ಸಬ್​ಮೆರಿನ್​ ರಹಸ್ಯ ಮಾಹಿತಿ ರವಾನೆ: ಇಬ್ಬರು ನೌಕ ಕಮಾಂಡರ್​​ ಸೇರಿ 6ಜನರ ವಿರುದ್ಧ ಚಾರ್ಜ್​ಶೀಟ್​​

ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಎಂಆರ್‌ಎಲ್‌ಸಿ ಕಾರ್ಯಕ್ರಮದ ಗೌಪ್ಯ ವಾಣಿಜ್ಯ ಮಾಹಿತಿಯನ್ನು ಅನಧಿಕೃತವಾಗಿ ನೀಡಲಾಗಿದೆ

ಸಬ್​ಮೆರಿನ್​

ಸಬ್​ಮೆರಿನ್​

 • Share this:
  ನವದೆಹಲಿ (ನ. 2):  ಭಾರತದ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆ ( Kilo Class submarin) ಬಗ್ಗೆ ಗೌಪ್ಯ ಮಾಹಿತಿಯನ್ನು ನೀಡಿದ ಆರೋಪದ ಮೇಲೆ ಆರು ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಆರೋಪ ಪಟ್ಟಿ ಸಲ್ಲಿಸಿದೆ. ಸಬ್​ ಮೇರಿನ್​ ಕುರಿತಾದ ಕೆಲವು ರಹಸ್ಯ ಮಾಹಿತಿಗಳನ್ನು ಇವರು ಅನಧಿಕೃತ ವ್ಯಕ್ತಿಗಳಿಗೆ ರವಾನಿಸಿದ್ದರು. ಈ ಆರೋಪದ ಮೇಲೆ ಇಬ್ಬರು ಕಮಾಂಡರ್‌ಗಳು ಮತ್ತು ಇಬ್ಬರು ನಿವೃತ್ತ ಭಾರತೀಯ ನೌಕಾಪಡೆ ಅಧಿಕಾರಿಗಳು (Navy Commander) ಸೇರಿದಂತೆ ಆರು ಜನರ ವಿರುದ್ಧ ಚಾರ್ಜ್​ ಶೀಟ್ (charge Sheet)​ ಹಾಕಲಾಗಿದೆ. ಈ ಆರು ಜನರ ವಿರುದ್ಧ ಆರು ಜನರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  ನೌಕಪಡೆಯ ಮಾಜಿ ಅಧಿಕಾರಿ ಬಂಧನದ ಬಳಿಕ ಪ್ರಕರಣ ಬೆಳಕಿಗೆ

  ಭಾರತದ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಎಂಆರ್‌ಎಲ್‌ಸಿ ಕಾರ್ಯಕ್ರಮದ ಗೌಪ್ಯ ವಾಣಿಜ್ಯ ಮಾಹಿತಿಯನ್ನು ಅನಧಿಕೃತವಾಗಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಈ ಪ್ರಕರಣ ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ರಣದೀಪ್ ಸಿಂಗ್ ಮತ್ತು ಎಸ್ ಜೆ ಸಿಂಗ್ ಅವರನ್ನು ಸೆಪ್ಟೆಂಬರ್ 3ರಂದು ಸಿಬಿಐ ಬಂಧಿಸಿದ ಬಳಿಕ ಬೆಳಕಿಗೆ ಬಂದಿದೆ.

  2 ಕೋಟಿ ರೂ ಹಣ ವಶಕ್ಕೆ

  ಕಮೋಡೋರ್ ರಣದೀಪ್ ಸಿಂಗ್ (ನಿವೃತ್ತ) ಅವರ ಆಸ್ತಿಯಲ್ಲಿ ಶೋಧನೆಯಲ್ಲಿ ಸುಮಾರು 2 ಕೋಟಿ ರೂ ನಗದು ವಶಪಡಿಸಿಕೊಳ್ಳಲಾಗಿದೆ. ಸಿಬಿಐ ನಂತರ ಪಶ್ಚಿಮ ನೌಕಾ ಕಮಾಂಡ್ ಕಮಾಂಡರ್ ಅಜಿತ್ ಕುಮಾರ್ ಪಾಂಡೆ ಅವರನ್ನು ಬಂಧಿಸಿದೆ. ಕಮಾಂಡರ್ ಪಾಂಡೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಅದೇ ಪ್ರಧಾನ ಕಚೇರಿಯಲ್ಲಿ ನಿಯೋಜಿಸಲಾದ ಮತ್ತೊಬ್ಬ ಕಮಾಂಡರ್ ಕೂಡ ಬಂಧಿಸಲಾಗಿದೆ.

  ಇದನ್ನು ಓದಿ: ಗೆಲುವಿನ ನಗೆ ಬೀರಿದ ದೀದಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​; ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ

  ಸಿಬಿಐ ಮೂಲಗಳ ಪ್ರಕಾರ, ಈ ಇಬ್ಬರು ಕಮಾಂಡರ್‌ಗಳು ಕಿಲೋ ಕ್ಲಾಸ್ ಸಬ್‌ಮೆರಿನ್‌ಗಳನ್ನು ಮರು ಹೊಂದಿಸುವ ಬಗ್ಗೆ ಗೌಪ್ಯ ವಾಣಿಜ್ಯ ಮಾಹಿತಿಯನ್ನು ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನಿವೃತ್ತ ನೌಕಾಪಡೆಯ ಅಧಿಕಾರಿಗಳಿಗೆ ರವಾನಿಸುತ್ತಿದ್ದರು.

  ಇದನ್ನು ಓದಿ: 720ಕ್ಕೆ 720 ಅಂಕ ಪಡೆದ ಮೃಣಾಲ್ ಪ್ರತಿದಿನ ಅಭ್ಯಸಿಸಿದ್ದು ಕೇವಲ 4 ಗಂಟೆ..!

  12ಕ್ಕೂ ಹೆಚ್ಚು ಮಂದಿ ವಿಚಾರಣೆ

  ನಿವೃತ್ತರಾದ ಕಮಾಂಡರ್ ಎಸ್‌ಜೆ ಸಿಂಗ್ ಅವರು ಭಾರತೀಯ ನೌಕಾಪಡೆಯ ಯೋಜನೆಗಳಲ್ಲಿ ಆಸಕ್ತಿ ಹೊಂದಿರುವ ಕೊರಿಯಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ರಿಯರ್ ಅಡ್ಮಿರಲ್ ಸೇರಿದಂತೆ ಕನಿಷ್ಠ 12ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿದೆ.

  ಹೆಚ್ಚಿನ ತನಿಖೆ ಆರಂಭ

  ಬಂಧಿತ ಆರೋಪಿಗಳಿಗೆ ಜಾಮೀನು ಸಿಗದಂತೆ ತಡೆಯಲು ಸಿಬಿಐ ಇಂದು ಆರೋಪಪಟ್ಟಿ ಸಲ್ಲಿಸಲು ನಿರ್ಧರಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

  ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು, ಸಿಬಿಐ ಸೆಪ್ಟೆಂಬರ್ 2 ರಂದು ದಾಖಲಿಸಿದ ಎಫ್‌ಐಆರ್ ಅನ್ನು ಸಹ ಬಹಿರಂಗಗೊಳಿಸಿಲ್ಲ. ಈ ಸಂಬಂಧ ಸಿಬಿಐನಲ್ಲಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸುತ್ತಿದೆ.
  Published by:Seema R
  First published: