Kazakhstan Violence: ಕಝಾಕಿಸ್ತಾನ್‌ ಪ್ರತಿಭಟನೆ ಬಿಸಿ, ತಾಯ್ನಾಡಿಗೆ ಮರಳಲಾರದೇ ಕಂಗೆಟ್ಟ ಭಾರತೀಯರು...!

ದೆಹಲಿಯ ಟ್ರಾವೆಲ್ ಕಂಪನಿಯೊಂದರ ಮಾಲೀಕ ಸುಮೀತ್ ನಾಗ್ಪಾಲ್ ಅವರು ತಮ್ಮ ಪತ್ನಿ ಮತ್ತು ಏಳು ಮತ್ತು ಎಂಟು ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅಲ್ಮಾಟಿಯಲ್ಲಿ ಸಿಲುಕಿಕೊಂಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ (Soviet Union) ಘಟಕಗಳಲ್ಲಿ ಒಂದಾದ ಮಧ್ಯ ಏಷ್ಯಾದಲ್ಲಿ ಇಂಧನ ಬೆಲೆ ಹೆಚ್ಚಳದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ (Violent Protests) ಭುಗಿಲೆದ್ದಿತು. ಪ್ರತಿಭಟನೆಯ ಪರಿಣಾಮವಾಗಿ, ಭಾರತೀಯರು ಸೇರಿದಂತೆ ಕಜಕಿಸ್ತಾನ್‌ಗೆ (Kazakhstan) ಭೇಟಿ ನೀಡುವ ಅನೇಕ ವಿದೇಶಿಗರು ಸಿಕ್ಕಿಹಾಕಿಕೊಂಡರು. ಜನವರಿ 2 ರ ಸುಮಾರಿಗೆ ಅಶಾಂತಿ ಭುಗಿಲೆದ್ದ ನಂತರ ಕಝಕ್ ಅಧಿಕಾರಿಗಳು (Authorities) ‘ಶೂಟ್-ಟು-ಕಿಲ್’ ಆದೇಶಗಳನ್ನು ನೀಡಿದರು. ಅಶಾಂತಿಯ ಮೇರೆಗೆ ಸುಮಾರು 12,000 ಪ್ರತಿಭಟನಾಕಾರರನ್ನು ಬಂಧಿಸಲಾಯಿತು ಮತ್ತು ದಂಗೆಯಲ್ಲಿ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೀಗೆ ಅಲ್ಮಾಟಿ, ಕಝಾಕಿಸ್ತಾನ್‌ನಲ್ಲಿ ಸಿಲುಕಿಕೊಂಡಿರುವ ಹಲವಾರು ಭಾರತೀಯರು ತಮ್ಮ ಅನುಭವಗಳನ್ನು(Experiences) ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಕೋವಿಡ್ -19 ಪ್ರೋಟೋಕಾಲ್‌
ಜನವರಿ 5 ರಂದು ರಾತ್ರಿ 8 ಗಂಟೆಗೆ, ದಕ್ಷಿಣ ಕೊರಿಯಾದ ಇಂಚಿಯಾನ್ ನಗರದಿಂದ ಏಷಿಯಾನಾ ಏರ್‌ಲೈನ್ಸ್ ವಿಮಾನವು ಅಲ್ಮಾಟಿಯಲ್ಲಿ ಇಳಿಯಿತು, ಇದ್ದಕ್ಕಿದ್ದಂತೆ ಕ್ಯಾಪ್ಟನ್ , ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಯ ಮೂಲಕ ಪ್ರಯಾಣಿಕರಿಗೆ ತಮ್ಮ ಸೀಟಿನಲ್ಲೇ ಉಳಿಯಲು ಸೂಚನೆ ನೀಡಿದರು.

ಆರಂಭದಲ್ಲಿ, ಕಝಾಕಿಸ್ತಾನ್‌ನ ಅತಿದೊಡ್ಡ ನಗರದಲ್ಲಿನ ಕೋವಿಡ್ -19 ಪ್ರೋಟೋಕಾಲ್‌ನಿಂದಾಗಿ ವಿಳಂಬ ಉಂಟಾಗಿರಬಹುದೆಂದು , ವಿಮಾನದಲ್ಲಿದ್ದ ಏಕೈಕ ಭಾರತೀಯ ಪ್ರಯಾಣಿಕ ಲುಯಿರಾಮ್ಸಿಂಗ್ ಝಿಮಿಕ್ ಶಂಕಿಸಿದರು, ಪೈಲಟ್ ಮುಂದೆ ಮಾತನಾಡಿದಾಗ, ಆ ಊಹೆ ಹುಸಿಯಾಯಿತು ಎಂಬುದಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಯಾಣಿಕರನ್ನು ಹತ್ತಿರದ ಅಗ್ನಿಶಾಮಕ ಠಾಣೆಗೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಯಿತು. ಈ ಸಮಯದಲ್ಲಿ ವಿಮಾನ ನಿಲ್ದಾಣದ ನಿಯಂತ್ರಣವನ್ನು ಅಧಿಕಾರಿಗಳು ಕಳೆದುಕೊಂಡಿದ್ದರು .

ಇದನ್ನೂ ಓದಿ: Explained: ಕಜಕಿಸ್ತಾನದಲ್ಲಿ ಏನಾಗುತ್ತಿದೆ? ಅಲ್ಲಿನ ಜನ ಬೀದಿಗಿಳಿದು ಹೋರಾಟ ಮಾಡಲು ಕಾರಣವೇನು?

ಅಲ್ಮಾಟಿಯಲ್ಲಿ ಬಂದಿಳಿದ ಕುಟುಂಬ
ಒಂದು ಗಂಟೆಯ ನಂತರ, ನಾವು ಅಗ್ನಿಶಾಮಕ ಠಾಣೆಯಲ್ಲಿ ನಾವಿದ್ದೆವು. ನಗರದಾದ್ಯಂತ ಘರ್ಷಣೆಯು ಭುಗಿಲೆದ್ದ ಕಾರಣ ರಾತ್ರಿಯನ್ನು ಅಗ್ನಿಶಾಮಕ ಠಾಣೆಯಲ್ಲಿ ಕಳೆಯಲು ನಮಗೆ ತಿಳಿಸಲಾಯಿತು ಎಂದು ಮಣಿಪುರದ ಸೇನಾಪತಿ ಜಿಲ್ಲೆಯ ನಿವಾಸಿ ಝಿಮಿಕ್ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಅವರ ಸಂಪರ್ಕ ವಿಮಾನವು ಭಾರತಕ್ಕೆ ಜನವರಿ 6 ರಂದು ಬೆಳಿಗ್ಗೆ 7 ಗಂಟೆಗೆ ನಿಗದಿಯಾಗಿತ್ತು . ದಕ್ಷಿಣ ಕೊರಿಯಾದ ಹೋಸಿಯೊ ವಿಶ್ವವಿದ್ಯಾನಿಲಯದಲ್ಲಿ ಡಿವೈನಿಟಿ ಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಝಿಮಿಕ್, ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ವಿಮಾನ ನಿಲ್ದಾಣವನ್ನು ಅಲ್ಪಾವಧಿಗೆ ನಿಯಂತ್ರಣಕ್ಕೆ ತೆಗೆದುಕೊಂಡ ಅದೇ ಸಂಜೆ ಅಲ್ಮಾಟಿಯಲ್ಲಿ ಬಂದಿಳಿದರು.

ಹೊಸ ವರ್ಷಕ್ಕಾಗಿ ಕಝಾಕಿಸ್ತಾನ್ ಭೇಟಿ
ದೆಹಲಿಯ ಟ್ರಾವೆಲ್ ಕಂಪನಿಯೊಂದರ ಮಾಲೀಕ ಸುಮೀತ್ ನಾಗ್ಪಾಲ್ ಅವರು ತಮ್ಮ ಪತ್ನಿ ಮತ್ತು ಏಳು ಮತ್ತು ಎಂಟು ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅಲ್ಮಾಟಿಯಲ್ಲಿ ಸಿಲುಕಿಕೊಂಡಿದ್ದಾರೆ. ಡಿಸೆಂಬರ್ 30 ರಂದು, ನಾವು ಹೊಸ ವರ್ಷವನ್ನು ಆಚರಿಸುವ ಸಲುವಾಗಿ ಕಝಾಕಿಸ್ತಾನ್ ತಲುಪಿದೆವು. ಜನವರಿ 5 ರವರೆಗೆ ಯಾವುದೇ ಅಡೆತಡೆಗಳು ಗೋಚರಿಸಿಲ್ಲ ಮತ್ತು ಅಂತಹ ದೊಡ್ಡ ಪ್ರಮಾಣದ ಹಿಂಸಾಚಾರವು ನಗರದ ಮೇಲೆ ಪರಿಣಾಮ ಬೀರಲಿದೆ ಎಂದು ನಮಗೆ ಯಾವುದೇ ಸುಳಿವು ಇರಲಿಲ್ಲ.

ಜನವರಿ 6 ರಂದು, ನಾವು ದೆಹಲಿಗೆ ಹಿಂತಿರುಗುವ ಕೇವಲ ನಾಲ್ಕು ಗಂಟೆಗಳಷ್ಟು ಮುಂಚಿತವಾಗಿ , ನಮಗೆ ವಿಮಾನ ನಿಲ್ದಾಣದಿಂದ ಹೋಟೆಲ್‌ನಲ್ಲಿಯೇ ಇರುವಂತೆ ಮಾಹಿತಿ ನೀಡಲು ಕರೆ ಬಂದಿತು. ಅಂದಿನಿಂದ ನಾವು ಇಲ್ಲಿ ಸಿಲುಕಿಕೊಂಡಿದ್ದೇವೆ ಎಂದು ನಾಗ್ಪಾಲ್ ಫೋನ್‌ನಲ್ಲಿ ಸುದ್ದಿಮಾಧ್ಯಕ್ಕೆ ತಿಳಿಸಿದ್ದಾರೆ.

ಭಾರತೀಯ ಮಿಷನ್ ಸಂಪರ್ಕ
ಜಿಮಿಕ್ ಮತ್ತು ನಾಗ್ಪಾಲ್ ಅವರ ಕುಟುಂಬಗಳು ಕಝಾಕಿಸ್ತಾನ್‌ನಲ್ಲಿರುವ ಭಾರತೀಯ ಮಿಷನ್ ಅಧಿಕಾರಿಗಳೊಂದಿಗೆ ಸಂಪರ್ಕವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ನಿರ್ದಿಷ್ಟ ಕಾಲಮಿತಿಯ ಆಶ್ವಾಸನೆ ನೀಡಿಲ್ಲ.ದೈಹಿಕವಾಗಿ, ನಾನು ಚೆನ್ನಾಗಿದ್ದೇನೆ, ಆದರೆ ಮಾನಸಿಕವಾಗಿ ಬರಿದಾಗಿದ್ದೇನೆ. ಕುಟುಂಬದ ತುರ್ತು ಪರಿಸ್ಥಿತಿಯ ಪರಿಣಾಮವಾಗಿ, ನಾನು ಮನೆಗೆ ಮರಳುತ್ತಿದ್ದೆ.

ಇದನ್ನೂ ಓದಿ: Murder: ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ದೇಹವನ್ನು ತುಂಡರಿಸಿ, ರುಂಡ ಬೇಯಿಸಿದ ಮಹಾಪಾಪಿ!

ಈ ಸಮಯದಲ್ಲಿ, ನನ್ನ ಬಳಿ ಕೇವಲ $100 ಉಳಿದಿದೆ. ಹೋಟೆಲ್‌ನಲ್ಲಿ ಉಳಿಯಲು ಪ್ರತಿ ರಾತ್ರಿಗೆ $50 ವೆಚ್ಚವಾಗುತ್ತದೆ. ಸದ್ಯಕ್ಕೆ ಬಿಲ್ ನ ಚಿಂತೆ ಬಿಟ್ಟು ಬಿಡಿ ಎಂದು ಹೋಟೆಲ್ ಮ್ಯಾನೇಜ್ ಮೆಂಟ್ ಸಾಂತ್ವಾನ ನೀಡಿದರೂ ಸಹ , ಕೊನೆಗೆ ಆ ಮೊತ್ತವನ್ನು ನಾನು ಕಟ್ಟಲೇಬೇಕು. ಏನು ಮಾಡಬಹುದೆಂದು ನಾವು ನೋಡುತ್ತೇವೆ ಎಂದು ಭಾರತೀಯ ಮಿಷನ್ ಹೇಳಿದೆ" ಎಂದು 25 ವರ್ಷದ ಜಿಮಿಕ್ ಹೇಳಿದರು.
Published by:vanithasanjevani vanithasanjevani
First published: