ಕಾಶ್ಮೀರದಲ್ಲಿ ಉಗ್ರರೊಂದಿಗೆ ಸಿಕ್ಕಿಬಿದ್ದ ಹಿರಿಯ ಪೊಲೀಸ್ ಅಧಿಕಾರಿ; ತೀವ್ರ ವಿಚಾರಣೆ

ದೇವಿಂದರ್​​ ಸಿಂಗ್​​​ ಟಾಪ್ ರ್‍ಯಾಂಕರ್. ಕಳೆದ ವರ್ಷ ಆಗಸ್ಟ್​ 15ರಂದು ದೇವಿಂದರ್ ಸಿಂಗ್​ಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಯ್ತು. ಶ್ರೀನಗರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಆಯಂಟಿ ಹೈಜಾಕಿಂಗ್ ಸ್ಕ್ವಾಡ್​ನಲ್ಲಿ ಡಿಎಸ್​​​ಪಿ ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ಇಬ್ಬರು ಉಗ್ರೊಂದಿಗೆ ಸಿಕ್ಕಿಬಿದ್ದಿದ್ಧಾರೆ.

news18-kannada
Updated:January 13, 2020, 10:58 AM IST
ಕಾಶ್ಮೀರದಲ್ಲಿ ಉಗ್ರರೊಂದಿಗೆ ಸಿಕ್ಕಿಬಿದ್ದ ಹಿರಿಯ ಪೊಲೀಸ್ ಅಧಿಕಾರಿ; ತೀವ್ರ ವಿಚಾರಣೆ
ಸಾಂದರ್ಭಿಕ ಚಿತ್ರ
  • Share this:
ಶ್ರೀನಗರ(ಜ.13): ಜಮ್ಮು-ಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ ದೇವಿಂದರ್ ಸಿಂಗ್​​ ಸೇರಿದಂತೆ ಇಬ್ಬರು ಉಗ್ರರ ಬಂಧನವಾಗಿದೆ. ಭಾನುವಾರ ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್‌– ಇ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರ ಜತೆಗೆ ಹಿರಿಯ ಪೊಲೀಸ್​ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಮೂವರ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡ ಜಮ್ಮು-ಕಾಶ್ಮೀರದ ಪೊಲೀಸರು ವಿಚಾರಣೆಯೂ ನಡೆಸುತ್ತಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಇನ್ಸ್​​ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್​​ ಕುಮಾರ್​, ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಇಬ್ಬರು ಉಗ್ರರೊಂದಿಗೆ ಕಾರಿನಲ್ಲಿ ತೆರಳುವಾಗ ಸಿಕ್ಕಿಬಿದ್ದಿದ್ಧಾರೆ. ಡೆಪ್ಯೂಟಿ ಸೂಪರಿಂಟೆಂಡೆಂಟ್​ ಆಫ್ ಪೊಲೀಸ್(ಡಿಎಸ್​ಪಿ) ಆಗಿ ಕಾರ್ಯನಿರ್ವಹಿಸುತ್ತಿದ್ದ ದೇವಿಂದರ್ ಸಿಂಗ್ ಹೀಗೆ ಉಗ್ರರೊಂದಿಗೆ ಸಿಕ್ಕಿಬಿದ್ದಿರುವುದು ವಿಪರ್ಯಾಸ. ಇದನ್ನು ಅಕ್ಷಮ್ಯ ಅಪರಾಧ ಎಂದು ಪರಿಗಣಿಸಲಾಗಿದೆ. ಇಬ್ಬರು ಉಗ್ರರಿಗೆ ನೀಡುವಂತೆಯೇ ದೇವಿಂದರ್​​ ಸಿಂಗ್​​ ಅವರಿಗೂ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ದೇವಿಂದರ್​​ ಸಿಂಗ್​​​ ಟಾಪ್ ರ್‍ಯಾಂಕರ್. ಕಳೆದ ವರ್ಷ ಆಗಸ್ಟ್​ 15ರಂದು ದೇವಿಂದರ್ ಸಿಂಗ್​ಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಯ್ತು. ಶ್ರೀನಗರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಆಯಂಟಿ ಹೈಜಾಕಿಂಗ್ ಸ್ಕ್ವಾಡ್​ನಲ್ಲಿ ಡಿಎಸ್​​​ಪಿ ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ಇಬ್ಬರು ಉಗ್ರೊಂದಿಗೆ ಸಿಕ್ಕಿಬಿದ್ದಿದ್ಧಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ಕಗ್ಗಂಟು: ಅಮಿತ್ ಶಾ ಭೇಟಿಗೆ ಸಿಎಂ ಬಿಎಸ್​ವೈ ನಾಳೆ ದೆಹಲಿಗೆ?

ಭಾನುವಾರ(ನಿನ್ನೆ) ತಮ್ಮ ಕಾರಿನಲ್ಲಿ ಇಬ್ಬರು ಉಗ್ರರನ್ನ ಕರೆದುಕೊಂಡು ಹೋಗುವ ವೇಳೆ ಶ್ರೀನಗರ-ಜಮ್ಮು ಹೈವೇ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೇವಿಂದರ್​ ಸಿಂಗ್ ಜೊತೆ ಇದ್ದವರು ಎಲ್‌ಇಟಿಯ ಟಾಪ್ ಕಮಾಂಡರ್​​ ನವೀದ್​ ಬಾಬು ಹಾಗೂ ಹಿಜ್ಬುಲ್​​ನ ಅಲ್ತಾಫ್​ ಎಂದು ವಿಜಯ್​​ ಕುಮಾರ್​​ ಹೇಳಿದ್ದಾರೆ. ಇನ್ನು ಆರೋಪಿಗಳಿಂದ ಎರಡು ಎಕೆ-47 ಮತ್ತು ಐದು ಗ್ರೆನೇಡ್​ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading