ಬಿಹಾರ (ಆಗಸ್ಟ್ 22); ದೇಶದಲ್ಲಿ ಜಾತಿ ಆಧಾರಿತ ಜನಗಣತಿ ನಡೆಯಬೇಕು ಎಂಬ ಕೂಗು ಹೊಸದೇನಲ್ಲ. ಕಳೆದ ಹಲವು ದಶಕಗಳಿಂದ ಅನೇಕರು ಈ ಬಗ್ಗೆ ಕೂಗೆತ್ತು ತ್ತಲೇ ಇದ್ದಾರೆ. ಜಾತಿ ಆಧಾರಿತ ಜನಗಣತಿಯಿಂದ ತಳ ಸಮುದಾಯದ ಜನರಿಗೆ ಒಳಿತಾಗಲಿದೆ ಎಂಬ ವಾದವೂ ಇದೆ. ಇದೇ ಕಾರಣಕ್ಕೆ ಕಳೆದ ಕಾಂಗ್ರೆಸ್ ಸರ್ಕಾರ ದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸಹ ಹಲವು ಟೀಕೆಗಳ ನಡುವೆಯೂ ಜಾತಿ ಆಧಾರಿತ ಜನಗಣತಿ ನಡೆಸಿದ್ದರು. ಬಿಜೆಪಿ ನಾಯಕರು ಇದಕ್ಕೆ ಅಂದಿನಿಂದಲೂ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ, ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಮಿತ್ರಪಕ್ಷ ವಾದ ಜೆಡಿಯು ಪಕ್ಷದ ಮುಖಂಡ ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಜಾತಿ ಆಧಾರಿತ ಜನಗಣತಿ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದು ಸಾಮಾನ್ಯವಾಗಿ ಮಿತ್ರ ಪಕ್ಷವಾದ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ನಿತೀಶ್ ಕುಮಾರ್, "ಜಾತಿ ಆಧಾರಿತ ಜನಗಣತಿ ಒಂದು ನಿರ್ಣಾಯಕ ವಿಷಯವಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ, ಅದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಮೇಲಾಗಿ, ಇದು ಬಿಹಾರಕ್ಕೆ ಮಾತ್ರವಲ್ಲ, ಇಡೀ ದೇಶದ ಜನರು ಇದರಿಂದ ಪ್ರಯೋಜನ ಪಡೆಯುತ್ತಾರೆ. ಹೀಗಾಗಿ ಒಮ್ಮೆಯಾದರೂ ಜಾತಿ ಆಧಾರಿತ ಜನಗಣತಿ ನಡೆಸಬೇಕು. ಈ ದೃಷ್ಟಿಕೋನದಿಂದ ನಾವು ನಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತೇವೆ.
ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲು ಈಗಾಗಲೇ ಕೆಲವರು ದೆಹಲಿಯನ್ನು ತಲುಪಿದ್ದಾರೆ ಮತ್ತೆ ಕೆಲವರು ನನ್ನೊಂದಿಗೆ ಬರುತ್ತಾರೆ. ನಾಳೆ ನಾವು 11 ಗಂಟೆಗೆ ಪ್ರಧಾನಿಯವರನ್ನು ಭೇಟಿಯಾಗುತ್ತೇವೆ. ಈ ವೇಳೆ ದೇಶದಾದ್ಯಂತ ಜಾತಿವಾರು ಜನಗಣತಿ ನಡೆಸುವಂತೆ ಮನವಿ ಮಾಡುತ್ತೇವೆ. ಈ ಕುರಿತು 10 ಸದಸ್ಯರ ನಿಯೋಗ ಪ್ರಧಾನಿಯನ್ನು ಒತ್ತಾಯಿಸಲಿದೆ" ಎಂದು ಅವರು ತಿಳಿಸಿದ್ದಾರೆ.
ಜಾತಿ ಆಧಾರಿತ ಜನಗಣಿತಿಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿರುವ 10 ಜನ ನಿಯೋಗವನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಗಲಿದ ನಾಯಕ ಕಲ್ಯಾಣ್ ಸಿಂಗ್ರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ದೇಶದಾದ್ಯಂತ ಜಾತಿ ಜನಗಣತಿ ನಡೆಸುವ ಬಗ್ಗೆ ಈ ಹಿಂದೆಯೂ ಪದೇ ಪದೇ ಮಾತನಾಡಿದ್ದ ನಿತೀಶ್ ಕುಮಾರ್, "ಜಾತಿ ಗಣತಿಯು ಪ್ರತಿಯೊಬ್ಬರ ಹಿತಾಸಕ್ತಿಗೆ ಅನುಗುಣವಾಗಿದೆ. ಒಂದು ಜಾತಿಯ ಜನರ ಗುಂಪನ್ನು ಅಸಮಾಧಾನಗೊಳಿಸುತ್ತದೆ ಎಂಬ ಕಳವಳವು ಆಧಾರರಹಿತವಾಗಿದೆ. ಜಾತಿ ಗಣತಿ ಮಾಡುವುದು ಕೇಂದ್ರಕ್ಕೆ ಬಿಟ್ಟದ್ದು. ನಮ್ಮ ಕೆಲಸ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಷ್ಟೇ.
ಇದನ್ನೂ ಓದಿ: ಕರ್ನಾಟಕದ ಮುಸ್ಲಿಂ ಮಹಿಳೆಯರಿಗೆ 1 ಲಕ್ಷ ವೈದ್ಯಕೀಯ ನೆರವು: ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಾಹಿತಿ
ಈ ಜನಗಣಿಯನ್ನು ಒಂದು ಜಾತಿಯವರು ಇಷ್ಟಪಡುತ್ತಾರೆ. ಇನ್ನೊಂದು ಜಾತಿಯವರು ಇಷ್ಟಪಡುವುದಿಲ್ಲ ಎಂದು ಭಾವಿಸಬೇಡಿ. ಇದು ಎಲ್ಲರ ಹಿತಾಸಕ್ತಿಗಾಗಿ" ಎಂದು ತಿಳಿಸಿದ್ದರು. ನಿತೀಶ್ ಕುಮಾರ್ ಮಾತ್ರವಲ್ಲ, ಬಿಹಾರದ ಹಲವಾರು ನಾಯಕರು, ಪಕ್ಷದ ವ್ಯಾಪ್ತಿಯನ್ನು ಮೀರಿ, ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ