ದೆಹಲಿ(ಜು.20): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಅವಧಿ 2 ಬೋರ್ಡ್ ಪರೀಕ್ಷೆಗಳ (Board Exam) ಫಲಿತಾಂಶಗಳ (Result) ಜೊತೆಗೆ ಟರ್ಮ್ 1 ಮತ್ತು ಟರ್ಮ್ 2 ರ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಈ ತಿಂಗಳ ಆರಂಭದಲ್ಲಿ ಸಿಬಿಎಸ್‌ಇ ಫಲಿತಾಂಶಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಜುಲೈ ಅಂತ್ಯದ ವೇಳೆಗೆ ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಅದರಂತೆಯೇ ಇದೀಗ ಫಲಿತಾಂಶ ಪ್ರಕಟವಾಗಿದೆ. CBSE 10ನೇ, 12ನೇ ಫಲಿತಾಂಶದ ದಿನಾಂಕ ಮತ್ತು ಸಮಯದ ಅಧಿಕೃತ ದೃಢೀಕರಣಕ್ಕಾಗಿ ಬಹಳಷ್ಟು ಕುತೂಹಲ ಉಂಟಾಗಿತ್ತು.
ಸಿಬಿಎಸ್‌ಇ ಫಲಿತಾಂಶದ ದಿನಾಂಕ ಮತ್ತು ಸಮಯದ ಬಗ್ಗೆ ವಿದ್ಯಾರ್ಥಿಗಳು ಬೋರ್ಡ್ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪೂರ್ವ ಮಾಹಿತಿಯನ್ನು ಪಡೆದಿದ್ದಾರೆ. ಫಲಿತಾಂಶ ಘೋಷಣೆ ನಂತರ ಅವರು cbseresults.nic.in ಗೆ ಹೋಗಿ ತಮ್ಮ ಶಾಲೆಯ ಕೋಡ್, ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ನೋಡಬಹುದಾಗಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, CBSE 12 ನೇ ತರಗತಿಯ CBSE ಫಲಿತಾಂಶ 2022 ಅನ್ನು ಬಿಡುಗಡೆ ಮಾಡಿದೆ. CBSE 12 ನೇ ಫಲಿತಾಂಶ 2022 ಇದೀಗ results.cbse.nic.in ಮತ್ತು cbse.gov.in ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ಖಾತೆಗಳಿಗೆ ಲಾಗ್ ಇನ್ ಮಾಡುವ ಮೂಲಕ ಡಿಜಿಲಾಕರ್‌ನಲ್ಲಿ ಆನ್‌ಲೈನ್‌ನಲ್ಲಿ CBSE ಫಲಿತಾಂಶಗಳನ್ನು ಪರಿಶೀಲಿಸಬಹುದು.
ಪರೀಕ್ಷಾ ಸಂಗಮದಲ್ಲಿ ಅಪ್‌ಲೋಡ್
CBSE 12 ನೇ ಫಲಿತಾಂಶಗಳನ್ನು ಈ ಕ್ಷಣದಲ್ಲಿ ಪರೀಕ್ಷಾ ಸಂಗಮದಲ್ಲಿ ಅಪ್‌ಲೋಡ್ ಮಾಡಲಾಗಿದೆ. CBSE 12 ನೇ ಫಲಿತಾಂಶ 2022 ಮಾರ್ಕ್ ಶೀಟ್, ಹೌಯರ್, ಡಿಜಿಲಾಕರ್‌ನಲ್ಲಿ ಲಭ್ಯವಿದೆ. ಡಿಜಿಲಾಕರ್‌ನಲ್ಲಿ ಪರಿಶೀಲಿಸುವ ಹಂತಗಳನ್ನು ಸಹ ಕೆಳಗೆ ನೀಡಲಾಗಿದೆ.
ಬೋರ್ಡ್ ವೆಬ್‌ಸೈಟ್ ಜೊತೆಗೆ, ಫಲಿತಾಂಶಗಳು DigiLocker, UMANG ಅಪ್ಲಿಕೇಶನ್ ಮತ್ತು results.gov.in ನಲ್ಲಿಯೂ ಲಭ್ಯವಿರುತ್ತವೆ.
CBSE 12ನೇ ಫಲಿತಾಂಶ
ಅಧಿಕೃತ ವೆಬ್‌ಸೈಟ್‌ಗೆ digilocker.gov.in. ಓಪನ್ ಮಾಡಿ
ನಿಮ್ಮ ಆಧಾರ್ ಸಂಖ್ಯೆ ಸೇರಿದಂತೆ ಅಗತ್ಯ ವಿವರಗಳನ್ನು ನಮೂದಿಸಿ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ಗಾಗಿ ಫೋಲ್ಡರ್ ಅನ್ನು ಆಯ್ಕೆ ಮಾಡಬೇಕು.
"CBSE ತರಗತಿ 12ನೇ ಫಲಿತಾಂಶ 2022" ಶೀರ್ಷಿಕೆಯ ಫೈಲ್ ಅನ್ನು ಆಯ್ಕೆಮಾಡಿ.
ಸ್ಕ್ರೀನ್ ಮೇಲೆ 12 ನೇ ತರಗತಿಯ ಫಲಿತಾಂಶಗಳ ತಾತ್ಕಾಲಿಕ ಅಂಕಪಟ್ಟಿ ಇರುತ್ತದೆ.
ಲಾಕರ್ ಪಿನ್
ಹೆಚ್ಚುವರಿ ಭದ್ರತಾ ಕ್ರಮವಾಗಿ, ಅಂಕ ಪಟ್ಟಿಗಳು, ಪ್ರಮಾಣಪತ್ರಗಳು ಇತ್ಯಾದಿಗಳನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳ ಡಿಜಿಲಾಕರ್ ಖಾತೆಗಳಿಗೆ CBSE ಭದ್ರತಾ ಪಿನ್ ಅನ್ನು ಕಡ್ಡಾಯ ಮಾಡಿದೆ. ನಿಮ್ಮ ಪಿನ್ ಸಂಖ್ಯೆ ತಿಳಿಯಲು ನಿಮ್ಮ ಶಾಲೆಯನ್ನು ಸಂಪರ್ಕಿಸಿ.
14335366 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್
ಒಟ್ಟು 1444341 ಅಭ್ಯರ್ಥಿಗಳು CBSE 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 14335366 ಮಂದಿ ಹಾಜರಾಗಿದ್ದು, 1330662 ಮಂದಿ ಉತ್ತೀರ್ಣರಾಗಿದ್ದಾರೆ. ಈ ವರ್ಷ ಶೇ.92.71ರಷ್ಟು ಉತ್ತೀರ್ಣರಾಗಿದ್ದಾರೆ. ತಿರುವನಂತಪುರಂ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. ಪ್ರಯಾಗ್ರಾಜ್ ಅತ್ಯಂತ ಕಳಪೆ ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗಳನ್ನು ಟರ್ಮ್ 2 ಗಾಗಿ ಆಫ್‌ಲೈನ್ ಮೋಡ್‌ನಲ್ಲಿ ಏಪ್ರಿಲ್ 26, 2022 ರಿಂದ ಜೂನ್ 15, 2022 ರವರೆಗೆ ನಡೆಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ