CBSE 12th Result: ಮೂರು ವರ್ಷಗಳ ಸಾಧನೆ ಆಧಾರದ ಮೇಲೆ ಮೌಲ್ಯಮಾಪನ; ಜುಲೈ 31ಕ್ಕೆ CBSE ಫಲಿತಾಂಶ

30: 30: 40 ಮಾನದಂಡದ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
     ನವದೆಹಲಿ (ಜೂ. 17):  ಸಿಬಿಎಸ್​ಇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಜುಲೈ 31 ರಂದು ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುತ್ತಿರುವ ಮಂಡಳಿ ಕಳೆದ ಮೂರು ವರ್ಷಗಳ ವಿದ್ಯಾರ್ಥಿಗಳ ಸಾಧನೆ ಆಧಾರದ ಮೇಲೆ ಮೌಲ್ಯ ಮಾಪನ ನಡೆಸಲು ತೀರ್ಮಾನಿಸಿದೆ ಎಂದು ಸುಪ್ರೀಂ ಕೋರ್ಟ್​ ಮುಂದೆ ಅಫಿಡವಿಟ್​ನಲ್ಲಿ ತಿಳಿಸಿದೆ. 30: 30: 40 ಮಾನದಂಡದ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುವುದು. 12 ನೇ ತರಗತಿಯಲ್ಲಿ ನಡೆಸಲಾದ ಕಿರು ಪರೀಕ್ಷೆ ಸೇರಿದಂತೆ ಇತರೆ ಮಾನದಂಡದ ಮೇಲೆ ಶೇ 40ರಷ್ಟು ಮತ್ತು 11ನೇ ತರಗತಿ ಮತ್ತು 10ನೇ ತರಗತಿ ಅಂತಿಮ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ ಆಧಾರದ ಮೇಲೆ ಶೇ 60 ಅಂಕ ನೀಡಲಾಗುವುದು ಎಂದು ತಿಳಿಸಲಾಗಿದೆ.

    ಈ ಅರ್ಹತಾ ಮಾನದಂಡದ ಮೇಲೆ ವಿದ್ಯಾರ್ಥಿ ತೃಪ್ತಿ ಹೊಂದಿಲ್ಲದಿದ್ದರೆ ಅವರನ್ನು ಅಗತ್ಯ ಪುನರಾವರ್ತನೆ ಅಥವಾ ವಿಭಾಗಗಳಲ್ಲಿ ವರ್ಗೀಕರಿಸಲಾಗುವುದು. ಅಂತಹ ವಿದ್ಯಾರ್ಥಿಗಳು ಕೊರೋನಾ ಸೋಂಕು ಇಳಿಕೆಯಾದ ಬಳಿಕ ನಡೆಸಲಾಗುವ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಗೆ ಹಾಜರಾಗಬಹುದು. ಅವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗುವುದು ಎಂದು ಎ.ಎಂ ಖಾನ್ವೀಲ್ಕರ್​ ಹಾಗೂ ದಿನೇಶ್​ ಮಹೇಶ್ವರಿ ಅವನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

    ಕೋವಿಡ್​ ಹಿನ್ನಲೆ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈಗಾಗಲೇ ಬೋರ್ಡ್​ ಪರೀಕ್ಷೆ ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತು. ಅಲ್ಲದೇ ವಿದ್ಯಾರ್ಥಿಗಳ ವಸ್ತುನಿಷ್ಠ ಮಾನದಂಡದ ಪ್ರಕಾರ ಅವರಿಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿತು.

    ಮಂಡಳಿಯ ಮೌಲ್ಯಮಾಪನ ಮಾನದಂಡಕ್ಕೆ ಸುಪ್ರೀಂ ಕೋರ್ಟ್​ ಒಪ್ಪಿಗೆ ನೀಡಿದೆ, ಇಂದು ಸಿಬಿಎಸ್​ಸಿ ಜೊತೆಯಲ್ಲಿಯೇ ಸಿಐಎಸ್​ಸಿಇ ಮೌಲ್ಯಮಾಪನ ಮಾನದಂಡವನ್ನು ಸುಪ್ರೀಂ ಕೋರ್ಟ್​ ಅಂತಿಮಗೊಳಿಸಲಿದೆ.

    ಸಿಬಿಎಸ್​ಇ 12 ವಿದ್ಯಾರ್ಥಿಗಳ ಅಂಕಗಳನ್ನು ಪ್ರಾಕ್ಟಿಕಲ್​ ಅಂಕಗಳನ್ನು ಶಾಲೆಯಿಂದಲೇ ಸಲ್ಲಿಸಲಾಗುವುದು, ಥೀಯಾರಿ ವಿಭಾಗದಲ್ಲಿ ಮಾತ್ರ ಈ ಮೇಲ್ಕಂಡ ಮೌಲ್ಯಮಾಪನ ತಂತ್ರ ಅನುಸರಿಸಲಾಗುವುದು

    10 ಮತ್ತು 11ನೇ ತರಗತಿಯ ಐದು ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಮೂರು ವಿಷಯಗಳ ಅಂಕಗಳನ್ನು ಪರಿಗಣಿಸಲಾಗುವುದು. ಇನ್ನು 12ನೇ ತರಗತಿಯಲ್ಲಿ ನಡೆಸಲಾಗದ ಯುನಿಟ್​ , ಟರ್ಮ್​ ಮತ್ತು ಪ್ರಾಕ್ಟಿಕಲ್​ ಅನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಇವುಗಳನ್ನು ಸಂಕಲಿಸಿ 12ನೇ ತರಗತಿ ಫಲಿತಾಂಶ ಪ್ರಕಟಿಸಲಾಗುವದು. ಮುಂದಿನ ತಿಂಗಳು ಅಂದರೆ, ಜುಲೈ 30ರಂದು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅಟಾರ್ನಿ ಜನರಲ್​ ಮುಖ್ಯ ನ್ಯಾಯಾಮೂರ್ತಿಗಳಿಗೆ ತಿಳಿಸಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು
    Published by:Seema R
    First published: