Mission Paani | ಮಕ್ಕಳಿಗೆ ನೀರಿನ ಉಳಿತಾಯದ ಪಾಠ ಹೇಳಿಕೊಡಿ: ಶಾಲೆಗಳಿಗೆ ಸಿಬಿಎಸ್ಇ ನಿರ್ದೇಶನ

ಸಿಬಿಎಸ್​ಇ ಮಂಡಳಿಯು ತನ್ನ ಅಧೀನದಲ್ಲಿರುವ ಶಾಲಾ ಮಕ್ಕಳಲ್ಲಿ ನೀರು ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

news18
Updated:August 27, 2019, 1:08 PM IST
Mission Paani | ಮಕ್ಕಳಿಗೆ ನೀರಿನ ಉಳಿತಾಯದ ಪಾಠ ಹೇಳಿಕೊಡಿ: ಶಾಲೆಗಳಿಗೆ ಸಿಬಿಎಸ್ಇ ನಿರ್ದೇಶನ
ಪ್ರಾತಿನಿಧಿಕ ಚಿತ್ರ
news18
Updated: August 27, 2019, 1:08 PM IST
ನವದೆಹಲಿ(ಆ. 27): ದೇಶ ಇದೀಗ ಭಾರೀ ಜಲ ಸಂಕಷ್ಟದಲ್ಲಿದೆ. ಒಂದು ಕಡೆ ಭೀಕರ ನೆರೆ, ಮತ್ತೊಂದು ಕಡೆ ಭೀಕರ ಕ್ಷಾಮ, ಇವೆರಡೂ ಕೂಡ ದೇಶವನ್ನು ಬಾಧಿಸುತ್ತಿವೆ. ಭೂಮಿಯ ಸಕಲ ಜೀವಿಗಳಿಗೂ ಅತ್ಯಗತ್ಯವಾಗಿರುವ ನೀರು ಮುಂದೊಂದು ದಿನ ನಮ್ಮ ಕೈಗೆಟಕದೇ ಹೋಗುವಂತಹ ಸ್ಥಿತಿ ನಿರ್ಮಾಣವಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಲ ಶಕ್ತಿ ಅಭಿಯಾನ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ ನ್ಯೂಸ್18 ವಾಹಿನಿ ಕೂಡ ಮಿಷನ್ ಪಾನಿ ಅಭಿಯಾನ ನಡೆಸುತ್ತಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯೂ ಈ ಅಭಿಯಾನಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಕೈಜೋಡಿಸುವುದು ಇವತ್ತಿಗೆ ಅತ್ಯಗತ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ ಸಿಬಿಎಸ್​ಇ ಮಂಡಳಿಯು ದೇಶವ್ಯಾಪಿ ಇರುವ ತನ್ನ ಶಾಲೆಗಳಲ್ಲಿ ಈ ಅಭಿಯಾನಕ್ಕೆ ಪೂರಕವಾಗಿ ನಿರ್ದೇಶನ ಹೊರಡಿಸಿದೆ.

ಸಿಬಿಎಸ್​ಇ ತನ್ನ ಶಾಲೆಗಳಲ್ಲಿರುವ ಮಕ್ಕಳಲ್ಲಿ ನೀರಿನ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಹಮ್ಮಿಕೊಂಡಿದೆ. ಪ್ರತಿಯೊಂದು ಮಗುವೂ ಪ್ರತೀ ದಿನ ಒಂದು ಲೀಟರ್ ನೀರನ್ನು ಪೋಲಾಗದಂತೆ ಉಳಿಸುವ ಸಂಕಲ್ಪ ತೊಡುವಂತೆ ಮಾಡಿ ಎಂದು ತನ್ನೆಲ್ಲಾ ಶಾಲೆಗಳಿಗೆ ಸಿಬಿಎಸ್​ಇ ಸೂಚಿಸಿದೆ. ಹಾಗೆಯೇ, ಶಾಲೆಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಇಕೋ ಕ್ಲಬ್​ಗಳನ್ನು ಸ್ಥಾಪಿಸಬೇಕೆಂದು ಆದೇಶಿಸಿದೆ.

ಇದನ್ನೂ ಓದಿ: ಮಿಷನ್​ ಪಾನಿ ಆಂದೋಲನಕ್ಕೆ ಇಂದು ಮುಂಬೈನಲ್ಲಿ ಚಾಲನೆ; ಅಮಿತಾಭ್​ ಬಚ್ಚನ್​ ಸೇರಿ ಹಲವು ಗಣ್ಯರು ಭಾಗಿ

“ಪರಿಸರದ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಇಕೋ ಕ್ಲಬ್​ಗಳು ಮುಂದುವರಿಸಬೇಕು. ಮಕ್ಕಳು ಮುಂದಿನ ದಿನಗಳಲ್ಲಿ ಪರಿಸರ ಕಾಳಜಿ ಇರುವಂಥವರಾಗಿ ಬೆಳೆಯಬೇಕು. ನಿಯಮಿತ ಪಾಠದ ಜೊತೆಗೆ ಜಲ ಸಂರಕ್ಷಣೆ ವಿಚಾರವನ್ನೂ ಮಕ್ಕಳಿಗೆ ಬೋಧಿಸಬೇಕು. ಈ ವರ್ಷದ ಪಠ್ಯಕ್ರಮದಲ್ಲಿ ನಮ್ಮದು ಇದೇ ಅಜೆಂಡಾ ಆಗಿದೆ” ಎಂದು ಸಿಬಿಎಸ್​ಇ ಅಧ್ಯಕ್ಷರಾದ ಅನಿತಾ ಕರ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: MissionPaani: ನೀರಿನ ಮಹತ್ವದ ಬಗ್ಗೆ ತಿಳಿಸಿದ ಕೋತಿ: ನಾಳಿನ ಒಳಿತಿಗಾಗಿ ಇಂದೇ ಜಾಗೃತರಾಗಿ

“5ರಿಂದ 12ನೇ ತರಗತಿಯಲ್ಲಿರುವ ಪ್ರತಿಯೊಂದು ಮಗುವೂ ತನ್ನ ಮನೆ ಮತ್ತು ಶಾಲೆಯಲ್ಲಿ ನಿತ್ಯ ಕನಿಷ್ಠ ಒಂದು ಲೀಟರ್ ನೀರನ್ನಾದರೂ ಉಳಿಸುವಂತಾಗಬೇಕು. ತನ್ನ ಅಧೀನದಲ್ಲಿರುವ ಶಾಲೆಗಳೆಲ್ಲವೂ ಮುಂದಿನ ಮೂರು ವರ್ಷಗಳಲ್ಲಿ ಜಲ ಉಳಿತಾಯ ಶಾಲೆಗಳಾಗಿ ಮಾರ್ಪಾಡಾಗಬೇಕು” ಎಂದು ಅನಿತಾ ಕರ್ವಾಲ್ ಹೇಳಿದ್ದಾರೆ.

(ಪಿಟಿಐ ವರದಿ)
Loading...

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:August 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...