CBSE 10th Result 2020: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಸಿಬಿಎಸ್​ಇ ಶಾಲೆಗಳಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಲಾಗಿತ್ತು. ಕೊರೋನಾ ಅಪ್ಪಳಿಸುವುದಕ್ಕೂ ಮುನ್ನ ಶಾಲೆಗಳಲ್ಲಿ ನಡೆದಿದ್ದ ಪ್ರಾಕ್ಟಿಕಲ್ ಎಕ್ಸಾಂ ಅಥವಾ ಇಂಟರ್ನಲ್ ಅಸೆಸ್ಮೆಂಟ್​ನ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕ ಕೊಡಲಾಗುತ್ತಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಜು.15): ಕೊರೋನಾ ವೈರಸ್​ನಿಂದ ಪರೀಕ್ಷೆಗಳು ತಡವಾಗಿದ್ದರೂ ಬಹುಬೇಗ ಪರೀಕ್ಷಾ ಫಲಿತಾಂಶವನ್ನು ನೀಡುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ. ನಿನ್ನೆ ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಂದಿದೆ. ಇಂದು ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಹೊರ ಬಿದ್ದಿದೆ.

    ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ್​ ಫೋಕರಿಯಲ್​ ನಿಶಾಂಕ್​ ಟ್ವೀಟ್​ ಮಾಡಿದ್ದರು. ಪ್ರೀತಿಯ ಮಕ್ಕಳೇ ಹಾಗೂ ಪಾಲಕರೆ ನಾಳೆ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಹೊರ ಬೀಳಲಿದೆ. ಎಲ್ಲರಿಗೂ ಶುಭವಾಗಲಿ ಎಂದಿದ್ದರು, ಅಂತೆಯೇ 12:30 ಸುಮಾರಿಗೆ ಫಲಿತಾಂಶ ಹೊರ ಬಿದ್ದಿದೆ.

    ಫಲಿತಾಂಶವನ್ನು ಸಿಬಿಎಸ್​ಇ ಅಧಿಕೃತ ವೆಬ್​ಸೈಟ್​ cbse.nic.inನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಇದಲ್ಲದೆ, cbseresults.nic.in ಅಥವಾ results.nic.inನಲ್ಲೂ ವಿದ್ಯಾರ್ಥಿಗಳು ತಮ್ಮ ಸ್ಕೋರ್​ ಚೆಕ್​ ಮಾಡಬಹುದಾಗಿದೆ.

    ಸಿಬಿಎಸ್​ಇ ಶಾಲೆಗಳಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಲಾಗಿತ್ತು. ಕೊರೋನಾ ಅಪ್ಪಳಿಸುವುದಕ್ಕೂ ಮುನ್ನ ಶಾಲೆಗಳಲ್ಲಿ ನಡೆದಿದ್ದ ಪ್ರಾಕ್ಟಿಕಲ್ ಎಕ್ಸಾಂ ಅಥವಾ ಇಂಟರ್ನಲ್ ಅಸೆಸ್ಮೆಂಟ್​ನ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕ ಕೊಡಲಾಗುತ್ತಿದೆ.

    ಕೊರೋನಾ ಭೀತಿಯಿಂದಾಗಿ ಸಿಬಿಎಸ್​ಇ ಮಂಡಳಿ ಪರೀಕ್ಷೆಗಳನ್ನ ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಆಗಿತ್ತು. ಇದರ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್​ಆರ್​ಡಿ ಸಚಿವಾಲಯ ಹಾಗೂ ಸಿಬಿಎಸ್​ಇ ಮಂಡಳಿ ತನ್ನ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿತ್ತು.
    Published by:Rajesh Duggumane
    First published: