ಸಿಬಿಐ ಅಧಿಕಾರಿಗೇ 16 ಲಕ್ಷ ಲಂಚ ಕೊಡಲು ಹೋದ ಗೃಹ ಇಲಾಖೆ ಅಧಿಕಾರಿ ಬಂಧನ

ಆರೋಪಿ ಧೀರಜ್​ ಕುಮಾರ್ ಗೃಹ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ನಿಯೋಜನೆ ಪಟ್ಟಿ ಮಾಡುವ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಪ್ರಕರಣವೊಂದರಲ್ಲಿ ನಡೆಯುತ್ತಿದ್ದ ಪ್ರಾಥಮಿಕ ತನಿಖೆಯ ಮೇಲೆ ಪ್ರಭಾವ ಬೀರಲು ಆರೋಪಿಗಳು ತಮಗೆ 2 ಕೋಟಿ ಲಂಚ ಕೊಡಲು ಮುಂದಾಗಿದ್ದರು

G Hareeshkumar | news18
Updated:September 12, 2019, 7:21 PM IST
ಸಿಬಿಐ ಅಧಿಕಾರಿಗೇ 16 ಲಕ್ಷ ಲಂಚ ಕೊಡಲು ಹೋದ ಗೃಹ ಇಲಾಖೆ ಅಧಿಕಾರಿ ಬಂಧನ
ಸಿಬಿಐ
  • News18
  • Last Updated: September 12, 2019, 7:21 PM IST
  • Share this:
ನವದೆಹಲಿ(ಸೆ.12): ಪ್ರಕರಣವೊಂದನ್ನು ಮುಚ್ಚಿಹಾಕಲು ಲಂಚ ಕೊಡಲು ಮುಂದಾದ ಗೃಹ ಇಲಾಖೆಯ ಒಬ್ಬ ಸಿಬ್ಬಂದಿ ಸೇರಿ ಇಬ್ಬರು ವ್ಯಕ್ತಿಗಳನ್ನು ಇಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಧೀರಜ್​​ ಕುಮಾರ್​ ಸಿಂಗ್​ ಹಾಗೂ ದಿನೇಶ್ ಚಂದ್ ಗುಪ್ತಾ ಬಂಧಿತ ವ್ಯಕ್ತಿಗಳಾಗಿದ್ದಾರೆ. 16 ಲಕ್ಷ ರೂ ಲಂಚ ನೀಡಲು ಬಂದಾಗ ಇವರಿಬ್ಬರು ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆರೋಪಿ ಧೀರಜ್​ ಕುಮಾರ್ ಗೃಹ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ನಿಯೋಜನೆ ಪಟ್ಟಿ ಮಾಡುವ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಪ್ರಕರಣವೊಂದರಲ್ಲಿ ನಡೆಯುತ್ತಿದ್ದ ಪ್ರಾಥಮಿಕ ತನಿಖೆಯ ಮೇಲೆ ಪ್ರಭಾವ ಬೀರಲು ಆರೋಪಿಗಳು ತಮಗೆ 2 ಕೋಟಿ ಲಂಚ ಕೊಡಲು ಮುಂದಾಗಿದ್ದರು ಎಂದು ದೂರದಾರರಾದ ಸಿಬಿಐ ಅಧಿಕಾರಿ ಆರೋಪಿಸಿದ್ದಾರೆ.

ಇವರಿಬ್ಬರನ್ನು ಹಿಡಿಯಲು ಸಿಬಿಐ ಅಧಿಕಾರಿಗಳು ಜಾಲ ಬೀಸುತ್ತಾರೆ. 2 ಕೋಟಿ ರೂ ಲಂಚಕ್ಕೆ ಮುನ್ನ ಮೊದಲ ಕಂತಾಗಿ 16 ಲಕ್ಷ ರೂಪಾಯಿಯನ್ನು ಕೊಡಲು ಇವರಿಬ್ಬರು ಬಂದಾಗ ಸಿಬಿಐ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಹಿಡಿಯುತ್ತಾರೆ.

ಇದನ್ನೂ ಓದಿ :  ಬೆಡ್ ಮೇಲೆ ಹಾವುಗಳ ಸರಸ; ಮೊಬೈಲ್​ನಲ್ಲಿ ಮಾತನಾಡುತ್ತಾ ತಿಳಿಯದೇ ಕೂತ ಮಹಿಳೆಯನ್ನು ಕಚ್ಚಿ ಸಾಯಿಸಿದ ಸರ್ಪಗಳು

ನಂತರ ಸಿಬಿಐ ಅಧಿಕಾರಿಗಳು ಆರೋಪಿಗಳ ಮನೆಯಲ್ಲಿ ಶೋಧ ನಡೆಸಿ ಕೆಲ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಐಪಿಸಿ ಸೆಕ್ಷನ್​​​ 120(ಬಿ) ಸೇರಿ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ಹಚ್ಚಿನ ತನಿಖೆಯನ್ನು ಮಾಡುತ್ತಿದ್ದಾರೆ. 
First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ