• Home
  • »
  • News
  • »
  • national-international
  • »
  • CBI Raid: ಲಾಲು ಪ್ರಸಾದ್ ಯಾದವ್​ಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಸಿಬಿಐ ದಾಳಿ

CBI Raid: ಲಾಲು ಪ್ರಸಾದ್ ಯಾದವ್​ಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಸಿಬಿಐ ದಾಳಿ

ಲಾಲು ಪ್ರಸಾದ್​ ಯಾದವ್​

ಲಾಲು ಪ್ರಸಾದ್​ ಯಾದವ್​

ಮೇವು ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಈ ಹಿಂದೆ ಬಿಹಾರದ ಮಾಜಿ ಮುಖ್ಯಮಂತ್ರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು. ಇದೀಗ ಮತ್ತೆ ಲಾಲು ಪ್ರಸಾದ್​ಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಸಿಬಿಐ ರೇಡ್ ಮಾಡಿದೆ.

ಮುಂದೆ ಓದಿ ...
  • Share this:

ಪಾಟ್ನಾ(ಮೇ.20): ಬಿಹಾರದ (Bihar) ಹಿರಿಯ ರಾಜಕಾರಣಿ ಮತ್ತು ಆರ್‌ಜೆಡಿ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ವಿರುದ್ಧದ ಹೊಸ ಭ್ರಷ್ಟಾಚಾರ ಪ್ರಕರಣಕ್ಕೆ (Corruption Case) ಸಂಬಂಧಿಸಿದಂತೆ ಅವರಿಗೆ ಸಂಬಂಧಿಸಿದ 17 ಆಸ್ತಿಗಳಲ್ಲಿ ಕೇಂದ್ರೀಯ ತನಿಖಾ ದಳ (CBI) ಶುಕ್ರವಾರ ದಾಳಿ ನಡೆಸಿದೆ. ಮೂಲಗಳ ಪ್ರಕಾರ, 'ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಹಗರಣ'ಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಲಾಲು ಅವರ ಮಗಳ ಮೇಲೂ ಪ್ರಕರಣ ದಾಖಲಿಸಿದೆ ಎಂದು ತಿಳಿದುಬಂದಿದೆ. ಪಾಟ್ನಾದಲ್ಲಿರುವ (Patna) ಲಾಲು ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಂಡುಬಂದಿದ್ದಾರೆ.


ವಿವಿಧ ವರದಿಗಳ ಪ್ರಕಾರ, ರೈಲ್ವೆಯಲ್ಲಿ ಉದ್ಯೋಗ ನೀಡುವ ಬದಲು ಲಾಲು ಯಾದವ್ ಅವರ ಕುಟುಂಬ ಸದಸ್ಯರು ಅಗ್ಗದ ಬೆಲೆಗೆ ಭೂಮಿಯನ್ನು ಖರೀದಿಸಿದ್ದಾರೆ. ಈ ರೀತಿಯ ಕನಿಷ್ಠ ಹತ್ತಾರು ಪ್ರಕರಣಗಳ ಪುರಾವೆ ಸಿಬಿಐ ಬಳಿ ಇದೆ ಎಂದೂ ವರದಿಗಳು ಹೇಳಿವೆ. ಅವರು ರೈಲ್ವೇ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಭೂಮಿ ಹಗರಣ ನಡೆದಿತ್ತು. ದಾಳಿಯ ಸುದ್ದಿ ಬಹಿರಂಗವಾದ ನಂತರ, ಬಿಹಾರದ ಮಾಜಿ ಸಿಎಂ ಬೆಂಬಲಿಗರು ಪಾಟ್ನಾದ ಅವರ ನಿವಾಸದ ಮುಂದೆ ಪ್ರತಿಭಟನೆ ಆರಂಭಿಸಿದ್ದರು.


ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ


ಡೊರಾಂಡಾ ಖಜಾನೆಯಿಂದ 139 ಕೋಟಿ ರೂ.ಗೂ ಅಧಿಕ ಹಣ ದುರುಪಯೋಗಪಡಿಸಿಕೊಂಡ ಐದನೇ ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಈ ಹಿಂದೆ ಬಿಹಾರದ ಮಾಜಿ ಮುಖ್ಯಮಂತ್ರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು.


ಪ್ಯಾನ್-ಇಂಡಿಯಾ ಸಿಬಿಐ ದಾಳಿಯ ಕುರಿತು ಪ್ರತಿಕ್ರಿಯಿಸಿದ ಆರ್‌ಜೆಡಿ ನಾಯಕ ಅಲೋಕ್ ಮೆಹ್ತಾ, ಇದು ಬಲವಾದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ.  ತನಿಖಾ ಸಂಸ್ಥೆಗಳ ನಿರ್ದೇಶನ ಮತ್ತು ಕ್ರಮಗಳು ಸಂಪೂರ್ಣವಾಗಿ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.


ಉದ್ದೇಶಪೂರ್ವಕವಾಗಿ ತೊಂದರೆ


“ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ಈ ರೀತಿ ತೊಂದರೆ ನೀಡುತ್ತಿರುವುದು ದುರದೃಷ್ಟಕರ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಸಹೋದರ ಪ್ರಭುನಾಥ್ ಯಾದವ್ ಹೇಳಿದ್ದಾರೆ.


ಮುಖ್ಯಮಂತ್ರಿಯಾಗಿದ್ದಾಗ ನಡೆದ ಅಕ್ರಮ


1991 ಮತ್ತು 1996 ರ ನಡುವೆ ಲಾಲು ಯಾದವ್ ಮುಖ್ಯ ಮಂತ್ರಿಯಾಗಿದ್ದಾಗ ಬಿಹಾರದ ಪಶುಸಂಗೋಪನೆ ಇಲಾಖೆಯಿಂದ ಹಣವನ್ನು ತೆಗೆದುಕೊಂಡಿದೆ. ಶಿಕ್ಷೆಯ ಭಾಗವಾಗಿ ಅವರು ಈಗಾಗಲೇ 3.5 ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದಾರೆ. ಅಲ್ಲದೇ, ಲಾಲು ಯಾದವ್ ಅವರು ಹಿಂದಿನ ಎಲ್ಲಾ ನಾಲ್ಕು ಅಪರಾಧಗಳನ್ನು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Fodder Scam Case: ಮೇವು ಹಗರಣ ಐದನೇ ಪ್ರಕರಣ; ಲಾಲೂ ಪ್ರಸಾದ್ ಯಾದವ್​ ದೋಷಿ


ಪ್ರಕರಣ ಸಂಬಂಧ 98 ಜನರು ಹಾಜರಾಗಿದ್ದರು, ಅವರಲ್ಲಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಉಳಿದವರಲ್ಲಿ ಮಾಜಿ ಸಂಸದ ಜಗದೀಶ್ ಶರ್ಮಾ ಮತ್ತು ಅಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಧ್ರುವ ಭಗತ್ ಸೇರಿದಂತೆ 35 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


ಪಕ್ಷದಲ್ಲಿ ಲಾಲೂ ಮಗನ ಅಧಿಪತ್ಯ


ಲಾಲು ಪ್ರಸಾದ್​ ಅನುಪಸ್ಥಿತಿಯಲ್ಲಿ ಕಳೆದ ವರ್ಷ 2020ರಲ್ಲಿ ಅವರ ಮಗ ತೇಜಸ್ವಿ ಯಾದವ್ ಬಿಹಾರ ಚುನಾವಣೆಯಲ್ಲಿ ಆರ್​​​​​ಜೆಡಿಯನ್ನು ಮುನ್ನಡೆಸಿದರು ವಿಧಾನಸಭಾ ಚುನಾವಣೆಯಲ್ಲಿ ಆರಜೆಡಿ ಪಕ್ಷದ ಪ್ರಬಲ ಪ್ರದರ್ಶನ ನೀಡಿತು. ಲಾಲು ಯಾದವ್​ ಅಗೈರಿನಲ್ಲೂ ತೇಜಸ್ವಿ ಪಕ್ಷವನ್ನು ಪ್ರಬಲವಾಗಿ ಮುನ್ನಡೆಸಿದರು. ಪರಿಣಾಮ ಪಕ್ಷ ವಿಪಕ್ಷ ಸ್ಥಾನ ಪಡೆಯಿತು.


ಇದನ್ನೂ ಓದಿ: ಬಹುಕೋಟಿ ರೂಪಾಯಿ ಮೇವು ಹಗರಣ: 4ನೇ ಪ್ರಕರಣದಲ್ಲೂ ಲಾಲೂಗೆ ಶಿಕ್ಷೆ


ಪಕ್ಷದಲ್ಲಿ ತೇಜಸ್ವಿಯಾದವ್​ ಪ್ರಬಲವಾಗಿರುವ ಹಿನ್ನಲೆ ಲಾಲು ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಪಕ್ಷದ ಅಧಿಕಾರವನ್ನು ತಮ್ಮ ಪುತ್ರ ತೇಜಸ್ವಿ ಯಾದವ್‌ಗೆ ಹಸ್ತಾಂತರಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಈ ವರದಿಗಳನ್ನು  ಪ್ರಸಾದ್​ ಯಾದವ್​ ತಳ್ಳಿ ಹಾಕಿದರು.

Published by:Divya D
First published: