ನೇಹಾನ ಸೀರೆಯಲ್ಲಿ ನೋಡಬೇಕು, ಫೇರ್​​ವೆಲ್​​​ಗಾದ್ರೂ ಅನುಮತಿ ಕೊಡಿ: ಮೋದಿಗೆ CBSE ವಿದ್ಯಾರ್ಥಿಯ ಮನವಿ

ನನ್ನನ್ನು ಸೀರೆಯಲ್ಲಿ ನೋಡುವ ಆಸೆ ಇದ್ದರೆ, ನನಗೆ ಹೇಳಬೇಕಿತ್ತು. ಪ್ರಧಾನಿಗೆ ರಿಕ್ವೆಸ್ಟ್​​ ಮಾಡಬೇಕಿತ್ತಾ ಎಂದು ನೇಹಾ ಪ್ರಶ್ನಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ CBSE 12ನೇ ತರಗತಿ ಬೋರ್ಡ್​​ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸದಿರುವ  ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಈ ನಿಲುವಿಗೆ ಸಿಬಿಎಸ್​ಸಿ ಕೂಡ ಸಹಮತ ವ್ಯಕ್ತಪಡಿಸಿದೆ. ಪರೀಕ್ಷೆ ರದ್ದು ಬಗ್ಗೆ ಪ್ರಧಾನಿ ಮೋದಿ ಮಾಡಿದ್ದ ಟ್ವೀಟ್​ಗೆ ಹಲವು ವಿದ್ಯಾರ್ಥಿಗಳು ಅಭಿನಂದನೆ ತಿಳಿಸಿದ್ದರು. ಆದರೆ ಪಿಎಂ ಟ್ವೀಟ್​​ಗೆ ವಿದ್ಯಾರ್ಥಿಯೊಬ್ಬ ಪ್ರತಿಕ್ರಿಯಿಸಿರುವ ರೀತಿ ಸದ್ಯ ವೈರಲ್​ ಆಗಿದೆ.

ಪರೀಕ್ಷೆ ರದ್ದಾದ ಬೆನ್ನಲ್ಲೇ CBSE 12ನೇ ತರಗತಿ ವಿದ್ಯಾರ್ಥಿ ಕುಕ್ಕಿ ಅಗರ್ವಾಲ್​​ ಪ್ರಧಾನಿಗಳ ಬಳಿ ವಿಚಿತ್ರ ಮನವಿಯನ್ನು ಇಟ್ಟಿದ್ದಾನೆ. ಸರ್​​ ಪರೀಕ್ಷೆಯೇನೋ ರದ್ದು ಮಾಡಿದ್ದೀರ, ದಯವಿಟ್ಟು ಫೇರ್​ವೆಲ್​ ಕಾರ್ಯಕ್ರಮಕ್ಕಾದರೂ ಅನುಮತಿ ನೀಡಿ. ನಾನು ಫೇರ್​ವೆಲ್​ ಪಾರ್ಟಿಯಲ್ಲಿ ನೇಹಾಳನ್ನು ಸೀರೆಯಲ್ಲಿ ನೋಡಬೇಕು ಅಂದುಕೊಂಡಿದ್ದೇನೆ. ಫೇರ್​ವೆಲ್​ ನಡೆಯದಿದ್ದರೆ ಸಹಪಾಠಿ ನೇಹಾಳನ್ನು ಸೀರೆಯಲ್ಲಿ ನೋಡುವ ನನ್ನ ಕನಸು ಈಡೇರಲ್ಲ ಎಂದು ಟ್ವೀಟ್​ ಮಾಡಿದ್ದಾನೆ. ವಿದ್ಯಾರ್ಥಿಯ ಈ ಟ್ವೀಟ್​ ಸದ್ಯ ವೈರಲ್​ ಆಗಿದೆ.ಯುವಕನ ಕಥೆ ಇಷ್ಟಕ್ಕೆ ನಿಂತಿಲ್ಲ. ಟ್ವೀಟ್​ ವೈರಲ್​ ಆಗುತ್ತಿದಂತೆ ಕುಕ್ಕಿ ಅಗರ್ವಾಲ್​ಗೆ ನೇಹಾ ವಾಟ್ಸಪ್​ ಮೆಸೇಜ್​ ಮಾಡಿದ್ದಾಳೆ. ನನ್ನನ್ನು ಸೀರೆಯಲ್ಲಿ ನೋಡುವ ಆಸೆ ಇದ್ದರೆ, ನನಗೆ ಹೇಳಬೇಕಿತ್ತು. ಪ್ರಧಾನಿಗೆ ರಿಕ್ವೆಸ್ಟ್​​ ಮಾಡಬೇಕಿತ್ತಾ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಪ್ರತಿಕ್ರಿಯಿಸಿರುವ ಕುಕ್ಕಿ ನನ್ನ ಟ್ವೀಟ್​ ವೈರಲ್​ ಆಗುತ್ತೆ ಅಂತ ನನಗೆಲ್ಲಿ ಗೊತ್ತಿತ್ತು ಎಂದಿದ್ದಾರೆ. ಇವರಿಬ್ಬರದ್ದು ಎನ್ನಲಾದ ಸಂಭಾಷಣೆಯ ಸ್ಕ್ರೀನ್​ ಶಾಟ್​ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನೆಟ್ಟಿಗರು ಹರೆಯದ ಯುವಕನ ಬಯಕೆಗೆ ತರಹೇವಾರಿ ಕಮೆಂಟ್​ಗಳನ್ನು ಮಾಡಿದ್ದಾರೆ. ಮೀಮ್ಸ್​, ಟ್ರೋಲ್​ಗಳ ಮೂಲಕ ಯುವಕನ ಕಾಲೆಳೆದಿದ್ದಾರೆ. ಈತನಿಗಾಗಿ ಪ್ರಧಾನಿ ಮೋದಿ ಫೇರ್​ವೆಲ್​ಗೆ ಅನುಮತಿ ನೀಡಬೇಕು ಅಂತ ತಮಾಷೆಯಾಗಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Maggi ಸುರಕ್ಷಿತವಲ್ಲ ಎಂದು ಒಪ್ಪಿಕೊಂಡ ಕಂಪನಿ: ಇಲ್ಲಿಯವರೆಗೂ ಮ್ಯಾಗಿ ತಿಂದವರ ಗತಿಯೇನು?

ಇನ್ನು ಪರೀಕ್ಷೆ ರದ್ದಾಗಿರುವ ಹಿನ್ನಲೆ ಬಹುತೇಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮೌಲ್ಯ ಮಾಪನ ಹೇಗೆ ನಡೆಯಲಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಅಧಿಕಾರಿಗಳು, ಈ ವರ್ಷ 12ನೇ ತರಗತಿ ಬೋರ್ಡ್​ ಪರೀಕ್ಷೆ ನಡೆಸುವುದಿಲ್ಲ. ಇದೇ ವೇಳೆ ಸಿಬಿಎಸ್​ಸಿ ಈ ವಸ್ತು ನಿಷ್ಟ ಮಾನದಂಡದ ಪ್ರಕಾರ ವಿದ್ಯಾರ್ಥಿಗಳ ಫಲಿತಾಂಶವನ್ನು ಕ್ರೋಢಿಕರಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ.

ಈಗಾಗಲೇ ವಿದ್ಯಾರ್ಥಿಗಳ ಮೂರು ವರ್ಷದ ಸಾಧನೆ ಸಂಗ್ರಹಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿ 9, 10, 11ನೇ ತರಗತಿಯ ಬೋರ್ಡ್​ ಪರೀಕ್ಷೆ ವೇಳೆ ಪಡೆದ ಅಂಕಗಳ ಸಂಬಂಧಿಸಿದಂತೆ ಈಗಾಗಲೇ ವಿವರಗಳನ್ನು ನೀಡುವಂತೆ ಶಾಲೆಗಳಿಗೆ ಕೋರಲಾಗಿದೆ. ಈ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ತೋರಿದ ಸಾಧನೆ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶವನ್ನು ಲೆಕ್ಕಾಹಾಕುವ ಸಾಧ್ಯತೆ ಇದೆ. ಈ ಕುರಿತು ಇನ್ನು ಅಂತಿಮ ತೀರ್ಮಾನವಾಗಿಲ್ಲ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: