CBSE Results: ಇಂದು ಮಧ್ಯಾಹ್ನ 2 ಗಂಟೆಗೆ 12ನೇ ತರಗತಿಯ ಸಿಬಿಎಸ್ಇ ಫಲಿತಾಂಶ ಪ್ರಕಟವಾಗಲಿದೆ. ಬೋರ್ಡ್ನ ವೆಬ್ಸೈಟಿನಲ್ಲಿ ಫಲಿತಾಂಶ ಲಭ್ಯವಿರಲಿದ್ದು ವಿದ್ಯಾರ್ಥಿಗಳು ಆಪ್ ಮೂಲಕವೂ ರಿಸಲ್ಟ್ ನೋಡಬಹುದಾಗಿದೆ. cbseresults.nic.in ವೆಬ್ಸೈಟಿನಲ್ಲಿ ಫಲಿತಾಂಶ ದೊರೆಯಲಿದೆ. ಇದಲ್ಲದೇ digilocker.gov.in ಮತ್ತು DigiLocker ಆಪ್ ಮೂಲಕವೂ ಫಲಿತಾಂಶ ನೋಡಬಹುದಾಗಿದೆ. ಇನ್ನು CBSE ಪಾಸ್ ಸರ್ಟಿಫಿಕೇಟ್ಗಳು, ಅಂಕಪಟ್ಟಿಗಳು, ಮತ್ತು ಟಿ ಸಿ ಕೂಡಾ ವೆಬ್ಸೈಟಿನಲ್ಲೇ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಕೋರಿದರೆ ಮಾತ್ರ ಟಿಸಿಗಳನ್ನು ಭೌತಿಕವಾಗಿ ನೀಡಲಾಗುವುದು ಎಂದು ಸಿಬಿಎಸ್ಇ ಬೋರ್ಡ್ ತಿಳಿಸಿದೆ.
ಮೌಲ್ಯಮಾಪನ ಪಾಲಿಸಿಯ ಅನುಸಾರ 12ನೇ ತರಗತಿಯ ಫಲಿತಾಂಶದ ಸಿದ್ಧತೆಗಾಗಿ 13 ಜನರ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ಇದರನ್ವಯ 10ನೇ ತರಗತಿ ಅಂಕೆಗಳನ್ನು ಶೇಕಡಾ 30ರಷ್ಟು ಗಣನೆಗೆ ತೆಗೆದುಕೊಳ್ಳಲಾಗಿದ್ದು ಶೇಕಡಾ 30ರಷ್ಟು ಅಂಕಗಳನ್ನು 11ನೇ ತರಗತಿ ಫಲಿತಾಂಶದಿಂದ ಗಣನೆಗೆ ತೆಗೆದುಕೊಳ್ಳಲಾಗಿದೆ. ಇನ್ನುಳಿದ ಶೇಕಡಾ 40ರಷ್ಟು ಅಂಕಗಳನ್ನು 12ನೇ ತರಗತಿಯ ಮಧ್ಯಂತರ ಪರೀಕ್ಷೆ ಮತ್ತು ಉಳಿದ ತರಗತಿ ಪರೀಕ್ಷೆಗಳು ಅಥವಾ ಯೂನಿಟ್ ಟೆಸ್ಟ್ಗಳ ಅಂಕಗಳಿಂದ ಪರಿಗಣಿಸಲು ನಿರ್ಧರಿಸಲಾಗಿತ್ತು.
ಈ ವ್ಯವಸ್ಥೆಯ ಬಗ್ಗೆ ಅಸಮಾಧಾನ ಇರುವ ವಿದ್ಯಾರ್ಥಿಗಳು ನೇರವಾಗಿ 12ನೇ ತರಗತಿಯ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ಕಳೆದ ವರ್ಷ ಶೇಕಡಾ 88.78 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇದು ಅದರ ಹಿಂದಿನ ವರ್ಷ ಅಂದರೆ 2019ಕ್ಕಿಂತ ಶೆಕಡಾ 5.38ರಷ್ಟು ಹೆಚ್ಚಿನ ಫಲಿತಾಂಶವಾಗಿದೆ.
ಇದನ್ನೂ ಓದಿ: Health Tips: ವಿಟಮಿನ್ ಮಾತ್ರೆಗಳು ನಿಜಕ್ಕೂ ಒಳ್ಳೆಯದಾ? ಲಿವರ್ಗೆ ಹಾನಿ ಮಾಡೋ ಔಷಧಗಳು ಯಾವುವು?
202ರಲ್ಲಿ ಶೇಕಡಾ 92.15ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು ಶೇಕಡಾ 86.18 ಬಾಲಕರು ಉತ್ತೀರ್ಣರಾಗಿದ್ದರು. ಶೇಕಡಾ 66.67 ತೃತೀಯ ಲಿಂಗ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಆಗಸ್ಟ್ 16ರಿಂದ ಸೆಪ್ಟೆಂಬರ್ 15ರವರಗೆ 10 ಮತ್ತು 12ನೇ ತರಗತಿಯ ಖಾಸಗಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುವುದಾಗಿ ಸಿಬಿಎಸ್ಇ ಘೋಷಿಸಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ