CBSE 10th Result 2020: ನಾಳೆ ಹೊರ ಬೀಳಲಿದೆ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ

CBSE Class 10 Board Result 2020 | cbseresults.nic.in: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ್​ ಫೋಕರಿಯಲ್​ ನಿಶಾಂಕ್​ ಟ್ವೀಟ್​ ಮಾಡಿ ನಾಳೆ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಹೊರ ಬೀಳಲಿದೆ ಎಂದು ತಿಳಿಸಿದ್ದಾರೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು (ಜು.14): ಕೊರೋನಾ ವೈರಸ್​ನಿಂದ ಪರೀಕ್ಷೆಗಳು ತಡವಾಗಿದ್ದರೂ ಬಹುಬೇಗ ಪರೀಕ್ಷಾ ಫಲಿತಾಂಶವನ್ನು ನೀಡುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ. ಇಂದು ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಂದಿದೆ. ಈಗ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ನಾಳೆ ಹೊರ ಬೀಳಲಿದೆ ಎಂದು ಅಧಿಕೃತ ಘೋಷಣೆ ಆಗಿದೆ.

  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ್​ ಫೋಕರಿಯಲ್​ ನಿಶಾಂಕ್​ ಟ್ವೀಟ್​ ಮಾಡಿದ್ದು, ಈ ವಿಚಾರ ಖಚಿತಪಡಿಸಿದ್ದಾರೆ. ಪ್ರೀತಿಯ ಮಕ್ಕಳೇ ಹಾಗೂ ಪಾಲಕರೆ ನಾಳೆ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಹೊರ ಬೀಳಲಿದೆ. ಎಲ್ಲರಿಗೂ ಶುಭವಾಗಲಿ ಎಂದಿದ್ದಾರೆ.  ಫಲಿತಾಂಶವನ್ನು ಸಿಬಿಎಸ್​ಇ ಅಧಿಕೃತ ವೆಬ್​ಸೈಟ್​ cbse.nic.inನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಇದಲ್ಲದೆ, cbseresults.nic.in ಅಥವಾ results.nic.inನಲ್ಲೂ ವಿದ್ಯಾರ್ಥಿಗಳು ತಮ್ಮ ಸ್ಕೋರ್​ ಚೆಕ್​ ಮಾಡಬಹುದಾಗಿದೆ.

  ಸಿಬಿಎಸ್​ಇ ಮಂಡಳಿ ಶಾಲೆಗಳಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಲಾಗಿತ್ತು. ಕೊರೋನಾ ಅಪ್ಪಳಿಸುವುದಕ್ಕೂ ಮುನ್ನ ಶಾಲೆಗಳಲ್ಲಿ ನಡೆದಿದ್ದ ಪ್ರಾಕ್ಟಿಕಲ್ ಎಕ್ಸಾಂ ಅಥವಾ ಇಂಟರ್ನಲ್ ಅಸೆಸ್ಮೆಂಟ್​ನ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕ ಕೊಡಲು ಮಂಡಳಿ ನಿರ್ಧಾರ ಮಾಡಿದೆ.

  ಕೊರೋನಾ ಭೀತಿಯಿಂದಾಗಿ ಸಿಬಿಎಸ್​ಇ ಮಂಡಳಿ ಪರೀಕ್ಷೆಗಳನ್ನ ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಆಗಿತ್ತು. ಇದರ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್​ಆರ್​ಡಿ ಸಚಿವಾಲಯ ಹಾಗೂ ಸಿಬಿಎಸ್​ಇ ಮಂಡಳಿ ತನ್ನ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿತ್ತು.
  Published by:Rajesh Duggumane
  First published: