CBI vs Kolkata Police | ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್​ನನ್ನು 8 ಗಂಟೆ ವಿಚಾರಣೆ ನಡೆಸಿದ ಸಿಬಿಐ

ಶಾರದಾ ಚಿಟ್​ ಫಂಡ್​ ಹಗರಣ ಸಂಬಂಧ ಸಿಬಿಐ ವಿಚಾರಣೆಗೆ ಸಹಕರಿಸುವಂತೆ ಕೋಲ್ಕತ್ತ ಪೊಲೀಸ್​ ಕಮಿಷನರ್ ರಾಜೀವ್ ಕುಮಾರ್ ಅವರಿಗೆ ಸಿಬಿಐ ಸೂಚನೆ ನೀಡಿತ್ತು. ಆದರೆ, ಯಾವುದೇ ಕಾರಣಕ್ಕು ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್​ ಕಳೆದ ಮಂಗಳವಾರ ಹೇಳಿತ್ತು.

HR Ramesh | news18
Updated:February 9, 2019, 9:13 PM IST
CBI vs Kolkata Police | ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್​ನನ್ನು 8 ಗಂಟೆ ವಿಚಾರಣೆ ನಡೆಸಿದ ಸಿಬಿಐ
ಸಿಬಿಐ ಕಚೇರಿಯಿಂದ ಹೊರಟ ಕೋಲ್ಕತ್ತ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್
HR Ramesh | news18
Updated: February 9, 2019, 9:13 PM IST
ಕೋಲ್ಕತ್ತ: ಶಾರದಾ ಚಿಟ್​ ಫಂಡ್​ ಹಗರಣದಲ್ಲಿ ಸಾಕ್ಷ್ಯಗಳ ನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಕೋಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಸಿಬಿಐ ಇಂದು ಶಿಲ್ಲಾಂಗ್​ನಲ್ಲಿ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಅನಗತ್ಯ ವಿವಾದದಿಂದ ದೂರ ಉಳಿಯುವ ಸಲುವಾಗಿ ಮೇಘಾಲಯದ ರಾಜಧಾನಿ ಶಿಲ್ಲಾಂಗ್​ನಲ್ಲಿಯೇ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್​ ಆದೇಶಿಸಿತ್ತು. ರಾಜೀವ್​ ಕುಮಾರ್ ಅವರನ್ನು ಸಿಬಿಐ ನಾಳೆಯೂ ಕೂಡ ವಿಚಾರಣೆ ನಡೆಸಲಿದೆ.

ಇಂದು ಬೆಳಗ್ಗೆ 11 ಗಂಟೆಗೆ ಶಿಲ್ಲಾಂಗ್​ನ ಸಿಬಿಐ ಕಚೇರಿಯಲ್ಲಿ ರಾಜೀವ್​ ಕುಮಾರ್ ಅವರ ವಿಚಾರಣೆ ಆರಂಭವಾಗಿ ರಾತ್ರಿ 1.30ರವರೆಗೆ ನಡೆಯಿತು.

ರಾಜೀವ್​ ಕುಮಾರ್ ಅವರೊಂದಿಗೆ ಕೋಲ್ಕತ್ತದ ಮೂವರು ಉನ್ನತ ಪೊಲೀಸ್​ ಅಧಿಕಾರಿಗಳು ಇದ್ದರು. ಇವರಿಗೆ ನಗರದಲ್ಲಿ ಉಳಿದುಕೊಳ್ಳಲು ಉತ್ತಮ ದರ್ಜೆಯ ಹೋಟೆಲ್​ ವ್ಯವಸ್ಥೆ ಮಾಡಲಾಗಿದೆ. ವಿಚಾರಣೆ ನಡೆಸಲು ದೆಹಲಿಯಿಂದ ಶಿಲ್ಲಾಂಗ್​ಗೆ ಸಿಬಿಐ ಅಧಿಕಾರಿಗಳ ತಂಡ ಆಗಮಿಸಿದೆ. ವಿಚಾರಣೆ ವೇಳೆ ಈ ಮೂವರು ಅಧಿಕಾರಿಗಳು ಒಂದೇ ಕೊಠಡಿಯಲ್ಲಿ ಉಳಿದುಕೊಳ್ಳಲು ಅವಕಾಶ ನಿರಾಕರಿಸಲಾಗಿದೆ.

ಶಾರದಾ ಚಿಟ್​ ಫಂಡ್​ ಹಗರಣ ಸಂಬಂಧ ಸಿಬಿಐ ವಿಚಾರಣೆಗೆ ಸಹಕರಿಸುವಂತೆ ಕೋಲ್ಕತ್ತ ಪೊಲೀಸ್​ ಕಮಿಷನರ್ ರಾಜೀವ್ ಕುಮಾರ್ ಅವರಿಗೆ ಸಿಬಿಐ ಸೂಚನೆ ನೀಡಿತ್ತು. ಆದರೆ, ಯಾವುದೇ ಕಾರಣಕ್ಕು ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್​ ಕಳೆದ ಮಂಗಳವಾರ ಹೇಳಿತ್ತು.

ಇದನ್ನು ಓದಿ: CBI vs Kolkata Police: ಸಿಬಿಐನ ನಾಗೇಶ್ವರ್​ ರಾವ್​ ಹೆಂಡತಿ ಮಾಲೀಕತ್ವದ ಕಂಪನಿ ಮೇಲೆ ದಾಳಿ ನಡೆಸಿದ ಕೋಲ್ಕತ್ತ ಪೊಲೀಸರು

ಸುಪ್ರೀಂಕೋರ್ಟ್​ನಲ್ಲಿ ಸಿಬಿಐ, ರಾಜೀವ್ ಕುಮಾರ್ ಅವರು ಶಾರದಾ ಚಿಟ್​ ಫಂಡ್​ ಹಗರಣ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್​ ಸಾಕ್ಷ್ಯಗಳನ್ನು ತಿದ್ದುಪಡಿ ಮಾಡಲಾಗಿದೆ. ಮತ್ತು ತನಿಖಾ ಸಂಸ್ಥೆಗೆ ದಾಖಲೆಗಳನ್ನು ಹಸ್ತಾಂತರಿಸುವಂತೆ ಕೇಳಿಕೊಂಡಿತ್ತು.
 ಕಳೆದ ಭಾನುವಾರ ಸಿಬಿಐ ಅಧಿಕಾರಿಗಳು ರಾಜೀವ್​ ಕುಮಾರ್ ಅವರ ನಿವಾಸಕ್ಕೆ ತೆರಳಿ ಪ್ರಕರಣ ಸಂಬಂಧ ವಿಚಾರಣೆ ನಡೆಸಿತ್ತು. ಆದರೆ, ಇದಕ್ಕೆ ಪಶ್ಚಿಮಬಂಗಾಳ ಪೊಲೀಸ್​ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಬಿಐ ದಾಳಿಯನ್ನು ಖಂಡಿಸಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರು ದಿನ ಸಂವಿಧಾನ ಉಳಿಸಿ ಎಂದು ಪ್ರತಿಭಟನೆ ನಡೆಸಿದ್ದರು.

Loading...

ನೆನ್ನೆ ಕೂಡ ಸಿಬಿಐ ಮಾಜಿ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ್ ರಾವ್ ಅವರ ಪತ್ನಿ ಮಾಲೀಕತ್ವದ ಕಂಪನಿ ಮೇಲೆ ಕೋಲ್ಕತ್ತ ಪೊಲೀಸ್​ ದಾಳಿ ನಡೆಸಿದ್ದರು.

First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...