CBSE Term 2 Admit Cards 2022: ಸಿಬಿಎಸ್​ಇ 10ನೇ ಮತ್ತು 12ನೇ ತರಗತಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಹೀಗೆ ಡೌನ್ಲೋಡ್ ಮಾಡಿ

ಸಿಬಿಎಸ್ಇ ಟರ್ಮ್ 2 ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಬಗ್ಗೆ ಶಾಲೆಗಳು ಹಂತ ಹಂತವಾದ ಪ್ರಕ್ರಿಯೆಯನ್ನು ಇಲ್ಲಿ ಪರಿಶೀಲಿಸಬಹುದು.

ವಿದ್ಯಾರ್ಥಿಗಳು

ವಿದ್ಯಾರ್ಥಿಗಳು

  • Share this:
ಈ ಪರೀಕ್ಷೆಗಳು ಬರುತ್ತಿವೆ ಎಂದರೆ ವಿದ್ಯಾರ್ಥಿಗಳಿಗೆ (Students) ಮತ್ತು ಅವರ ಪೋಷಕರಿಗೆ ಒಂದು ರೀತಿಯ ಆತಂಕ ಮತ್ತು ಭಯ ಶುರುವಾಗುತ್ತದೆ. ಏಕೆಂದರೆ ಪರೀಕ್ಷೆಗೆ ಚೆನ್ನಾಗಿ ಓದಿಕೊಂಡು ತಯಾರಿ ಆಗುವುದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಪರೀಕ್ಷೆಗೆ (Exams) ಹಾಜರಾಗಲು ಬೇಕಾದಂತಹ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್‌ಸೈಟ್‌ನಿಂದ ಡೌನ್ಲೋಡ್ (Exam Admit Card Download) ಮಾಡಿಕೊಳ್ಳುವುದು ಹೇಗೆ ಮತ್ತು ಪರೀಕ್ಷೆ (CBSE Term 2 Admit Cards 2022) ನಡೆಯುವ ಸ್ಥಳ ಯಾವುದು ಮತ್ತು ಅಲ್ಲಿಗೆ ಹೋಗಲು ಮನೆಯಿಂದ ಎಷ್ಟು ಸಮಯ ಬೇಕಾಗಬಹುದು ಎಂಬ ಆತಂಕವಿರುತ್ತದೆ.

ಹಾಗೂ, ಟ್ರಾಫಿಕ್ ಸಮಸ್ಯೆ ಇದ್ದರೆ, ಎಷ್ಟು ಮುಂಚಿತವಾಗಿ ಮನೆಯಿಂದ ನಾವು ಹೊರಡಬೇಕು. ಹೀಗೆ ಅನೇಕ ರೀತಿಯ ತಯಾರಿಯನ್ನು ನಾವು ಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಒಂದು ರೀತಿಯ ಆತಂಕವಿದ್ದರೆ, ಪೋಷಕರಿಗೆ ಇನ್ನೊಂದು ರೀತಿಯ ಆತಂಕ ಇರುವುದನ್ನು ನಾವು ನೋಡುತ್ತೇವೆ.

ಇಲ್ಲಿದೆ ವಿವರ
ಇಷ್ಟೆಲ್ಲಾ ಪರೀಕ್ಷೆಯ ಆತಂಕದ ಬಗ್ಗೆ ಏಕೆ ಮಾತಾಡುತ್ತಿದ್ದೇವೆ ಎಂದು ನಿಮಗೆ ಪ್ರಶ್ನೆ ಮೂಡಬಹುದು. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಅವರು 10ನೇ ಮತ್ತು 12ನೇ ಟರ್ಮ್ 2 ಪರೀಕ್ಷೆಯ ಪ್ರವೇಶ ಕಾರ್ಡ್‌ಗಳನ್ನು ಮಂಡಳಿಯು ಏಪ್ರಿಲ್ 12, 2022 ರಂದು ಬಿಡುಗಡೆ ಮಾಡಿದೆ. ಇ-ಪರೀಕ್ಷಾ ಪೋರ್ಟಲ್ ಅಧಿಸೂಚನೆಯ ಪ್ರಕಾರ, 10 ಮತ್ತು 12ನೇ ತರಗತಿಗಳಿಗೆ ಸಿಬಿಎಸ್ಇ ಪ್ರವೇಶ ಪತ್ರಗಳನ್ನು ಶಾಲೆಗಳು ಅಧಿಕೃತ ವೆಬ್‌ಸೈಟ್ ಆದ http://cbse.gov.inನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಟರ್ಮ್ 2 ಪರೀಕ್ಷೆಯ ಪ್ರವೇಶ ಪತ್ರಗಳನ್ನು ಮುಂಬರುವ ಟರ್ಮ್ 2 ಬೋರ್ಡ್ ಪರೀಕ್ಷೆಗಳಿಗೆ ಅವಶ್ಯಕತೆ ಇದ್ದು, ಪರೀಕ್ಷೆಗಳು ಆಫ್‌ಲೈನ್ ರೀತಿಯಲ್ಲಿ ನಡೆಯಲಿದೆ. ಈ ಪರೀಕ್ಷೆಗಳು ಏಪ್ರಿಲ್ 26, 2022 ರಿಂದ ಎಲ್ಲಾ ತರಗತಿಗಳಿಗೆ ಪ್ರಾರಂಭವಾಗುತ್ತವೆ.

ಶಾಲೆಗಳೇ ಡೌನ್​ಲೋಡ್ ಮಾಡಬೇಕೇ?
ಸಿಬಿಎಸ್ಇ 2022 ರ ಪ್ರವೇಶ ಪತ್ರಗಳನ್ನು ಶಾಲಾ ಮಾನ್ಯತೆ ಸಂಖ್ಯೆಯನ್ನು ಬಳಸಿಕೊಂಡು ಮಾತ್ರ ಡೌನ್ಲೋಡ್ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಇದಷ್ಟೇ ಅಲ್ಲದೆ ಸಿಬಿಎಸ್ಇ ಟರ್ಮ್ 2 ಪ್ರವೇಶ ಪತ್ರಗಳನ್ನು ಶಾಲೆಗಳು ಮಾತ್ರವೇ ಡೌನ್ಲೋಡ್ ಮಾಡಬಹುದು ಮತ್ತು ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಬಹುದು.

ಇದನ್ನೂ ಓದಿ: CBSE Term 2 Exams 2022: ಸಿಬಿಎಸ್ಇ 10-12ನೇ ತರಗತಿ ಟರ್ಮ್ 2 ಪರೀಕ್ಷೆಯ ಮಾರ್ಗಸೂಚಿ ಪ್ರಕಟ; ವಿವರ ಇಲ್ಲಿದೆ

ಸಿಬಿಎಸ್ಇ ಟರ್ಮ್ 2 ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಬಗ್ಗೆ ಶಾಲೆಗಳು ಹಂತ ಹಂತವಾದ ಪ್ರಕ್ರಿಯೆಯನ್ನು ಇಲ್ಲಿ ಪರಿಶೀಲಿಸಬಹುದು.

ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಟರ್ಮ್ 2 ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡುವುದು ಹೇಗೆ ನೋಡಿ.

1. ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು - cbse.gov.in.

2. ಮುಖಪುಟದಲ್ಲಿ, ಇ-ಪರೀಕ್ಷಾ ಟ್ಯಾಬ್ ಗೆ ಹೋಗಿ ಮತ್ತು ನಂತರ 'ಪರೀಕ್ಷೆಗಾಗಿ ಕಾರ್ಡ್ / ಸೆಂಟರ್ ಮೆಟೀರಿಯಲ್ ಪ್ರವೇಶ 2021-2022' ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.

3. ಪರ್ಯಾಯವಾಗಿ, ಇಲ್ಲಿ ನೀಡಲಾದ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ - CBSE 10th 12th Term 2 Admit Cards 2022.

4. ಈ ವೆಬ್‌ಸೈಟ್‌ಗೆ ಲಾಗಿನ್ ಆಗಲು ನಿಮ್ಮ ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಭದ್ರತಾ ಪಿನ್ ಅನ್ನು ನಮೂದಿಸಿ.

5. ನಿಮ್ಮ ವಿದ್ಯಾರ್ಥಿಗಳ ಸಿಬಿಎಸ್ಇ ಪರೀಕ್ಷೆಗಳ ಪ್ರವೇಶ ಪತ್ರ 2022 ಅನ್ನು ಪ್ರದರ್ಶಿಸಲಾಗುತ್ತದೆ.

6. ಭವಿಷ್ಯದ ಉಲ್ಲೇಖಗಳಿಗಾಗಿ ಇದರ ಒಂದು ನಕಲನ್ನು ಮುದ್ರಿಸಿಕೊಳ್ಳಿರಿ.

ಇದನ್ನೂ ಓದಿ: KCET 2022 ನೋಂದಣಿ ಶುರು; ವಿದ್ಯಾರ್ಥಿಗಳೇ ಹೀಗೆ ಅರ್ಜಿ ಸಲ್ಲಿಸಿ

ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಟರ್ಮ್ 2 ಪ್ರವೇಶ ಪತ್ರಗಳನ್ನು ಪರೀಕ್ಷಾ ದಿನಕ್ಕೆ ಕಡ್ಡಾಯವಾಗಿ ತರತಕ್ಕದ್ದು ಮತ್ತು ಇದು ಪ್ರಮುಖವಾದ ದಾಖಲೆಯಾಗಿದೆ. ಸಿಬಿಎಸ್ಇ ಇತ್ತೀಚೆಗೆ ಪರೀಕ್ಷಾ ದಿನದ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು.
Published by:guruganesh bhat
First published: