CBSE Class 10, Class 12 Exam 2021: ಸಿಬಿಎಸ್​​ಇ 10, 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಸಿಬಿಎಸ್​ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಏಪ್ರಿಲ್​ ತಿಂಗಳ ವೇಳೆಗೆ ಅಡ್ಮಿಟ್ ಕಾರ್ಡ್ ಲಭ್ಯವಾಗಬಹುದು. ಈ ಕೊರೋನಾ ಮಹಾಮಾರಿ ಪರಿಸ್ಥಿತಿ ಎದುರಿಸುತ್ತಿರುವ ವೇಳೆ, ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗಬಾರದೆಂದು ಶೇ.30 ರಷ್ಟು ಪಠ್ಯಕ್ರಮವನ್ನು ತಗ್ಗಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ(ಫೆ.02): 2021ನೇ ಸಾಲಿನ ಸಿಬಿಎಸ್​ಇ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಷನ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಕ್ರಿಯಾಲ್ ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿದ್ದು, https://www.cbse.gov.in/newsite/index.html ಈ ವೆಬ್​​ಸೈಟ್​​​ನಲ್ಲಿ ಮಾಹಿತಿ ಲಭ್ಯವಿದೆ. ವಿದ್ಯಾರ್ಥಿಗಳು ಈ ವೆಬ್​ಸೈಟ್​​ಗೆ ಭೇಟಿ ನೀಡಿ ತಮ್ಮ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

    2020-21ನೇ ಶೈಕ್ಷಣಿಕ ವರ್ಷ ಸಿಬಿಎಸ್​ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಮೇ 4ರಿಂದ ಜೂನ್​ 10ರವರೆಗೆ ನಡೆಯಲಿವೆ. ಈ ಪರೀಕ್ಷೆಗಳು ಆಫ್​ಲೈನ್​ನಲ್ಲಿ ನಡೆಯುತ್ತವೆ. ಸಿಬಿಎಸ್​ಇ 10 ಮತ್ತು 12ನೇ ತರಗತಿ ಫಲಿತಾಂಶ ಜುಲೈ 10ರಂದು ಹೊರಬೀಳಲಿದೆ. ಈ ವರ್ಷ ಸುಮಾರು 30 ಲಕ್ಷ ಸಿಬಿಎಸ್​ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

    ಬಿಡಿಎ ಸಿಬ್ಬಂದಿಗೆ ವರ್ಗಾವಣೆ ಬಿಸಿ; ಬಿಡಿಎ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ

    ಸಿಬಿಎಸ್​ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಟೈಮ್​ ಟೇಬಲ್ ಚೆಕ್ ಮಾಡುವುದು ಹೇಗೆ? ಈ ಸರಳ ಹಂತಗಳನ್ನು ಅನುಸರಿಸಿ.

    ಹಂತ-1: ಮೊದಲಿಗೆ ನೀವು https://www.cbse.gov.in/newsite/index.html ಈ ವೆಬ್​ಸೈಟ್​​ಗೆ ಭೇಟಿ ನೀಡಬೇಕು.

    ಹಂತ-2: ಹೋಮ್​ ಪೇಜ್​ಗೆ ಭೇಟಿ ನೀಡಿದಾಗ, ‘Class 10 and Class 12 Datesheet' ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

    ಹಂತ-3: ಆಗ ಸಿಬಿಎಸ್​ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿಯಾಗಿರುವ ಪರೀಕ್ಷೆಯ ದಿನಾಂಕ ಕಾಣಿಸುತ್ತದೆ.

    ಹಂತ-4: ಅಲ್ಲಿ ಕಾಣಸಿಗುವ ಸಿಬಿಎಸ್​ಇ 10 ಮತ್ತು 12ನೇ ತರಗತಿಗಳ ಪರೀಕ್ಷೆಯ ವೇಳಾಪಟ್ಟಿಯನ್ನು ಡೌನ್​ಲೋಡ್ ಮಾಡಿಕೊಳ್ಳಿ.

    ಹಂತ-5: ಅಗತ್ಯವಿದ್ದರೆ ಆ ಟೈಮ್ ಟೇಬಲ್ ಪ್ರತಿಯನ್ನು ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.

    ಸಿಬಿಎಸ್​ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಏಪ್ರಿಲ್​ ತಿಂಗಳ ವೇಳೆಗೆ ಅಡ್ಮಿಟ್ ಕಾರ್ಡ್ ಲಭ್ಯವಾಗಬಹುದು. ಈ ಕೊರೋನಾ ಮಹಾಮಾರಿ ಪರಿಸ್ಥಿತಿ ಎದುರಿಸುತ್ತಿರುವ ವೇಳೆ, ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗಬಾರದೆಂದು ಶೇ.30 ರಷ್ಟು ಪಠ್ಯಕ್ರಮವನ್ನು ತಗ್ಗಿಸಲಾಗಿದೆ.

    ಪ್ರಸ್ತುತ, ಕೆಲವು ರಾಜ್ಯಗಳಲ್ಲಿ ಶಾಲೆಗಳು ತೆರೆದಿವೆ. ಇನ್ನೂ ಕೆಲವು ಶಾಲೆಗಳು ಕೊರೋನಾ ಆತಂಕದಿಂದ ಆನ್​ಲೈನ್​ನಲ್ಲೇ ತರಗತಿ ಮುಂದುವರೆಸಿವೆ. ಆದಾಗ್ಯೂ ಸಿಬಿಎಸ್​ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಆಫ್​ಲೈನ್​ನಲ್ಲೇ ನಡೆಯಲಿವೆ.
    Published by:Latha CG
    First published: