ಹತ್ರಾಸ್ ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ; ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್​ಶೀಟ್

ಯುವತಿ ಮೃತಪಟ್ಟ ಬಳಿಕ ಸೆಪ್ಟೆಂಬರ್ 30ರ ರಾತ್ರಿ ಆಕೆಯ ಹುಟ್ಟೂರಿನಲ್ಲಿ ಮೃತದೇಹವನ್ನು ಪೊಲೀಸರೆ ಸಂಸ್ಕಾರ ಮಾಡಿದ್ದರು. ಆಕೆಯ ಅಂತಿಮ ಸಂಸ್ಕಾರದ ವೇಳೆ ಸ್ಥಳೀಯ ಪೊಲೀಸರು ಆಕೆಯ ಮನೆಯವರಿಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡದೆ ಬಲವಂತವಾಗಿ ಅವರೇ ದೇಹವನ್ನು ದಹಿಸಿದ್ದರು ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪ ಮಾಡಿದ್ದರು. ಆದರೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು, ಕುಟುಂಬಸ್ಥರ ಆಶಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು ಎಂದು ಹೇಳಿದ್ದರು.

ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ, ಸಾವನ್ನಪ್ಪಿದ ಯುವತಿಯ ದೇಹದ ಅಂತ್ಯಸಂಸ್ಕಾರ ಮಾಡಿದ ಪೊಲೀಸರು.

ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ, ಸಾವನ್ನಪ್ಪಿದ ಯುವತಿಯ ದೇಹದ ಅಂತ್ಯಸಂಸ್ಕಾರ ಮಾಡಿದ ಪೊಲೀಸರು.

 • Share this:
  ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಸಿಬಿಐ ಅಲ್ಲಿನ ಮೇಲ್ಜಾತಿಯ ನಾಲ್ವರು ಆರೋಪಿಗಳ ಮೇಲೆ ಚಾರ್ಜ್ ಶೀಟ್ ದಾಖಲಿಸಿದೆ. ಇದಕ್ಕೂ ಮುನ್ನ  ಉತ್ತರ ಪ್ರದೇಶ ಪೊಲೀಸರು ಸಂತ್ರಸ್ತ ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ ಎಂದು ಹೇಳಿದ್ದರು.

  ಆದಾಗ್ಯೂ, ಸಂತ್ರಸ್ತ ಯುವತಿ ಮೇಲೆ ಆರೋಪಿಗಳು ಗ್ಯಾಂಗ್ ರೇಪ್ ನಡೆಸಿ, ಹತ್ಯೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ. ಎಸ್​ಸಿ, ಎಸ್​ಟಿ ದೌರ್ಜನ್ಯ ಕಾಯ್ದೆಯಡಿ ವಿಶೇಷ ವರದಿ ದಾಖಲಿಸಲಾಗಿದೆ. ಸೆಕ್ಷನ್ 376 ಡಿ ಅಡಿ ಅತ್ಯಾಚಾರ, ಸೆಕ್ಷನ್ 302 ಅಡಿ ಕೊಲೆ, ಹಾಗೂ ಸೆಕ್ಷನ್ 354 ಹಾಗೂ 376 ಎ ಅಡಿ ಪ್ರಕರಣ ದಾಖಲಿಸಲಾಗಿದೆ.

  ನಾಲ್ವರು ಆರೋಪಿಗಳನ್ನು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ ಎಂದು ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಮುನ್ನಾ ಸಿಂಗ್ ಪುಂಧೀರ್ ಹೇಳಿದ್ದಾರೆ. ಸಿಬಿಐ ವರದಿಯನ್ನು ವಿಶೇಷ ಎಸ್‌ಸಿ-ಎಸ್‌ಟಿ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.  ಸಂದೀಪ್, ಲುವೇಕ್ಷು, ರವಿ ಮತ್ತು ರಾಮು ಎಂಬ ನಾಲ್ವರು ಆರೋಪಿಗಳ ಮೇಲೆ ಚಾರ್ಜ್​ಶೀಟ್ ದಾಖಲಿಸಲಾಗಿದ್ದು, ನಾಲ್ವರನ್ನು ಸಿಬಿಐ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

  ಇದನ್ನು ಓದಿ: ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ 10 ಅರ್ಥಶಾಸ್ತ್ರಜ್ಞರು

  ಸೆಪ್ಟೆಂಬರ್ 14ರಂದು ಹತ್ರಾಸ್​ನಲ್ಲಿ ನಾಲ್ವರು ಪುರುಷರು 19 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ ಮಾಡಿದ್ದರು. ಘಟನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವತಿ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 29ರಂದು ಅಸುನೀಗಿದ್ದಳು.

  ಯುವತಿ ಮೃತಪಟ್ಟ ಬಳಿಕ ಸೆಪ್ಟೆಂಬರ್ 30ರ ರಾತ್ರಿ ಆಕೆಯ ಹುಟ್ಟೂರಿನಲ್ಲಿ ಮೃತದೇಹವನ್ನು ಪೊಲೀಸರೆ ಸಂಸ್ಕಾರ ಮಾಡಿದ್ದರು. ಆಕೆಯ ಅಂತಿಮ ಸಂಸ್ಕಾರದ ವೇಳೆ ಸ್ಥಳೀಯ ಪೊಲೀಸರು ಆಕೆಯ ಮನೆಯವರಿಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡದೆ ಬಲವಂತವಾಗಿ ಅವರೇ ದೇಹವನ್ನು ದಹಿಸಿದ್ದರು ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪ ಮಾಡಿದ್ದರು. ಆದರೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು, ಕುಟುಂಬಸ್ಥರ ಆಶಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು ಎಂದು ಹೇಳಿದ್ದರು.
  Published by:HR Ramesh
  First published: