• Home
 • »
 • News
 • »
 • national-international
 • »
 • Watch Video: ಟ್ರಾಫಿಕ್​ನಲ್ಲಿ ಕಾರನ್ನು ನಿಲ್ಲಿಸಲು ವಾಹನದ ಬಾನೆಟ್​ ಮೇಲೆ ಹಾರಿದ ಕಾನ್ಸ್​ಟೇಬಲ್; 400 ಮೀಟರ್​ ಎಳೆದೊಯ್ದ ಚಾಲಕ

Watch Video: ಟ್ರಾಫಿಕ್​ನಲ್ಲಿ ಕಾರನ್ನು ನಿಲ್ಲಿಸಲು ವಾಹನದ ಬಾನೆಟ್​ ಮೇಲೆ ಹಾರಿದ ಕಾನ್ಸ್​ಟೇಬಲ್; 400 ಮೀಟರ್​ ಎಳೆದೊಯ್ದ ಚಾಲಕ

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ.

ಚಾಲಕ ವಾಹನವನ್ನು ಜಿಗ್​-ಜಾಗ್​ ಆಗಿ ಓಡಿಸಿದರೂ ಪೊಲೀಸ್ ಸಿಬ್ಬಂದಿ ಅವನ ಹಿಡಿತವನ್ನು ಬಿಡುವುದಿಲ್ಲ. ವಾಹನವನ್ನು ಸುಮಾರು 400 ಮೀಟರ್ ಓಡಿಸಿದ ನಂತರ ಪೊಲೀಸ್​ ಪೇದೆ ಕೊನೆಗೂ ಆಯತಪ್ಪಿ ಕೆಳಕ್ಕೆ ಬೀಳುವ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ.

 • Share this:

  ದೆಹಲಿ (ಅಕ್ಟೋಬರ್​ 15); ರಾಷ್ಟ್ರ ರಾಜಧಾನಿ ದೆಹಲಿಯ ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರನ್ನು ನಿಲ್ಲಿಸಲು ಟ್ರಾಫಿಕ್​ ಪೊಲೀಸ್​ ಪ್ರಯತ್ನಿಸಿದ್ದಾರೆ. ಆದರೆ, ಕಾರಿನ ಚಾಲಕ ವಾಹನವನ್ನು ನಿಲ್ಲಿಸಿಲ್ಲ. ಪರಿಣಾಮ ಪೊಲೀಸ್​ ಪೇದೆ ಕಾರನ್ನು ತಡೆದು ನಿಲ್ಲಿಸಲು ಕಾರಿನ ಬಾನೆಟ್​ ಮೇಲೆಯೇ ಸುಮಾರು 400 ಮೀಟರ್ ದೂರದ ವರೆಗೆ ಎಳೆಯಲ್ಪಟ್ಟು ಕೊನೆಗೆ ಆತ ಕೆಳಗೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಘಾತಕ್ಕೆ ಕಾರಣವಾಗಿದೆ. ಕೆಳಗೆ ಬಿದ್ದ ಟ್ರಾಫಿಕ್ ಪೊಲೀಸ್​ ಕಾಲು ಕಾರಿನ ಚಕ್ರದಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾಗಿರುವುದು ಈ ದೃಶ್ಯದಲ್ಲಿ ದಾಖಲಾಗಿದೆ. ಕಳೆದ ಸೋಮವಾರ ದಕ್ಷಿಣ ದೆಹಲಿಯ ಧೌಲಾ ಕುವಾನ್​ ಎಂಬಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಸಿಸಿಟಿವಿ ಕ್ಯಾಮೆರಾದ ವೀಡಿಯೊದಲ್ಲಿ, ಕಾನ್‌ಸ್ಟೆಬಲ್ ಮಹಿಪಾಲ್ ಸಿಂಗ್ ಹ್ಯಾಚ್‌ಬ್ಯಾಕ್ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ವರದಿಯ ಪ್ರಕಾರ, ಅಲಂಕಾರಿಕ ನಂಬರ್‌ಪ್ಲೇಟ್ ಬಳಸುವುದನ್ನು ದೆಹಲಿಯಲ್ಲಿ ನಿಷೇಧಿಸಲಾಗಿದೆ. ಆದರೂ ಕಾರಿನ ಚಾಲಕ ಅಲಂಕಾರಿಕ ನಂಬರ್​ ಪ್ಲೇಟ್​ ಅನ್ನು ತನ್ನ ಕಾರಿಗೆ ಅಳವಡಿಸಿದ್ದಾನೆ. ಅಲ್ಲದೆ, ಜನನಿಬಿಡ ಪ್ರದೇಶದಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದಾನೆ. ಈ ವೇಳೆ ಕಾರನ್ನು ನಿಲ್ಲಿಸಲು ಮುಂದಾದ ಟ್ರಾಫಿಕ್ ಪೊಲೀಸ್​ಚಾಲಕ ವಾಹನವನ್ನು ನಿಲ್ಲಿಸದಿದ್ದಾಗ ಕಾರಿನ ಬಾನೆಟ್​ ಮೇಲೆ ಹಾರಿದ್ದಾರೆ.


  ಇದನ್ನೂ ಓದಿ : ತೀವ್ರ ಹಿನ್ನಡೆ ಕಂಡ ದೇಶದ ಅರ್ಥಿಕತೆ; ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾದೇಶ


  ಚಾಲಕ ವಾಹನವನ್ನು ಜಿಗ್​-ಜಾಗ್​ ಆಗಿ ಓಡಿಸಿದರೂ ಪೊಲೀಸ್ ಸಿಬ್ಬಂದಿ ಅವನ ಹಿಡಿತವನ್ನು ಬಿಡುವುದಿಲ್ಲ. ವಾಹನವನ್ನು ಸುಮಾರು 400 ಮೀಟರ್ ಓಡಿಸಿದ ನಂತರ ಪೊಲೀಸ್​ ಪೇದೆ ಕೊನೆಗೂ ಆಯತಪ್ಪಿ ಕೆಳಕ್ಕೆ ಬೀಳುವ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ.


  ಆದರೆ, ಘಟನೆಯ ನಂತರ ಒಂದು ಕಿಲೋಮೀಟರ್ ಬೆನ್ನಟ್ಟಿ ಕೊನೆಗೂ ಕಾರಿನ ಚಾಲಕನನ್ನು ಬಂಧಿಸಲಾಗಿದೆ. ಆರೋಪಿ ನೈರುತ್ಯ ದೆಹಲಿಯ ಉತ್ತಮ್ ನಗರ ನಿವಾಸಿ ಶುಭಮ್ ಎಂದು ಗುರುತಿಸಲಾಗಿದೆ. ಚಾಲನೆಗೆ ಅಡ್ಡಿಯುಂಟುಮಾಡುವುದು, ನೋಯಿಸುವುದು ಮತ್ತು ತಪ್ಪಾಗಿ ವಾಹನ ಚಲಾಯಿಸಿದ ಆರೋಪದ ಮೇಲೆ ಪೊಲೀಸರು ಶುಭಮ್‌ನನ್ನು ಬಂಧಿಸಿದ್ದಾರೆ.

  Published by:MAshok Kumar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು