ಶೋಷಣೆಯ ಮರುಹುಟ್ಟು: ಯುವ ದಲಿತ ಸಾಹಿತಿ ಸೂರಜ್ ಯೆಂಗ್ಡೆ ವಿಷಾದ

ರಾಜಕೀಯ ಮೀಸಲಾತಿ ಮಾತ್ರದಿಂದೇ ದಲಿತರ ಉದ್ದಾರವಾಗದು. ದಲಿತರನ್ನು ಸಬಲೀಕರಣಗೊಳಿಸಲು ಪ್ರಾಪಂಚಿಕ ವಸ್ತುಗಳ ಅಗತ್ಯವಿದೆ. ಅಂಬೇಡ್ಕರ್ ಅವರದ್ದೂ ಇದೇ ಅಭಿಪ್ರಾಯವಾಗಿತ್ತು ಎಂದು ಸೂರಜ್ ಯೆಂಗ್ಡೆ ಹೇಳುತ್ತಾರೆ.

news18
Updated:August 15, 2019, 11:27 PM IST
ಶೋಷಣೆಯ ಮರುಹುಟ್ಟು: ಯುವ ದಲಿತ ಸಾಹಿತಿ ಸೂರಜ್ ಯೆಂಗ್ಡೆ ವಿಷಾದ
ಸೂರಜ್ ಯೆಂಗ್ಡೆ (ಫೋಟೋ ಕೃಪೆ: ಐಐಟಿ ಗಾಂಧಿನಗರ್)
  • News18
  • Last Updated: August 15, 2019, 11:27 PM IST
  • Share this:
ಮುಂಬೈ(ಆ. 15): ಖಾಸಗಿಕರಣವು ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಿದೆ. ನವೀನ ಉದಾರೀಕರಣವು ಕೆಳವರ್ಗದವರನ್ನು ದಮನ ಮಾಡುತ್ತಿದೆ. ಸರ್ಕಾರೀ ಯಂತ್ರಗಳು ದಲಿತರ ಹಕ್ಕುಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿವೆ ಎಂದು ಯುವ ದಲಿತ ಸಾಹಿತಿ ಸೂರಜ್ ಯೆಂಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಬಿಡುಗಡೆಯಾಗಿದ್ದ ತಮ್ಮ “ಕ್ಯಾಸ್ಟ್ ಮ್ಯಾಟರ್ಸ್” ಎಂಬ ಪುಸ್ತಕದ ಬಗ್ಗೆ ಮುಂಬೈನ ಟಾಟಾ ಇನ್ಸ್​ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಪ್ರಾಂಗಣದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ: ಪಿಂಕ್, ನೇರ್​ಕೊಂಡ ಪಾರ್ವೈ ಎಂಬ ಸಿನಿಮಾ ಮತ್ತು ಆಕೆಯ ಮೇಲಿನ ಸಾಮೂಹಿಕ ಅತ್ಯಾಚಾರ; ಇಲ್ಲಿದೆ ಮಹಿಳೆಯೊಬ್ಬಳ ಆರ್ತನಾದದ ಕಥೆ!

ಜಾತಿ ದೌರ್ಜನ್ಯದ ವಿರುದ್ಧ ಹೋರಾಡುವ ಸಲುವಾಗಿ ಸಂವಿಧಾನದಿಂದ ಊರ್ಜಿತವಾದ ಸಂಸ್ಥೆಗಳು ಈಗ ನಿಷ್ಕ್ರಿಯವಾಗಿವೆ. ಜಾತಿ ದೌರ್ಜನ್ಯವು ತನ್ನಂತಾನೆ ಮರುಹುಟ್ಟು ಪಡೆಯುತ್ತಲೇ ಇದೆ. ಸದ್ಯಕ್ಕೆ ತಳಮಟ್ಟದಲ್ಲಿ ಮಾತ್ರ ದಲಿತ ಚಳವಳಿ ನಡೆಯುತ್ತಿದೆ ಎಂದು ಸೂರಜ್ ಯೆಂಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಹೊಸ ಉದಾರ ಆರ್ಥಿಕತೆಯಿಂದ ಜಾತಿ ನಡುವೆ ಕಂದಕ ಹೆಚ್ಚಾಗಿದೆ. ದಲಿತರು ಮತ್ತು ಆದಿವಾಸಿಗಳಿಗೆ ಸರ್ಕಾರದ ಸಂಪನ್ಮೂಲಗಳನ್ನು ನಿರಾಕರಿಸುವ ಶೋಷಣೆಯ ವರ್ಗ ಬೇರೂರಿದೆ. ದಲಿತರ ವಿರುದ್ಧ ಹೊಸ ಮಾದರಿಯ ಉದಾರ ಆರ್ಥಿಕತೆಯು ಕೆಲಸ ಮಾಡುತ್ತಿದೆ. ಇದನ್ನು ನಾವು ನಿಗ್ರಹಿಸುವ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಪಿಎಚ್​ಡಿ ಪಡೆದಿರುವ ಸೂರಜ್ ಹೇಳಿದ್ದಾರೆ.

ಇದನ್ನೂ ಓದಿ: ನಿಮಗೆ 370ನೇ ವಿಧಿ ಮುಖ್ಯವಾಗಿದ್ದರೆ, ಅದನ್ಯಾಕೆ ಖಾಯಂಗೊಳಿಸಲಿಲ್ಲ?: ವಿಪಕ್ಷಗಳಿಗೆ ಪ್ರಧಾನಿ ಕುಟುಕು

ದಲಿತರನ್ನು ಸಬಲಗೊಳಿಸಬೇಕೆಂದರೆ ಅವರಿಗೆ ಪ್ರಾಪಂಚಿಕ ವಸ್ತುಗಳನ್ನ ಒದಗಿಸುವುದು ಅವಶ್ಯಕವಿದೆ. ಅಂಬೇಡ್ಕರ್ ಅವರ ಅಭಿಪ್ರಾಯವೂ ಇದೇ ಆಗಿತ್ತು. ನನ್ನ ಜಾತಿಯನ್ನಿಟ್ಟುಕೊಂಡು ನಾನೇನು ಮಾಡಬೇಕು? ನಾನು ಭೂಮಿಯ ಒಡೆಯನಾಗುವ ಬದಲು ಸರ್ಕಾರದ ಹಣಕ್ಕಾಗಿ ಕಾದು ಕುಳಿತುಕೊಳ್ಳಬೇಕಾ? ದಲಿತರ ಸಬಲೀಕರಣವಾಗಬೇಕಿದೆ. ಪ್ರಾಪಂಚಿಕ ವಸ್ತುಗಳು ಸಬಲೀಕರಣಕ್ಕೆ ನೆರವಾಗಬಲ್ಲವು ಎಂದು ಸೂರಜ್ ಯೆಂಗ್ಡೆ ವಾದಿಸಿದ್ದಾರೆ.
Loading...

ಗ್ರಾಮೀಣ ಭಾಗದಲ್ಲಿರುವ ಶೇ. 70ರಷ್ಟು ದಲಿತರು ಭೂಮಿ ಇಲ್ಲದ ಕೂಲಿಗಳಷ್ಟೇ ಆಗಿದ್ದಾರೆ. ಈ ನೆಲ ನಮಗೆ ಸೇರಿದ್ದು. ನಮಗೆ ಈಗ ಸಿಕ್ಕಿರುವುದು ಏನೂ ಅಲ್ಲ. ಇನ್ನೂ ಹೆಚ್ಚು ಬರಬೇಕಿದೆ. ರಾಜಕೀಯ ಮೀಸಲಾತಿ ಮಾತ್ರದಿಂದಲೇ ಜನರ ಏಳ್ಗೆಯಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಬರೆದ ‘ಎಕ್ಸಾಂ ವಾರಿಯರ್ಸ್’ ಪುಸ್ತಕ ಓದಿ ಬೆರಗಾದ ಭೂತಾನ್ ಪ್ರಧಾನಿ

ದಲಿತ ಮತ್ತು ಶೋಷಣೆಯ ವಿಚಾರಗಳ ಬಗ್ಗೆ ಪರಿಣಿತಿ ಪಡೆದಿರುವ ಸೂರಜ್ ಯೆಂಗ್ಡೆ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನ ವಿಟ್​ವಾಟರ್​ಸ್ರಾಂಡ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್​ಡಿ ಪಡೆದಿದ್ದಾರೆ. ಇವರು ಬರೆದ “ಕ್ಯಾಸ್ಟ್ ಮ್ಯಾಟರ್ಸ್” ಎಂಬ ಇಂಗ್ಲೀಷ್ ಪುಸ್ತಕ ಕಳೆದ ತಿಂಗಳ 22ರಂದು ಬಿಡುಗಡೆಯಾಗಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ರೀಪ್ರಿಂಟ್ ಆದ ಗೌರವ ಇದಕ್ಕಿದೆ. ಅಷ್ಟರಮಟ್ಟಿಗೆ ಈ ಪುಸ್ತಕಕ್ಕೆ ಬೇಡಿಕೆ ಸೃಷ್ಟಿಯಾಗಿದೆ.

(ಮಾಹಿತಿ ಕೃಪೆ: ಆಭಾ ಗೊರಾಡಿಯಾ, ಇಂಡಿಯನ್ ಎಕ್ಸ್​ಪ್ರೆಸ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...