆರಂಭವಾದ 4 ದಿನಗಳ ಬೆನ್ನಲ್ಲೇ ದೊಡ್ಡ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಸೇತುವೆಯನ್ನು ದುರಸ್ತಿ ಮಾಡುವ ಮತ್ತು ನಿರ್ವಹಿಸುವ ಒರೆವಾ ಕಂಪನಿಯ ವಿರುದ್ಧ ಐಪಿಸಿಯ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.


ಒಂಭತ್ತು ಮಂದಿ ಬಂಧನ


ಮೊರ್ಬಿ ಪೊಲೀಸರು ಕಂಪನಿಯ 9 ಉದ್ಯೋಗಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ 2 ವ್ಯವಸ್ಥಾಪಕರು, 2 ಟಿಕೆಟ್ ಗುಮಾಸ್ತರು, 3 ಭದ್ರತಾ ಸಿಬ್ಬಂದಿ ಮತ್ತು 2 ದುರಸ್ತಿ ಗುತ್ತಿಗೆದಾರರು ಸೇರಿದ್ದಾರೆ. ಗುಜರಾತ್ ಎಟಿಎಸ್, ರಾಜ್ಯ ಗುಪ್ತಚರ ಇಲಾಖೆ ಮತ್ತು ಮೊರ್ಬಿ ಪೊಲೀಸರು ಹಲವೆಡೆ ದಾಳಿ ನಡೆಸಿ ಅವರನ್ನು ಹಿಡಿದಿದ್ದಾರೆ. ಎಲ್ಲಾ 9 ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304, 114, 308 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಂಜೆ ವೇಳೆಗೆ ಬಂಧಿಸುವ ಸಾಧ್ಯತೆ ಇದೆ.



ಈ ಐತಿಹಾಸಿಕ ಸೇತುವೆಯ ದುರಸ್ತಿ ಮತ್ತು ನಿರ್ವಹಣೆಯ ಟೆಂಡರ್ ಅನ್ನು ಒರೆವಾ ಎಂಬ ಕಂಪನಿ ಇತ್ತೀಚೆಗೆ ಸ್ವೀಕರಿಸಿದೆ. ಟೆಂಡರ್‌ನ ನಿಯಮಗಳ ಪ್ರಕಾರ, ಕಂಪನಿಯು ಸೇತುವೆಯನ್ನು ದುರಸ್ತಿ ಮಾಡಿದ ನಂತರ ಮುಂದಿನ 15 ವರ್ಷಗಳವರೆಗೆ ನಿರ್ವಹಿಸಬೇಕಿತ್ತು.


ಇದನ್ನೂ ಓದಿ: Mango Rate: ಒಂದು ಕೆಜಿ ಮಾವಿನ ಹಣ್ಣಿಗೆ 2.70 ಲಕ್ಷ! ಎಲ್ಲಿ ಸಿಗುತ್ತೆ ಈ ಮಾವು?


ವಿಶೇಷ ತನಿಖಾ ತಂಡವನ್ನು ರಚನೆ


ಮೊರ್ಬಿ ಸೇತುವೆ ಅಪಘಾತದ ತನಿಖೆಗಾಗಿ ಗುಜರಾತ್ ಸರ್ಕಾರ 5 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಐದು ಸದಸ್ಯರ ತಂಡದಲ್ಲಿ ಆರ್ & ಬಿ ಕಾರ್ಯದರ್ಶಿ ಸಂದೀಪ್ ವಾಸವ, ಐಎಎಸ್ ರಾಜ್‌ಕುಮಾರ್ ಬೇನಿವಾಲ್, ಐಪಿಎಸ್ ಸುಭಾಷ್ ತ್ರಿವೇದಿ, ಮುಖ್ಯ ಇಂಜಿನಿಯರ್ ಕೆಎಂ ಪಟೇಲ್ ಜೊತೆಗೆ ಡಾ.ಗೋಪಾಲ್ ಟ್ಯಾಂಕ್ ಅವರನ್ನು ಇರಿಸಲಾಗಿದೆ. ಈ ವಿಶೇಷ ತನಿಖಾ ತಂಡ ಅಪಘಾತದ ಕಾರಣವನ್ನು ಪತ್ತೆ ಮಾಡುತ್ತದೆ. 43 ವರ್ಷಗಳ ನಂತರ ಮೊರ್ಬಿಯ ಇತಿಹಾಸದಲ್ಲಿ ಇದು ಎರಡನೇ ದೊಡ್ಡ ಅಪಘಾತವಾಗಿದೆ. ಇದಕ್ಕೂ ಮೊದಲು 1979 ರಲ್ಲಿ, ಆಗಸ್ಟ್ 11 ರಂದು, ಮಚ್ಚು ನದಿಯ ಅಣೆಕಟ್ಟಿನ ಕುಸಿತದಿಂದಾಗಿ ದೊಡ್ಡ ಅಪಘಾತ ಸಂಭವಿಸಿತ್ತು, ಇದರಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

Published by:Precilla Olivia Dias
First published: