HOME » NEWS » National-international » CAULIFLOWER RATE FALL DOWN ANGRY FARMERS DUMP DOWN INTO ROAD SESR SGT

ಕೆಜಿ ಹೂಕೋಸಿಗೆ 1 ರೂ ದರ ವಿಧಿಸಿದ ಎಪಿಎಂಸಿ: 1000 ಕೆಜಿ ಹೂಕೋಸನ್ನು ರಸ್ತೆಗೆ ಎಸೆದ ಅನ್ನದಾತ

ಕೆ.ಜಿ.ಗೆ ಕೇವಲ 1 ರೂ.ಗಳನ್ನು ನೀಡಲು ಬಂದಾಗ ಅದನ್ನು ಮರಳಿ ಮನೆಗೆ ತರಲು ಹಾಗೂ ಸಾರಿಗೆ ವೆಚ್ಚವನ್ನು ಉಳಿಸಲು ನನ್ನ ಎಲ್ಲಾ ಉತ್ಪನ್ನಗಳನ್ನು ರಸ್ತೆಗೆ ಎಸೆಯುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ

news18-kannada
Updated:February 3, 2021, 8:00 PM IST
ಕೆಜಿ ಹೂಕೋಸಿಗೆ 1 ರೂ ದರ ವಿಧಿಸಿದ ಎಪಿಎಂಸಿ: 1000 ಕೆಜಿ ಹೂಕೋಸನ್ನು ರಸ್ತೆಗೆ ಎಸೆದ ಅನ್ನದಾತ
ಸಾಂದರ್ಭಿಕ ಚಿತ್ರ
  • Share this:
ಉತ್ತರ ಪ್ರದೇಶದ ಪಿಲಿಭಿತ್ನ ರೈತನೊಬ್ಬ ತಾನು ಬೆಳೆದ 10 ಕ್ವಿಂಟಲ್ಗಳ ಹೂಕೋಸು ಅಂದರೆ 1000 ಕೆಜಿಯಷ್ಟು ಹೂಕೋಸುಗಳನ್ನು ರಸ್ತೆಗೆ ಎಸೆದಿದ್ದಾನೆ. ಇದಕ್ಕೆ ಕಾರಣ ಫಿಲಿಬಿತ್ನ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಪರವಾನಗಿ ಪಡೆದ ವ್ಯಾಪಾರಿಗಳು ತನ್ನ ಹೂಕೋಸಿಗೆ ಕೇಳಿದ ಬೆಲೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ, ಹೂಕೋಸು ಬೇಕಿರುವವರು ತೆಗೆದುಕೊಳ್ಳಲೆಂದು ರಸ್ತೆಗೆ ತನ್ನ ಎಲ್ಲಾ ಉತ್ಪನ್ನಗಳನ್ನು ಎಸೆದಿದ್ದಾರೆ. ಉತ್ತರ ಪ್ರದೇಶದ ಜಹಾನಾಬಾದ್ ಪಟ್ಟಣದ ಮೊಹಮ್ಮದ್ ಸಲೀಮ್ ಎಂಬ ರೈತ ಈ ರೀತಿ ರಸ್ತೆಗೆ ಸಾವಿರ ಕೆಜಿಯಷ್ಟು ಹೂಕೋಸನ್ನು ರಸ್ತೆಗೆ ಎಸೆದಿದ್ದಾರೆ. ಸಲೀಮ್ಗೆ ತನ್ನ ಉತ್ಪನ್ನಗಳಿಗಾಗಿ ಪ್ರತಿ ಕೆ.ಜಿ.ಗೆ 1 ರೂ. ಕೇಳಿದ್ದು, ಇದರಿಂದ ಸಾರಿಗೆ ಖರ್ಚು ಮಾತ್ರ ಭರಿಸಲು ಸಾಧ್ಯ ಎಂದು ಅಸಹಾಯಕನಾಗಿದ್ದ.

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿರುವ ಸಲೀಂ,  "ನಾನು ಅರ್ಧ ಎಕರೆ ಭೂಮಿಯನ್ನು ಹೊಂದಿದ್ದೇನೆ, ಅಲ್ಲಿ ನಾನು ಹೂಕೋಸು ಕೃಷಿ ಮಾಡಿದ್ದೇನೆ. ಬೀಜಗಳು, ಕೃಷಿ, ನೀರಾವರಿ, ರಸಗೊಬ್ಬರಗಳು ಇತ್ಯಾದಿಗಳಿಗಾಗಿ ಸುಮಾರು 8,000 ರೂಗಳನ್ನು ಖರ್ಚು ಮಾಡಿದ್ದೇನೆ. ಇದಲ್ಲದೆ, ಸಾರಿಗೆ ವೆಚ್ಚ ಮತ್ತು ಕೊಯ್ಲಿಗೆ 4,000 ರೂ.ಗಳಷ್ಟು ಖರ್ಚಾಗಿದೆ'' ಎಂದು ಸಲೀಮ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು

"ಪ್ರಸ್ತುತ ಚಿಲ್ಲರೆ ಅಂಗಡಿಗಳಲ್ಲಿ ಹೂಕೋಸುಗಳ ಬೆಲೆ ಪ್ರತಿ ಕೆಜಿಗೆ 12 ರಿಂದ 14 ರೂ. ಇದೆ. ನನ್ನ ಉತ್ಪನ್ನಗಳಿಗೆ ಪ್ರತಿ ಕೆಜಿಗೆ ಕನಿಷ್ಠ 8 ರೂ. ಖರ್ಚಾಗಿದೆ.

ಇದನ್ನು ಮಾಡಿದ ರೈತ ಜಹಾನಾಬಾದ್ ಪಟ್ಟಣದವನು ಮತ್ತು ಅವನ ಹೆಸರು ಮೊಹಮ್ಮದ್ ಸಲೀಮ್. ಸಲೀಮ್ಗೆ ತನ್ನ ಉತ್ಪನ್ನಗಳಿಗಾಗಿ ಪ್ರತಿ ಕೆ.ಜಿ.ಗೆ 1 ರೂ.ನನಗೆ ಪ್ರತಿ ಕೆ.ಜಿ.ಗೆ ಕೇವಲ 1 ರೂ.ಗಳನ್ನು ನೀಡಿದರೆ, ಅದನ್ನು ಮರಳಿ ಮನೆಗೆ ತರಲು ಸಾರಿಗೆ ವೆಚ್ಚವನ್ನು ಉಳಿಸಲು ನನ್ನ ಎಲ್ಲಾ ಉತ್ಪನ್ನಗಳನ್ನು ಎಸೆಯುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ'' ಎಂದು ರೈತ ಹೇಳಿದ್ದಾರೆ.

"ನಾನು ಅರ್ಧ ಎಕರೆ ಭೂಮಿಯನ್ನು ಹೊಂದಿದ್ದೇನೆ, ಅಲ್ಲಿ ನಾನು ಹೂಕೋಸು ಕೃಷಿ ಮಾಡಿದ್ದೇನೆ ಮತ್ತು ಬೀಜಗಳು, ಕೃಷಿ, ನೀರಾವರಿ, ರಸಗೊಬ್ಬರಗಳು ಇತ್ಯಾದಿಗಳಿಗಾಗಿ ಸುಮಾರು 8,000 ರೂಗಳನ್ನು ಖರ್ಚು ಮಾಡಿದ್ದೇನೆ. ಇದಲ್ಲದೆ, 4,000 ರೂ.ಗಳ ಕೊಯ್ಲು ಮತ್ತು ಸಾರಿಗೆ ವೆಚ್ಚವನ್ನು ನಾನು ಭರಿಸಬೇಕಾಯಿತು" ಎಂದು ಸಲೀಮ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು .

"ಪ್ರಸ್ತುತ ಹೂಕೋಸುಗಳ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 12 ರಿಂದ 14 ರೂ. ಇದೆ. ನನ್ನ ಉತ್ಪನ್ನಗಳಿಗೆ ಪ್ರತಿ ಕೆಜಿಗೆ ಕನಿಷ್ಠ 8 ರೂ. ಖರ್ಚಾಗಿದೆ. ಆದರೆ, ನನಗೆ ಪ್ರತಿ ಕೆ.ಜಿ.ಗೆ ಕೇವಲ 1 ರೂ.ಗಳನ್ನು ನೀಡಲು ಬಂದಾಗ ಅದನ್ನು ಮರಳಿ ಮನೆಗೆ ತರಲು ಹಾಗೂ ಸಾರಿಗೆ ವೆಚ್ಚವನ್ನು ಉಳಿಸಲು ನನ್ನ ಎಲ್ಲಾ ಉತ್ಪನ್ನಗಳನ್ನು ರಸ್ತೆಗೆ ಎಸೆಯುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ” ಎಂದು ರೈತ ಹೇಳಿದರು.

''ನನ್ನ ಕುಟುಂಬದಲ್ಲಿ 60 ವರ್ಷದ ತಾಯಿ, ಕಿರಿಯ ಸಹೋದರ, ಹೆಂಡತಿ ಮತ್ತು ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದು, ಹಸಿವಿನಿಂದ ಬಳಲುತ್ತಿದ್ದೇವೆ. ಕುಟುಂಬಕ್ಕಾಗಿ ನಾನು ಮತ್ತು ನನ್ನ ಸಹೋದರ ಈಗ ದಿನಗೂಲಿ ಕಾರ್ಮಿಕರಾಗಬೇಕಿದೆ'' ಎಂದು ಅವರು ಹೇಳಿದರು.ಇದನ್ನು ಓದಿ: ಥಿಯೇಟರ್​ ಭರ್ತಿಗೆ ಅವಕಾಶ; ನಾಲ್ಕುವಾರ ಗಡುವು ನೀಡಿದ ರಾಜ್ಯ ಸರ್ಕಾರ

ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ವಿಜಿಲ್ ಬಲ್ಯಾನ್ ಪ್ರತಿಕ್ರಿಯೆ ನೀಡಿದ್ದು, "ತರಕಾರಿ ಬೆಳೆಗಳ ಖರೀದಿ ಬೆಲೆಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳನ್ನು ಅನ್ವಯಿಸುವಲ್ಲಿ ನಾವು ಅಸಹಾಯಕರಾಗಿದ್ದೇವೆ, ಏಕೆಂದರೆ ಇವುಗಳನ್ನು ರಾಜ್ಯ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ನೀತಿಯ ವ್ಯಾಪ್ತಿಗೆ ಒಳಪಡಿಸುವುದಿಲ್ಲ" ಎಂದಿದ್ದಾರೆ.

"ತರಕಾರಿ ಬೆಳೆಗಳ ಖರೀದಿ ಬೆಲೆಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳನ್ನು ಅನ್ವಯಿಸುವಲ್ಲಿ ನಾವು ಅಸಹಾಯಕರಾಗಿದ್ದೇವೆ, ಏಕೆಂದರೆ ಇವುಗಳನ್ನು ರಾಜ್ಯ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ನೀತಿಯ ವ್ಯಾಪ್ತಿಗೆ ಒಳಪಡಿಸುವುದಿಲ್ಲ" ಎಂದು ಎಪಿಎಂಸಿ ಕಾರ್ಯದರ್ಶಿ ವಿಜಿಲ್ ಬಲ್ಯಾನ್ ಹೇಳಿದರು. "ತರಕಾರಿಗಳ ಬೆಲೆಯನ್ನು ಸಾಮಾನ್ಯವಾಗಿ ಪೂರೈಕೆಯ ಪ್ರಮಾಣದಿಂದ ನಿಯಂತ್ರಿಸಲಾಗುತ್ತದೆ, ಆದರೆ ವ್ಯಾಪಾರಿಗಳು ಲಾಭದ ಪ್ರಮುಖ ಭಾಗವನ್ನು ಗಳಿಸುವ ಪ್ರವೃತ್ತಿಯನ್ನು ಹೊಂದಿದ್ದರು" ಎಂದೂ ಹೇಳಿದರು.
Published by: Seema R
First published: February 3, 2021, 7:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories