Rishi Kamlesh Agarwal: ಎಬಿಜಿ ಶಿಪ್‌ಯಾರ್ಡ್ ಮಾಜಿ ಅಧ್ಯಕ್ಷ ರಿಷಿ ಅಗರ್ವಾಲ್ ಅರೆಸ್ಟ್‌!

Rishi Kamlesh Agarwal: ಬ್ಯಾಂಕ್‌ಗಳಿಗೆ ಬರೋಬ್ಬರಿ 22,842 ಕೋಟಿ ರೂ. ವಂಚನೆ ನಡೆಸಿದ ಆರೋಪದ ಮೇರೆಗೆ ಎಬಿಜಿ ಶಿಪ್‌ಯಾರ್ಡ್‌ ಲಿಮಿಟೆಡ್‌ ಕಂಪನಿ ಸಂಸ್ಥಾಪಕ ಅಧ್ಯಕ್ಷ ರಿಷಿ ಅಗರ್‌ವಾಲ್‌ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಎಬಿಜಿ ಸಂಸ್ಥಾಪಕ ರಿಷಿ ಅಗರ್‌ವಾಲ್‌

ಎಬಿಜಿ ಸಂಸ್ಥಾಪಕ ರಿಷಿ ಅಗರ್‌ವಾಲ್‌

  • Share this:
ದೇಶದ 28 ಬ್ಯಾಂಕ್‌ಗಳ (Bank)  ಒಕ್ಕೂಟಕ್ಕೆ 22,842 ಕೋಟಿ ರೂಪಾಯಿ ವಂಚನೆ  ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಎಬಿಜಿ ಶಿಪ್‌ಯಾರ್ಡ್ ಮಾಜಿ ಅಧ್ಯಕ್ಷ ರಿಷಿ ಕಮಲೇಶ್ ಅಗರ್ವಾಲ್  (Rishi Kamlesh Agarwal)  ಅವರನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ (IPC) ಮತ್ತು ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಅಧಿಕಾರ ದುರುಪಯಯೋಗ, ಕ್ರಿಮಿನಲ್ ಪಿತೂರಿ, ವಂಚನೆ, ನಂಬಿಕೆಯ ಉಲ್ಲಂಘನೆ ಸೇರಿದಂತೆ ಅಗರ್ವಾಲ್‌ ಮತ್ತು ಇತರರ ವಿರುದ್ಧ ದೂರು ದಾಖಲಿಸಿಕೊಂಡು  ಸಮಗ್ರ ತನಿಖೆ ಕೈಗೊಳ್ಳಲಾಗಿದೆ. ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಹಲವು ಕಂಪನಿಗಳಿಂದ ಸಾಲವನ್ನು ಪಡೆದುಕೊಂಡಿದೆ. ಐಸಿಐಸಿಐ ಬ್ಯಾಂಕ್ (ICICI Bank) ನೇತೃತ್ವದ 28 ಬ್ಯಾಂಕ್‌ಗಳ ಒಕ್ಕೂಟಕ್ಕೆ ಒಟ್ಟು 22,842 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದು ಸಿಬಿಐ ಆರೋಪಿಸಿದೆ. 

ಎಬಿಜಿ ಶಿಪ್‌ಯಾರ್ಡ್ ಬ್ಯಾಂಕ್ ವಂಚನೆಯ ಟೈಮ್‌ಲೈನ್
* 1985 - ಎಬಿಜಿ ಶಿಪ್‌ಯಾರ್ಡ್ ಎಬಿಜಿ ಗ್ರೂಪ್‌ನ ಪ್ರಮುಖ ಕಂಪನಿಯಾಗಿದ್ದು, ಇದು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿಯಲ್ಲಿ ತೊಡಗಿಸಿಕೊಂಡಿದೆ. ಗುಜರಾತಿನ ದಹೇಜ್ ಮತ್ತು ಸೂರತ್‌ನಲ್ಲಿ ಈ ಕಂಪನಿಯ ಹಡಗು ಕಟ್ಟೆಗಳಿವೆ. ಕಂಪನಿ ಐಸಿಐಸಿಐ ಬ್ಯಾಂಕ್ ನೇತೃತ್ವದ 28 ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದುಕೊಂಡಿತು.

* 2005-2010 - 2005-2012ರ ಅವಧಿಯಲ್ಲಿ ಐಸಿಐಸಿಐ, ಎಸ್ ಬಿಐ ಸೇರಿದಂತೆ 28 ಬ್ಯಾಂಕ್‌ಗಳ ಒಕ್ಕೂಟದಿಂದ ಭಾರಿ ಪ್ರಮಾಣದಲ್ಲಿ ಸಾಲ ಪಡೆದಿತ್ತು. 2008 ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಬ್ಯಾಂಕುಗಳು ಎಬಿಜಿ ಶಿಪ್‌ಯಾರ್ಡ್‌ಗಳಿಗೆ ಧಾರಳವಾಗಿ ಸಾಲ ನೀಡುವುದನ್ನು ಮುಂದುವರೆಸಿದವು.

ಇದನ್ನೂ ಓದಿ: ಇದೊಂದು ಟ್ರಾಫಿಕ್ ಪ್ರೇಮ್​ ಕಹಾನಿ​, ಈ ಜೋಡಿ ಮದ್ವೆಯಾದ್ರೂ ಆ ರೋಡ್​ ಇನ್ನೂ ಸರಿಯಾಗಿಲ್ಲ!

* 2008 - ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಈ ಅವಧಿಯಲ್ಲಿ ಎಬಿಜಿ ಶಿಪ್‌ಯಾರ್ಡ್‌ ಸಾಕಷ್ಟು ಬಂಡವಾಳದ ಕೊರತೆಯನ್ನು ಎದುರಿಸಿತು. ಇದರಿಂದಾಗಿ ಕಂಪನಿಗೆ ದ್ರವ್ಯತೆ ಮತ್ತು ಹಣಕಾಸಿನ ಸಮಸ್ಯೆ ಹೆಚ್ಚಾಯಿತು,

* ಮಾರ್ಚ್ 2014 - ಕಾರ್ಪೊರೇಟ್ ಸಾಲ ಪುನರ್ರಚನೆ ಅಥವಾ CDR ಅಡಿಯಲ್ಲಿ, ಎಬಿಜಿ ಶಿಪ್‌ಯಾರ್ಡ್‌ಗೆ ಸಾಲಗಳನ್ನು ಮರು-ರಚಿಸಲು ಎಸ್‌ ಬಿಐ ಪ್ರಯತ್ನಿಸಿತು. ಆದರೆ ಎಬಿಜಿ ಶಿಪ್‌ಯಾರ್ಡ್‌ ನಿಗದಿತ ದಿನಾಂಕದಂದು ಬಡ್ಡಿ ಮತ್ತು ಕಂತುಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಪ್ರಯತ್ನ ವಿಫಲವಾಯಿತು.

* ಜುಲೈ 2016 - 30 ನವೆಂಬರ್, 2013ರ ಹಿಂದಿನ ದಿನಾಂಕದೊಂದಿಗೆ ಎಬಿಜಿ ಖಾತೆಯನ್ನು ಬ್ಯಾಂಕ್‌ ಗಳು ಖಾತೆಯನ್ನು ಎನ್‌ ಪಿಎ (NPA) ಎಂದು ಘೋಷಿಸಿತು.

* ಆಗಸ್ಟ್ 2017- ಸಂಸ್ಥೆಯು ದಿವಾಳಿತನ ಪ್ರಕ್ರಿಯೆಗಳಿಗಾಗಿ ಆರ್‌ ಬಿಐ ಗುರುತಿಸಿದ ಡರ್ಟಿ ಡಜನ್ (12 ದೊಡ್ಡ NPA ಗಳಲ್ಲಿ ಎಸ್ಸಾರ್, ಭೂಷಣ್, ಜೇಪೀ ಮತ್ತು ಆಮ್ಟೆಕ್ ಸೇರಿದಂತೆ) ಭಾಗವಾಗಿತ್ತು.

ಲೀಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬ್ಯಾಂಕ್‌ಗಳು, ಸರ್ಕಾರ, ಉದ್ಯೋಗಿಗಳು ಮತ್ತು ಕಾರ್ಯಾಚರಣಾ ಸಾಲಗಾರರಿಗೆ ಪಾವತಿಸಬೇಕಾದ ₹27,400 ಕೋಟಿ ಮೊತ್ತದ ಒಟ್ಟು ಕ್ಲೈಮ್‌ಗಳೊಂದಿಗೆ IBC ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿತು.

* ಜನವರಿ 2019 - SBI ಒಂದು ಹಗರಣವನ್ನು ಗುರುತಿಸಿತು.

* ಜನವರಿ 2019 - ಅರ್ನ್ಸ್ಟ್ ಮತ್ತು ಯಂಗ್ LLP ಎಬಿಜಿ ಶಿಪ್‌ಯಾರ್ಡ್‌ನಲ್ಲಿ ಫೊರೆನ್ಸಿಕ್ ಆಡಿಟ್ ನಡೆಸುತ್ತದೆ. ಅಡಿಟ್‌ ಪ್ರಕಾರ 2012 -2017ರ ಅವಧಿಯಲ್ಲಿ ಅಕ್ರಮ ಚಟುವಟಿಕೆಗಳ ನಡೆದಿರುವುದು ಕಂಡು ಬಂದಿತು.

ಎಬಿಜಿ ಶಿಪ್‌ಯಾರ್ಡ್ 28 ಬ್ಯಾಂಕ್‌ಗಳ ಒಕ್ಕೂಟದಿಂದ ಮೂರು ವಿಭಿನ್ನ ರೀತಿಯ ಸಾಲಗಳನ್ನು ಪಡೆದುಕೊಂಡಿದೆ. ಈ ಸಾಲಗಳ ಮೂಲಕ ಸಂಗ್ರಹಿಸಿದ ಹಣವನ್ನು ನಂತರ 98 ಅಧೀನ ಕಂಪನಿಗಳಲ್ಲಿ ಹಾಗೂ ವಿದೇಶಗಳಲ್ಲಿನ ತನ್ನ ಸಂಸ್ಥೆಗಳಿಗೆ ವರ್ಗಾಯಿಸಿತ್ತು ಮತ್ತು ಮುಖ್ಯವಾಗಿ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿತು.

* ನವೆಂಬರ್ 2019 - SBI ದೂರು ದಾಖಲಿಸಿತು.

* ಆಗಸ್ಟ್ 2020 - ಎಸ್‌ಬಿಐ ಸಮಗ್ರ ತನಿಖೆಗೆ ದೂರನ್ನು ದಾಖಲಿಸಿತು.

* 7 ಫೆಬ್ರವರಿ 2022 - ಸಿಬಿಐ ಒಂದು ಎಬಿಜಿ ಶಿಪ್‌ಯಾರ್ಡ್ ಮತ್ತು ಎಬಿಜಿ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣವನ್ನು ದಾಖಲಿಸುತ್ತದೆ.

ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಹಲವು ಕಂಪನಿಗಳಿಂದ ಸಾಲವನ್ನು ಪಡೆದುಕೊಂಡಿದೆ. ಐಸಿಐಸಿಐ ಬ್ಯಾಂಕ್ ನೇತೃತ್ವದ 28 ಬ್ಯಾಂಕ್‌ಗಳ ಒಕ್ಕೂಟಕ್ಕೆ ಒಟ್ಟು 22,842 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದು ಸಿಬಿಐ ಆರೋಪಿಸಿದೆ.

ಇದನ್ನೂ ಓದಿ: ಬೆಂಗಳೂರು ಟು ಮೈಸೂರು; ದಸರಾ ಪ್ರವಾಸ ಇನ್ನಷ್ಟು ಸಲೀಸು

ಐಸಿಐಸಿಐ ಅತಿ ಹೆಚ್ಚು ಸಾಲ ನೀಡಿದ್ದು, ಅದರಿಂದ 7,089 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿತ್ತು. ಐಡಿಬಿಐ ಬ್ಯಾಂಕ್ 3,639 ಕೋಟಿ ರೂಪಾಯಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,925 ಕೋಟಿ ರೂಪಾಯಿ, ಬ್ಯಾಂಕ್ ಆಫ್ ಬರೋಡಾ 1,614 ಕೋಟಿ ರೂಪಾಯಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ 1,244 ಕೋಟಿ ರೂಪಾಯಿ ಸಾಲವನ್ನು ನೀಡಿತ್ತೆಂದು ತಿಳಿದು ಬಂದಿದೆ.

* 15 ಫೆಬ್ರವರಿ, 2022 - ಅಗರ್ವಾಲ್ ಮತ್ತು ಎಬಿಜಿ ಕಾರ್ಯನಿರ್ವಾಹಕರಾದ ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್ ಜಾರಿ ಮಾಡಿತು.
First published: