west Bengal ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಪ್ರಕರಣದ ಸತ್ಯಾ ಸತ್ಯತೆ ಹಾಗೂ ಅದರ ಔಪಚಾರಿಕತೆ ತಿಳಿಯಲು ಕೇಂದ್ರ ತನಿಖಾ ಸಂಸ್ಥೆ (CBI) ಸೋಮವಾರದಂದು ಕೋಲ್ಕತ್ತಾದ ನಿಜಾಮ್ ಅರಮನೆಯ ಪೂರ್ವ ವಲಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದೆ.
ಸಭೆಯಲ್ಲಿ ಭಾಗವಹಿಸಲು ಪೂರ್ವ ವಲಯದ ಡಿಐಜಿ ಅಖಿಲೇಶ್ ಕುಮಾರ್ ಸಿಂಗ್, ಸಿಬಿಐನ ನಾಲ್ಕು ಜಂಟಿ ನಿರ್ದೇಶಕರು ಕೋಲ್ಕತ್ತಾಗೆ ಬಂದಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಶುಕ್ರವಾರ ನಾಲ್ಕು ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಸಿಬಿಐ ಈಗಾಗಲೇ ನಾಲ್ಕು ವಿಶೇಷ ತನಿಖಾ ತಂಡಗಳನ್ನು (ಎಸ್ಐಟಿ SIT) ರಚಿಸಿದೆ. ಈ ನಾಲ್ಕು ತಂಡಗಳಲ್ಲಿ ಒಟ್ಟು 30 ಅಧಿಕಾರಿಗಳು ಇದ್ದಾರೆ.
ಸಿಬಿಐ ಮೂಲಗಳ ಪ್ರಕಾರ, ಸಾಲ್ಟ್ ಲೇಕ್ ಸಿಜಿಒ ಕಾಂಪ್ಲೆಕ್ಸ್ ಮತ್ತು ನಿಜಾಮ್ ಅರಮನೆಯ ಸಿಬಿಐ ಕಚೇರಿಯ ಬದಲು, ಅವರು ಚುನಾವಣೆಯ ನಂತರದ ಹಿಂಸಾಚಾರ ಪ್ರಕರಣಗಳನ್ನು ಪ್ರತ್ಯೇಕ ಕಚೇರಿಯಿಂದ ತನಿಖೆ ನಡೆಸುತ್ತಾರೆ ಎಂದು ಮಾಹಿತಿ ನೀಡಲಾಗಿದ್ದು, ಕೋಲ್ಕತಾ ಪೋರ್ಟ್ ಟ್ರಸ್ಟ್ ಕಚೇರಿಯಿಂದ ಈ ತನಿಖೆ ನಡೆಯಲಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಸಿಬಿಐ ಅಧಿಕಾರಿಯೊಬ್ಬರು, ತಾತ್ಕಾಲಿಕ ತನಿಖಾ ಕಚೇರಿಯನ್ನು ಹೊಂದುವ ನಿರ್ಧಾರದ ಹಿಂದಿನ ಯೋಜನೆಯ ಬಗ್ಗೆ ಹೀಗೆ ಹೇಳಿದರು. ಬಹುಶಃ ಪ್ರಸ್ತುತ ಇರುವ ಕಚೇರಿಯಲ್ಲಿ ಭದ್ರತೆಯ ಕೊರತೆ ಎದುರಾಗಬಹುದು, ಏಕೆಂದರೆ ನಾಲ್ಕು ರಾಜ್ಯ ನಾಯಕರನ್ನು ನಾರದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಂಧಿಸಿದ ನಂತರ ನಿಜಾಮ ಅರಮನೆಯ ಹೊರಗೆ ಟಿಎಂಸಿ ಕಾರ್ಯಕರ್ತರು ದಿನ ಪ್ರತಿಭಟನೆ ನಡೆಸುತ್ತಿದ್ದರು, ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಮೇ 17 ರಂದು, ಸಿಬಿಐನ ಭ್ರಷ್ಟಾಚಾರ ವಿರೋಧಿ ಶಾಖೆಯು (ಎಸಿಬಿ ACB) ಹಗರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ TMC ಸಚಿವ ಫಿರ್ಹಾದ್ ಹಕೀಂ, ಸುಬ್ರತಾ ಮುಖರ್ಜಿ, ಮಾಜಿ ಮೇಯರ್ ಸೊಬೊನ್ ಚಟರ್ಜಿ ಮತ್ತು ಹಾಲಿ ಶಾಸಕ ಮದನ್ ಮಿತ್ರಾ ಅವರನ್ನು ಬಂಧಿಸಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಿಬಿಐ ತಟಸ್ಥ ಸ್ಥಳದಿಂದ ತನಿಖೆ ನಡೆಸಲು ಬಯಸಿದೆ ಎಂದು ಮೂಲಗಳು ಹೇಳಿವೆ.
ಸಿಬಿಐ ಕೊಲ್ಕತ್ತಾ ಹೈಕೋರ್ಟ್ನ (High court) ಹಿರಿಯ ಪೀಠದ ನಿರ್ದೇಶನದಲ್ಲಿ ಚುನಾವಣೆಯ ನಂತರದ ಹಿಂಸಾಚಾರ ಪ್ರಕರಣದಲ್ಲಿ ಮಹಿಳೆಯರ ಕೊಲೆ ಮತ್ತು ಅವರ ಮೇಲಿನ ದೌರ್ಜನ್ಯ ನಡೆದ ತನಿಖೆಯನ್ನು ಆರಂಭಿಸಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ