ನಟ ಸುಶಾಂತ್ ಸಿಂಗ್ ಪ್ರಕರಣ; ತನಿಖೆ ಆರಂಭಿಸಿದ ಸಿಬಿಐ, ಮುಂಬೈ ಪೊಲೀಸರಿಂದ ಎಲ್ಲಾ ಮಹತ್ವದ ದಾಖಲೆಗಳ ಹಸ್ತಾಂತರ

ನಟ ಶವ ಪರೀಕ್ಷೆ ಮತ್ತು ವಿಧಿ ವಿಜ್ಞಾನ ವರದಿಗಳನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಲಾಗಿದೆ. ಮುಂಬೈ ಪೊಲೀಸ್ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಡಿಸಿಪಿ ಅಭಿಷೇಕ್ ತ್ರಿಮುಖೆಯನ್ನೂ ಸಿಬಿಐ ತಂಡ ಭೇಟಿ ಮಾಡಿ ಮಹತ್ವದ ಅಂಶಗಳನ್ನು ಕಲೆಹಾಕಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನಟ ಸುಶಾಂತ್‌ ಸಿಂಗ್ ರಜಪೂತ್‌.

ನಟ ಸುಶಾಂತ್‌ ಸಿಂಗ್ ರಜಪೂತ್‌.

  • Share this:
ಮುಂಬೈ (ಆಗಸ್ಟ್‌ 21); ನಟ ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ಬೆನ್ನಿಗೆ, ಕೇಂದ್ರ ತನಿಖಾ ದಳದ ಅಧಿಕಾರಿಗಳು ತನಿಖೆಯ ಜಾಡು ಹಿಡಿದು ಕಾರ್ಯ ಪ್ರವೃತ್ತರಾಗಿದ್ದಾರೆ. ಅಲ್ಲದೆ, ನಟನ ಸಾವಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಮತ್ತು ವರದಿಗಳನ್ನು ಮುಂಬೈ ಪೊಲೀಸರಿಂದ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಿಬಿಐನ ವಿಶೇಷ ತನಿಖಾ ತಂಡವು ವಿಧಿವಿಜ್ಞಾನ ತಜ್ಞರನ್ನೊಳಗೊಂಡ ಸಂಪೂರ್ಣ ತಂಡದೊಂದಿಗೆ ಗುರುವಾರ ಸಂಜೆಯೇ ಮುಂಬೈಗೆ ಬಂದಿಳಿದಿದ್ದಾರೆ. ಅಲ್ಲದೆ, ರಾಷ್ಟ್ರ ಮಟ್ಟದಲ್ಲಿ ಮಾಧ್ಯಮಗಳ ಗಮನ ಸೆಳೆದಿರುವ ಪ್ರಕರಣದ ತನಿಖೆಯನ್ನು ಈಗಾಗಲೇ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

ತನಿಖೆ ಆರಂಭಿಸುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ನಟ ಸುಶಾಂತ್ ಸಿಂಗ್ ಅವರ ಅಡುಗೆ ಭಟನನ್ನು ಸಾಂತಾ ಕ್ರೂಜ್ ಉಪನಗರದಲ್ಲಿರುವ ಡಿಆರ್‌ಡಿಒ ಮತ್ತು ಐಎಎಫ್ ಅತಿಥಿಗೃಹಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಸಿಬಿಐ ಅಧಿಕಾರಿಯೊಬ್ಬರ ಪಕ್ಕದಲ್ಲಿ ನಟ ಸುಶಾಂತ್ ಅವರ ಅಡಿಗೆ ಭಟ್ಟ ಕುಳಿತಿದ್ದ ವಾಹನವೊಂದು ಅತಿಥಿ ಗೃಹ ಸಂಕೀರ್ಣಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಅಲ್ಲದೆ, ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಜನರಿಂದಲೂ ಮಹತ್ವದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ನಟ ಶವ ಪರೀಕ್ಷೆ ಮತ್ತು ವಿಧಿ ವಿಜ್ಞಾನ ವರದಿಗಳನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಲಾಗಿದೆ. ಮುಂಬೈ ಪೊಲೀಸ್ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಡಿಸಿಪಿ ಅಭಿಷೇಕ್ ತ್ರಿಮುಖೆಯನ್ನೂ ಸಿಬಿಐ ತಂಡ ಭೇಟಿ ಮಾಡಿ ಮಹತ್ವದ ಅಂಶಗಳನ್ನು ಕಲೆಹಾಕಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : Tianlei 500: ಚೀನಾದ ಹೊಸ ಸಮರಾಸ್ತ್ರಕ್ಕೆ ಅಮೆರಿಕ ಕೂಡ ಆತಂಕ; ಎನಿದೆ ಈ ಚೀನೀ ಸ್ಕೈ ಥಂಡರ್ ವಿಶೇಷತೆ?

34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಜೂನ್ 14 ರಂದು ಉಪನಗರ ಬಾಂದ್ರಾದಲ್ಲಿರುವ ಅವರ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಹೀಗಾಗಿ ತನಿಖೆಗೆ ಸಂಬಂಧಿಸಿದಂತೆ ನಟನ ಹಣಕಾಸಿನ ವಹಿವಾಟುಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಟ ಸುಶಾಂತ್‌ ಸಿಂಗ್ ರಜಪೂತ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಳೆದ ಬುಧವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಲು ಹಸಿರು ನಿಶಾನೆ ನೀಡಿತ್ತು. ಹೀಗಾಗಿ ಇಂದಿನಿಂದ ಸಿಬಿಐ ಅಧಿಕೃತವಾಗಿ ನಟ ಸುಶಾಂತ್ ಪ್ರಕರಣದ ತನಿಖೆಯ ಬೆನ್ನುಬಿದ್ದಿದ್ದಾರೆ.
Published by:MAshok Kumar
First published: