2008ರ ಅಸ್ಸಾಂ ಸರಣಿ ಸ್ಫೋಟ; 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ನಾಲ್ವರು ಖುಲಾಸೆ

2008ರ ಅಕ್ಟೋಬರ್​ 30ರಂದು ಅಸ್ಸಾಂನ ಗುವಾಹಟಿ, ಕೋಕ್ರಾಜರ್​, ಬರ್ಪೇಟ ಸೇರಿದಂತೆ ಹಲವು ಕಡೆ ಸರಣಿ ಬಾಂಬ್​ ಸ್ಫೋಟವಾಗಿತ್ತು. ಘಟನೆಯಲ್ಲಿ 88 ಜನರು ಸಾವನ್ನಪ್ಪಿದ್ದರು.

sushma chakre | news18
Updated:January 30, 2019, 5:11 PM IST
2008ರ ಅಸ್ಸಾಂ ಸರಣಿ ಸ್ಫೋಟ; 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ನಾಲ್ವರು ಖುಲಾಸೆ
2008ರ ಅಸ್ಸಾಂ ಬಾಂಬ್​ ಸ್ಫೋಟದ ಸ್ಥಳ ಪರಿಶೀಲಿಸುತ್ತಿರುವ ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್
sushma chakre | news18
Updated: January 30, 2019, 5:11 PM IST
ನವದೆಹಲಿ (ಜ. 30): ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊಡೋಲ್ಯಾಂಡ್​ (ಎನ್​ಡಿಎಫ್​ಬಿ) ಸಂಸ್ಥಾಪಕ ರಂಜನ್ ದೈಮರಿ ಸೇರಿದಂತೆ 10 ಆರೋಪಿಗಳಿಗೆ 2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣದ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇಂದು ಅಂತಿಮ ತೀರ್ಪಿನ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಇತರೆ ಮೂವರು ಆರೋಪಿಗಳಾದ ಪ್ರಭಾತ್ ಬೊಡೊ, ಜಯಂತಿ ಬಸುಮತರಿ ಮತ್ತು ಮಥುರ ಬ್ರಹ್ಮ ಅವರಿಗೆ ದಂಡ ವಿಧಿಸಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಲಿದೆ. ವಿಚಾರಣೆ ಇದ್ದುದರಿಂದ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ಚಿನ್ನ ದೋಚಲು ಸಿನಿಮೀಯ ಶೈಲಿಯಲ್ಲಿ ನಡೆದಿತ್ತು ಕೊಲೆ; ಕೊನೆಗೂ ಪ್ರಕರಣ ಭೇದಿಸಿದ ಪೊಲೀಸರು

2008ರ ಅಕ್ಟೋಬರ್​ 30ರಂದು ಅಸ್ಸಾಂ 4 ಜಿಲ್ಲೆಗಳಲ್ಲಿ 11 ಸರಣಿ ಬಾಂಬ್​ಗಳು ಸ್ಫೋಟಗೊಂಡು 88 ಜನರು ಸಾವನ್ನಪ್ಪಿ 548 ಜನರು ಗಾಯಗೊಂಡಿದ್ದರು. ಅದೇ ವರ್ಷ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ರಂಜನ್​ ದೈಮರಿಯನ್ನು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿತ್ತು. ನಂತರ ಅವರನ್ನು 2010ರಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. 2013ರಲ್ಲಿ ಜಾಮೀನಿನ ಮೂಲಕ ದೈಮರಿ ಹೊರಬಂದಿದ್ದರು.

ರಂಜನ್ ದೈಮರಿ ಜೊತೆಗೆ ಜಾರ್ಜ್ ಬೊಡೊ, ಬಿ ತರೈ, ರಾಜು ಸರ್ಕಾರ್, ಅಂಚೈ ಬೊಡೊ, ಇಂದ್ರ ಬ್ರಹ್ಮ, ಲೊಕೊ ಬಾಸುಮತರಿ, ಖರ್ಗೇಶ್ವರ ಬಸುಮತಲಿ, ಅಜಯ್ ಬಸುಮತರಿ ಮತ್ತು ರಾಜೇನ್ ಗೊಯರಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ ಜೀವಾವಧಿ ಶಿಕ್ಷೆಯನ್ನು ಘೋಷಿಸಿದ್ದಾರೆ.

First published:January 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...