• Home
 • »
 • News
 • »
 • national-international
 • »
 • CBSE 12th Results - ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ಫಲಿತಾಂಶ: ಶೇ. 88.78 ಉತ್ತೀರ್ಣ; ಬೆಂಗಳೂರು ನಂ. 2

CBSE 12th Results - ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ಫಲಿತಾಂಶ: ಶೇ. 88.78 ಉತ್ತೀರ್ಣ; ಬೆಂಗಳೂರು ನಂ. 2

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ವರ್ಷದ 12ನೇ ತರಗತಿ ಸಿಬಿಎಸ್​ಇ ಪರೀಕ್ಷೆಯಲ್ಲಿ ಶೇ. 83.50 ಫಲಿತಾಂಶ ಬಂದಿತ್ತು. ಈ ವರ್ಷ ಇದು ಶೇ. 88.78ಕ್ಕೆ ಏರಿಕೆಯಾಗಿದೆ.

 • Share this:

  ನವದೆಹಲಿ(ಜುಲೈ 13): ಐಸಿಎಸ್​ಇ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾದ ಕೆಲ ದಿನಗಳ ನಂತರ ಇದೀಗ ಸಿಬಿಎಸ್​ಇ ಪಠ್ಯಕ್ರಮದ 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ. ರಾಷ್ಟ್ರಾದ್ಯಂತ ಶೇ. 88.78 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 5.38ರಷ್ಟು ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ವರ್ಷ ಶೇ. 83.40 ಫಲಿತಾಂಶ ಬಂದಿತ್ತು.


  ಪ್ರಾದೇಶಿಕವಾರು ಫಲಿತಾಂಶದಲ್ಲಿ ಬೆಂಗಳೂರು ಈ ಬಾರಿ ಗಮನಾರ್ಹ ಸಾಧನೆ ಮಾಡಿದೆ. ಬೆಂಗಳೂರಿನ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಶೇ. 97.05 ಪಾಸಾಗಿದ್ದಾರೆ. ಕೇರಳದ ತಿರುವನಂತಪುರಂ ನಗರ ತನ್ನ ಸಾಂಪ್ರದಾಯಿಕ ನಂಬರ್ ಒನ್ ಸ್ಥಾನ ಉಳಿಸಿಕೊಂಡಿದೆ. ಇಲ್ಲಿ ಶೇ. 97.67 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.


  ಈ ವರ್ಷದ ಫೆಬ್ರವರಿಯಲ್ಲಿ ನಡೆದ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಗಳಲ್ಲಿ ದೇಶಾದ್ಯಂತ 13,109 ಶಾಲೆಗಳ 11,92,961 ಮಕ್ಕಳು ಪಾಲ್ಗೊಂಡಿದ್ದರು. ಇವರಲ್ಲಿ 10,59,080 ಮಕ್ಕಳು ಉತ್ತೀರ್ಣರಾಗಿದ್ದಾರೆ. 1.34 ಲಕ್ಷ ವಿದ್ಯಾರ್ಥಿಗಳು ನಪಾಸಾಗಿದ್ಧಾರೆ.


  ಮಾಮೂಲಿಯಂತೆ ಈ ಬಾರಿಯೂ ಹುಡುಗರ ಮೇಲೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಹೆಣ್ಣುಮಕ್ಕಳು ಶೇ. 92.15ರಷ್ಟು ಪಾಸಾದರೆ, ಗಂಡುಮಕ್ಕಳು ಶೇ. 86.19ರಷ್ಟು ತೇರ್ಗಡೆಗೊಂಡಿದ್ದಾರೆ. ತೃತೀಯ ಲಿಂಗಿಗಳು ಶೇ. 66.67 ಫಲಿತಾಂಶಕ್ಕೆ ತೃಪ್ತಿಪಡಬೇಕಾಗಿದೆ.


  ಇದನ್ನೂ ಓದಿ: ICSE, ISC Results 2020: ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 99.33, ಐಎಸ್​ಸಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ. 96.84 ಫಲಿತಾಂಶ


  ಈ ಬಾರಿ ಶೇ. 13.24, ಅಂದರೆ 1,57,934 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 38 ಸಾವಿರಕ್ಕೂ ಹೆಚ್ಚು ಮಕ್ಕಳು ಶೇ. 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.


  2020ರ ಸಿಬಿಎಸ್​ಇ 12ನೇ ತರಗತಿ ಪ್ರದೇಶವಾರು ಫಲಿತಾಂಶ ವಿವರ:
  1) ತಿರುವನಂತಪುರಂ: ಶೇ. 97.67
  2) ಬೆಂಗಳೂರು 97.05
  3) ಚೆನ್ನೈ 96.17
  4) ಡೆಲ್ಲಿ ವೆಸ್ಟ್ 94.61
  5) ಡೆಲ್ಲಿ ಈಸ್ಟ್ 94.24
  6) ಪಂಚಕುಲ 92.52
  7) ಚಂಡೀಗಡ 92.04
  8) ಭುಬನೇಶ್ವರ್ 91.46
  9) ಭೋಪಾಲ್ 90.95
  10) ಪುಣೆ 90.24
  11) ಅಜ್ಮೇರ್ 87.60
  12) ನೋಯ್ಡಾ 84.87
  13) ಗುವಾಹತಿ 83.37
  14) ಡೆಹರಾಡೂನ್ 83.22
  15) ಪ್ರಯಾಗ್​ರಾಜ್ 82.49
  16) ಪಾಟ್ನಾ 74.57


  ಇದನ್ನೂ ಓದಿ: Sree Padmanabhaswamy Temple - ಪದ್ಮನಾಭಸ್ವಾಮಿ ದೇವಸ್ಥಾನದ ಮೇಲೆ ರಾಜಮನೆತನದವರಿಗೆ ಈಗಲೂ ಹಕ್ಕಿದೆ: ಸುಪ್ರೀಂ ಕೋರ್ಟ್


  ಮೂರು ದಿನಗಳ ಹಿಂದಷ್ಟೇ ಐಸಿಎಸ್​ಇಯ 10ನೇ ತರಗತಿ ಮತ್ತು ಐಎಸ್​ಸಿಯ 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿತ್ತು 10ನೇ ತರಗತಿಯ ಮಕ್ಕಳಲ್ಲಿ ಶೇ. 99.33 ಮಂದಿ ತೇರ್ಗಡೆಯಾಗಿದ್ದಾರೆ. 12ನೇ ತರಗತಿಯ ಪರೀಕ್ಷೆಗಳಲ್ಲಿ ಶೇ. 96.84 ಫಲಿತಾಂಶ ಬಂದಿತ್ತು.


  ಐಸಿಎಸ್​ಇಯ 10ನೇ ತರಗತಿಯ ಪರೀಕ್ಷೆಯನ್ನ ದೇಶಾದ್ಯಂತ 2,07,902 ಮಕ್ಕಳು ಬರೆದಿದ್ದರು. ಇವರ ಪೈಕಿ 2,06,525 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 1377 ಮಂದಿ ಫೇಲ್ ಆಗಿದ್ದಾರೆ. ಐಎಸ್​ಸಿಯ 12ನೇ ತರಗತಿ ಪರೀಕ್ಷೆಯನ್ನ ಬರೆದ ಒಟ್ಟು 88,409 ವಿದ್ಯಾರ್ಥಿಗಳ ಪೈಕಿ 85,611 ಮಂದಿ ಪಾಸ್ ಆಗಿದ್ದಾರೆ. ಉಳಿದ 2,798 ಮಕ್ಕಳು ಅನುತ್ತೀರ್ಣಗೊಂಡಿದ್ದಾರೆ.

  Published by:Vijayasarthy SN
  First published: