2021ರ ಫೆಬ್ರವರಿ- ಮಾರ್ಚ್​ನಲ್ಲಿಯೇ ನಡೆಯಲಿವೆ ಸಿಬಿಎಸ್​ಇ 10, 12ನೇ ತರಗತಿ ಪರೀಕ್ಷೆಗಳು

ಸಿಬಿಎಸ್ಇ ಮಂಡಳಿಯ 2021ರ ಪರೀಕ್ಷೆಗಳ ದಿನಾಂಕಗಳ ಬಗ್ಗೆ  ಭಾರದ್ವಾಜ್ ಅವರಿಗೆ ಪ್ರಶ್ನೆ ಮಾಡಿದಾಗ ಅವರು ದಿನಾಂಕಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಶೀಘ್ರದಲ್ಲಿ ಬಹಿರಂಗಪಡಿಸುತ್ತೇವೆ ಎಂದು ಹೇಳಿದರು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ; ಸಿಬಿಎಸ್ಇ ಮಂಡಳಿಯೂ  ಆಫ್​ಲೈನ್ ಪರೀಕ್ಷೆಗಳ ಬಗ್ಗೆ ಸ್ಪಷ್ಟಪಡಿಸಿದೆ.  ಸಿಬಿಎಸ್​ಸಿ 10 ಮತ್ತು 12ನೇ ತರಗತಿ ಪರೀಕ್ಷೆಗಳು ಪ್ರತಿವರ್ಷದಂತೆ ಫೆಬ್ರವರಿ- ಮಾರ್ಚ್​ನಲ್ಲಿಯೇ ನಡೆಯಲಿದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. 2021ರ ಸಿಬಿಎಸ್​ಇ ಮಂಡಳಿ ಪರೀಕ್ಷೆಗಳ ಬಗ್ಗೆ ಪ್ರಸ್ತುತ ಊಹಾಪೋಹಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ಮಂಡಳಿ ಈ ಸ್ಪಷ್ಟೀಕರಣ ನೀಡಿದೆ.

   ಸಿಬಿಎಸ್‌ಇಯ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಅವರು ಪ್ರಮುಖ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸಿಬಿಎಸ್​ಇ ಮಂಡಳಿಯು 2021ರ ಪರೀಕ್ಷೆಯನ್ನು ವಿಳಂಬಗೊಳಿಸುವ ಸಂಬಂಧ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. 

  ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ವಿದ್ಯಾರ್ಥಿಗಳು ಕೋವಿಡ್-19 ನಿಂದಾಗಿ ಪರೀಕ್ಷೆಗಳ ನಡುವಿನ ದಿನಗಳಲ್ಲಿ ಹೆಚ್ಚು ಅಂತರ ಪಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

  ಇದನ್ನು ಓದಿ: ಊರು ತುಂಬಾ ಇರೋರು ಕುರುಬರೇ, ಆದರೆ ಗ್ರಾಪಂ ಚುನಾವಣೆ ಮೀಸಲಾತಿಯಲ್ಲಿ ಈಶ್ವರಪ್ಪ ಅನ್ಯಾಯ ಮಾಡಿದರು; ಗ್ರಾಮಸ್ಥರ ಆಕ್ರೋಶ!

  ಸೆಪ್ಟೆಂಬರ್‌ನಲ್ಲಿ ನಡೆದ ಸಿಬಿಎಸ್‌ಇ 10 ಮತ್ತು 12 ವಿಭಾಗ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಗ್ಗೆ ಮಾತನಾಡಿದ ಅವರು, “ಸಾಂಕ್ರಾಮಿಕ ರೋಗದ ಮಧ್ಯೆ ಸಿಬಿಎಸ್‌ಇ ಕಂಪಾರ್ಟ್‌ಮೆಂಟ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು ಮತ್ತು ಅದರಿಂದ ಕಲಿಕೆಯ ಆಧಾರದ ಮೇಲೆ ನಾವು 2021 ರಲ್ಲಿ ಬೋರ್ಡ್ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಿರ್ವಹಿಸುತ್ತೇವೆ. ಪರೀಕ್ಷೆಗಳನ್ನು ವಿಳಂಬಗೊಳಿಸುವ ಯಾವುದೇ ಯೋಜನೆಗಳಿಲ್ಲ ಮತ್ತು ಪರೀಕ್ಷೆಗಳು ಎಂದಿನಂತೆ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.

  ಸಿಬಿಎಸ್ಇ ಮಂಡಳಿಯ 2021ರ ಪರೀಕ್ಷೆಗಳ ದಿನಾಂಕಗಳ ಬಗ್ಗೆ  ಭಾರದ್ವಾಜ್ ಅವರಿಗೆ ಪ್ರಶ್ನೆ ಮಾಡಿದಾಗ ಅವರು ದಿನಾಂಕಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಶೀಘ್ರದಲ್ಲಿ ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.
  Published by:HR Ramesh
  First published: