HOME » NEWS » National-international » CAT QUE VIRUS ICMR WARNS OF ANOTHER VIRUS FROM CHINA THAT COULD SPREAD IN INDIA SNVS

ಭಾರತದಲ್ಲಿ ಹರಡುತ್ತಿದೆ ಮತ್ತೊಂದು ಚೀನೀ ವೈರಸ್; ಕರ್ನಾಟಕದಲ್ಲೇ ಕ್ಯಾಟ್ ಕ್ಯೂ ಪ್ರಕರಣ ಬೆಳಕಿಗೆ

Cat Que Virus - ಸೊಳ್ಳೆಗಳಿಂದ ಹರಡುವ ಕ್ಯಾಟ್ ಕ್ಯೂ ವೈರಸ್​ನ ಎರಡು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಚೀನಾ ಮತ್ತು ವಿಯೆಟ್ನಾಂನಲ್ಲಿ ಹೆಚ್ಚಿರುವ ಈ ಸೋಂಕು ಈಗ ಭಾರತದಲ್ಲೂ ಹರಡಿರುವ ಶಂಕೆ ಇದೆ. ಐಸಿಎಂಆರ್ನಿಂದ ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿವೆ.

Vijayasarthy SN | news18
Updated:September 29, 2020, 4:07 PM IST
ಭಾರತದಲ್ಲಿ ಹರಡುತ್ತಿದೆ ಮತ್ತೊಂದು ಚೀನೀ ವೈರಸ್; ಕರ್ನಾಟಕದಲ್ಲೇ ಕ್ಯಾಟ್ ಕ್ಯೂ ಪ್ರಕರಣ ಬೆಳಕಿಗೆ
ಸಾಂದರ್ಭಿಕ ಚಿತ್ರ
  • News18
  • Last Updated: September 29, 2020, 4:07 PM IST
  • Share this:
ಬೆಂಗಳೂರು(ಸೆ. 29): ಚೀನಾದ ವುಹಾನ್ ನಗರಿಯಿಂದ ಆರಂಭಗೊಂಡು ಭಾರತ ಸೇರಿದಂತೆ ಇಡೀ ವಿಶ್ವವೇ ತತ್ತರಿಸಿಹೋಗುವಂತೆ ಮಾಡಿರುವ ಬೆನ್ನಲ್ಲೇ ಈಗ ಚೀನಾದಿಂದ ಮತ್ತೊಂದು ವೈರಸ್ ಭಾರತಕ್ಕೆ ಅಡಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಕ್ಯಾಟ್ ಕ್ಯೂ ವೈರಸ್ (CQV - Cat Que Virus) ಎಂದು ಹೆಸರಿಸಲಾಗಿರುವ ಈ ವೈರಸ್ ಚೀನಾ ಮತ್ತು ವಿಯೆಟ್ನಾಂ ದೇಶಗಳ ಹಲವರಲ್ಲಿ ಈಗಾಗಲೇ ಸೋಂಕು ಸೃಷ್ಟಿಸಿದೆ. ಆತಂಕದ ವಿಚಾರವೆಂದರೆ ಭಾರತದಲ್ಲೂ ಈ ವೈರಸ್ ಅಡಿ ಇಟ್ಟಿರುವುದು ಪತ್ತೆಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ಎರಡು ಸಿಕ್ಯೂವಿ ಸೋಂಕು ಪ್ರಕರಣ ಬೆಳಕಿಗೆ ಬಂದಿದೆ. ಆ ಎರಡೂ ಕೂಡ ಕರ್ನಾಟಕದಲ್ಲೇ ಇವೆ. ಚೀನಾ ಮತ್ತು ವಿಯೆಟ್ನಾನಲ್ಲಿ ಕೆಲ ಜಾತಿಯ ಸೊಳ್ಳೆ ಮತ್ತು ಹಂದಿಗಳಲ್ಲಿ ಈ ವೈರಸ್ ಇದೆ. ಭಾರತದ ಕೆಲ ಜಾತಿಯ ಸೊಳ್ಳೆಗಳು ಈ ವೈರಸ್ ಸೋಂಕಿಗೆ ಸುಲಭವಾಗಿ ತುತ್ತಾಗುತ್ತವೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹಾಗೆಯೇ, ಹಂದಿಗಳಿಗೂ ಈ ಸೋಂಕು ಬೇಗ ಹರಡಲಿದ್ದು, ಇವೆರೆಡರಿಂದ ಮನುಷ್ಯನಿಗೆ ರೋಗ ಹರಡುವ ಅಪಾಯ ಇದೆ ಎನ್ನುತ್ತಾರೆ ಐಸಿಎಂಆರ್ ವಿಜ್ಞಾನಿಗಳು.

ಕ್ಯಾಟ್ ಕ್ಯೂ ವೈರಸ್ ಸೊಳ್ಳೆಗಳ ಮೂಲಕ ಮನುಷ್ಯ ಸೇರಿದಂತೆ ಸಸ್ತನಿ ಪ್ರಾಣಿಗಳಿಗೆ ಹರಡುತ್ತದೆ. ಇದರ ಸೋಂಕು ತಗುಲಿದವರಿಗೆ ಉಸಿರಾಟದ ತೊಂದರೆ, ಎದೆ ನೋವು, ನುಂಗಲು ತೊಂದರೆ, ಮಿದುಳು ಪೊರೆಯಲ್ಲಿ ಊತ (Meningitis), ಮಕ್ಕಳ ಮಿದುಳಿನಲ್ಲಿ ಊತ (Paediatric Encephalitis) ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಚೀನಾದಲ್ಲಿ ಈ ವೈರಸ್ ಸೋಂಕು ಪ್ರಕರಣಗಳು ಬೆಳಕಿಗೆ ಬಂದ ನಂತರ ಪುಣೆಯ ನ್ಯಾಷನ್ ಇನ್ಸ್​ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯ ವಿಜ್ಞಾನಿಗಳು ದೇಶಾದ್ಯಂತ 883 ವ್ಯಕ್ತಿಗಳ ರಕ್ತದ ಮಾದರಿಗಳನ್ನ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ್ದಾರೆ. ಯಾರಲ್ಲೂ ವೈರಸ್ ಸಿಕ್ಕಿಲ್ಲವಾದರೂ ಇಬ್ಬರಲ್ಲಿ ಈ ವೈರಾಣುವಿನ ಪ್ರತಿಕಾಯಗಳ(Anti-bodies) ಉಪಸ್ಥಿತಿ ಕಂಡುಬಂದಿದೆ. ಅಂದರೆ ಈ ಇಬ್ಬರಲ್ಲಿ ಸೋಂಕು ಬಂದು ಹೋಗಿದ್ದರ ಕುರುಹು ಅದಾಗಿದೆ. ಆ ಎರಡೂ ಪ್ರಕರಣಗಳು ಕರ್ನಾಟಕದ್ದೇ ಆಗಿವೆ. ಒಂದು 2014ರಲ್ಲಿ ಹಾಗೂ ಮತ್ತೊಂದು 2017ರಲ್ಲಿ ಸೋಂಕು ತಗುಲಿರುವ ಪ್ರಕರಣಗಳಾಗಿವೆ.

ಇದನ್ನೂ ಓದಿ: ಗ್ರಾಹಕರೇ ಮರೆಯದಿರಿ! ಅಕ್ಟೋಬರ್​ನಲ್ಲಿ ಬ್ಯಾಂಕ್​ಗಳಿಗೆ ಸಾಲು-ಸಾಲು ರಜೆ; ಇಲ್ಲಿದೆ ಪೂರ್ತಿ ಮಾಹಿತಿ

ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಎಂಆರ್ ಸಂಸ್ಥೆ ಹೆಚ್ಚು ಸಂಖ್ಯೆಯಲ್ಲಿ ಮನುಷ್ಯರು ಮತ್ತು ಹಂದಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಮಾಡಲು ನಿರ್ಧರಿಸಿದೆ. ಅಂದಹಾಗೆ, ಚೀನಾದಲ್ಲಿ ಸೊಳ್ಳೆಗಳಲ್ಲಿ ಸಿಕ್ಯೂವಿ ಪತ್ತೆಯಾದರೆ, ವಿಯೆಟ್ನಾಮ್​ನಲ್ಲಿ ಹಂದಿಗಳಲ್ಲಿ ಈ ವೈರಾಣು ಇರುವುದು ಗೊತ್ತಾಗಿದೆ.
Published by: Vijayasarthy SN
First published: September 29, 2020, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories