ಈ ಪ್ರಪಂಚದಲ್ಲಿ ತರ್ಕಕ್ಕೆ ನಿಲುಕದ, ವಿಜ್ಞಾನಕ್ಕೂ ಎಟುಕದ ಅದೆಷ್ಟೋ ಸಂಗತಿಗಳು ಇವೆ. ಇಂಥ ಸಂಗತಿಗಳನ್ನು ಅಗೋಚರ ಶಕ್ತಿ, ಭೂತ ಕಾಟ ಅಂತೆಲ್ಲಾ ಅನ್ನುತ್ತಾರೆ. ಎಷ್ಟು ನಂಬಬಾರದು ಅಂದುಕೊಂಡರೂ ಕೆಲವೊಂದು ಘಟನೆಗಳು ನಂಬುವಂತೆ ಮಾಡುತ್ತವೆ. ಇಲ್ಲಿ ಆಗಿರುವುದು ಅದೇ. ಯುವಕನೊಬ್ಬ ತನ್ನ ಅನುಭವಕ್ಕೆ ಬಂದ ಅಗೋಚರ ಸಂಗತಿಗಳ ಬೆನ್ನು ಹತ್ತಿ ಹೋಗಿದ್ದಾನೆ. ನ್ಯೂ ಯಾರ್ಕ್ ನಗರದಲ್ಲಿ ಯುವಕ ಒಬ್ಬನೇ ಒಂದು ಕೋಣೆಯುಳ್ಳ ಮನೆಯಲ್ಲಿ ವಾಸಿಸುತ್ತಿದ್ದ. ಕ್ರಮೇಣ ಮನೆಯಲ್ಲಿನ ಚಲನವಲನಗಳ ಬಗ್ಗೆ ಅನುಮಾನ ಬರುಲು ಶುರುವಾಯಿತು.
ಒಬ್ಬಂಟಿಯಾಗಿ ಮನೆಯಲ್ಲಿದ್ದಾಗ ಇನ್ಯಾರೋ ಮನೆಯಲ್ಲಿ ಇದ್ದಾರೆ ಅನಿಸತೊಡಗಿತು. ಎಲ್ಲೋ ಭ್ರಮೆ ಇರಬೇಕು ಎಂದು ಯುವಕ ಸುಮ್ಮನಾಗಿದ್ದ. ಕೆಲ ದಿನಗಳ ನಂತರ ಅಡುಗೆ ಮನೆಯಲ್ಲಿದ್ದ ಆಹಾರ ಪದಾರ್ಥಗಳು ಕಾಣೆಯಾಗಲಾರಂಭಿಸಿದವು. ಅಡುಗೆ ಮನೆಯಲ್ಲಿ ರಾತ್ರಿ ಇರಿಸಿದ್ದ ವಸ್ತುಗಳ ಸ್ಥಳ ಬದಲಾಗಿರುತ್ತಿತ್ತು. ತಿಂಡಿಗಳು ಮಾಯವಾಗುತ್ತಿದ್ದವು. ಅಡುಗೆ ಮನೆಯ ಚಟುವಟಿಗಳು ನಿಗೂಢವಾಗುತ್ತಾ ಹೋದವು. ಬೇಡವೆಂದರೂ ಯುವಕನಿಗೆ ಅನುಮಾನಗಳು ತಲೆ ಕೊರಿಯತೊಡಗಿದವು.
ಪರೀಕ್ಷಿಸಲೆಂದೇ ಅಡುಗೆ ಮನೆಯಲ್ಲಿ ಕೆಲ ವಸ್ತುಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಇರಿಸಿ ಮಲಗುತ್ತಿದ್ದ. ಬೆಳಗ್ಗೆ ಎದ್ದು ನೋಡಿದರೆ ವಸ್ತುಗಳ ಸ್ಥಳ ಬದಲಾವಣೆ ಆಗಿರುವುದು ಪತ್ತೆಯಾಗಿತ್ತು. ಇದರಿಂದ ಬೆಚ್ಚಿದ ಯುವಕ ದೆವ್ವ, ಭೂತ ಇರಬೇಕು ಎಂದು ಶಂಕಿಸಲಾರಂಭಿಸಿದ. ಗೆಳೆಯರೊಂದಿಗೆ ತನ್ನ ಮನೆಯಲ್ಲಿ ಆಗುತ್ತಿರುವ ನಿಗೂಢ ಸಂಗತಿಗಳನ್ನು ಹಂಚಿಕೊಂಡಿದ್ದ. ಕೊನೆಗೆ ಗೆಳೆಯನೊಬ್ಬನ ಸಲಹೆಯಂತೆ ಅಡುಗೆ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದ. ಬೆಳಗ್ಗೆ ಎದ್ದು ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯ ನೋಡಿದವನಿಗೆ ಶಾಕ್ ಕಾದಿತ್ತು.
ಇದನ್ನೂ ಓದಿ: ಸಣ್ಣಗಾದ ಖುಷಿಯಲ್ಲಿ ಬೆತ್ತಲೆ ಫೋಟೋ ಕಳುಹಿಸಿದ ಮಹಿಳೆ.. ಟ್ರೈನರ್ ಪಾಡು ಫುಲ್ ಕಾಮಿಡಿ!
ಯುವತಿಯೊಬ್ಬಳು ಅಡುಗೆ ಮನೆಯಲ್ಲಿ ಓಡಾಡುತ್ತಿದ್ದ ದೃಶ್ಯ ಸೆರೆಯಾಗಿತ್ತು. ಎದೆ ಹೊಡೆದು ಹೋಗುವಷ್ಟು ಹೆದರಿಕೊಂಡ ಯುವಕ ಗೆಳೆಯನ ಮನೆಗೆ ಹೋಗಿದ್ದಾನೆ. ಧೈರ್ಯ ಮಾಡಿ ವಿಡಿಯೋವನ್ನು ಕೂಲಂಕುಷವಾಗಿ ನೋಡಿದ್ದಾರೆ. ಆಗ ಅಸಲಿ ಸಂಗತಿ ಬಯಲಾಗಿದೆ. ಯುವಕನ ಮನೆಯಲ್ಲಿ ಆತನಿಗೆ ತಿಳಿಯದಂತೆ ಮಹಿಳೆಯೊಬ್ಬರು ವಾಸಿಸುತ್ತಿರುವುದು ಗೊತ್ತಾಗಿದೆ. ಅಡುಗೆ ಮನೆಯಲ್ಲಿರುವ ಕಬೋರ್ಡ್ನಲ್ಲಿ ಅವಿತು ಕುಳಿತ್ತಿರುತ್ತಿದ್ದ ಮಹಿಳೆ ರಾತ್ರಿ ವೇಳೆ ಅಡುಗೆ ಮನೆಯಲ್ಲಿರುವ ಆಹಾರ ಪದಾರ್ಥಗಳನ್ನು ಸೇವಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಯುವಕ ಮಲಗಿದ ಮೇಲೆ ಕಬೋರ್ಡ್ನಿಂದ ಹೊರ ಬರುತ್ತಿದ್ದ ಮಹಿಳೆ ಬೇಕಾದನ್ನು ತಿಂದು, ವಾಷ್ ಬೇಷನ್ನಲ್ಲಿ ಮೂತ್ರ ವಿಸರ್ಜಿಸುತ್ತಿದ್ದಳು. ವಿಡಿಯೋದಲ್ಲಿರುವ ಮಹಿಳೆ ದೆವ್ವವಲ್ಲ ಎಂದು ಯುವಕನಿಗೆ ಖಾತರಿಯಾಗುತ್ತಿದಂತೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಮಹಿಳಾ ಪೊಲೀಸರು ಕಬೋರ್ಡ್ನಲ್ಲಿ ಅವಿತು ಕುಳಿತಿದ್ದ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ 2 ವಾರಗಳಿಂದ ಮನೆಯ ಕಬೋರ್ಡ್ನಲ್ಲಿ ರಹಸ್ಯವಾಗಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾಳೆ. ಯುವಕ ಮನೆ ಬಿಟ್ಟು ಹೋದ ಬಳಿಕ ಕಳ್ಳತನ ಮಾಡುವ ಉದ್ದೇಶವಿತ್ತು. ಜೊತೆಗೆ ಹೊರಗೆ ಇರಲು ತನಗೆ ಮನೆ ಇರಲಿಲ್ಲ. ಇಲ್ಲಿ ಊಟದ ವ್ಯವಸ್ಥೆ ಆಗುತ್ತಿತ್ತು. ಹಾಗಾಗಿ 2 ವಾರದಿಂದ ಇಲ್ಲೇ ಇದ್ದೆ ಎಂದು ಮಹಿಳೆ ತಿಳಿಸಿದ್ದಾಳೆ.
https://www.youtube.com/watch?v=06X9qXTvKNQ&t=233s
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ