UPSC: ಯುಪಿಎಸ್​ಸಿ ಸಂದರ್ಶನದಲ್ಲಿ ಜಾತಿ ತಾರತಮ್ಯ: ಆಯೋಗಕ್ಕೆ ಪತ್ರ ಬರೆದ ಎಎಪಿ ಸಚಿವ

"ಸಂದರ್ಶನ ಮಂಡಳಿ ಸದಸ್ಯರಿಗೆ ಅಭ್ಯರ್ಥಿಯ ಜಾತಿಯ ಬಗ್ಗೆ ಅರಿವು ಮೂಡಿಸದಿದ್ದರೆ ತಾರತಮ್ಯ ಹೋಗಲಾಡಿಸಲು ಸಾಧ್ಯವಿಲ್ಲ’’ ಎಂದು ಗೌತಮ್​ ಹೇಳಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  "ಅತ್ಯಂತ ವ್ಯವಸ್ಥಿತವಾಗಿ ಮೀಸಲಾತಿ ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಸಂದರ್ಶನದ ವೇಳೆ ನೀಡುವ ಅಂಕಗಳಲ್ಲಿ ತಾರತಮ್ಯ ಎಸಗಲಾಗುತ್ತಿದೆ" ಎಂದು ದೆಹಲಿಯ ಆಮ್​ ಆದ್ಮಿ ಸರ್ಕಾರದ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಕೇಂದ್ರ ಲೋಕಾಸೇವಾ ಆಯೋಗದ (ಯುಪಿಎಸ್​ಸಿ) ಅಧ್ಯಕ್ಷ ಪ್ರದೀಪ್ ಕುಮಾರ್ ಜೋಶಿ ಅವರಿಗೆ ಬರೆದ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಸಂದರ್ಶನದಲ್ಲಿ ಅಭ್ಯರ್ಥಿಗಳು ಎದುರಿಸುತ್ತಿರುವ ಜಾತಿ ಆಧಾರಿತ ತಾರತಮ್ಯ ಹಾಗೂ ಇಂತಹ ಕೆಟ್ಟ ಪರಿಸ್ಥಿತಿಯನ್ನು ಹೇಗೆ ಸುಧಾರಿಸಬೇಕು ಎನ್ನುವ ಮಾರ್ಗಗಳನ್ನು ಈ ಪತ್ರದಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿದೆ.

  ಗೌತಮ್ ಅವರು ಈ ಪತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದು, ಮೀಸಲಿರಿಸಿದ ವರ್ಗದಿಂದ ಬಂದಂತಹ ಅನೇಕ ವಿದ್ಯಾರ್ಥಿಗಳ ಜೊತೆಗೆ ನಡೆಸಿದ ಚರ್ಚೆಯ ಬಳಿಕ ಈ ವಿಷಯವನ್ನು ನಿಮಗೆ ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ. "ಸಂದರ್ಶನ ಮಂಡಳಿ ಸದಸ್ಯರಿಗೆ ಅಭ್ಯರ್ಥಿಯ ಜಾತಿಯ ಬಗ್ಗೆ ಅರಿವು ಮೂಡಿಸದಿದ್ದರೆ ತಾರತಮ್ಯ ಹೋಗಲಾಡಿಸಲು ಸಾಧ್ಯವಿಲ್ಲ. ಅನೇಕ ವೇಳೆ ಅಭ್ಯರ್ಥಿಗಳು ತಮ್ಮ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ.  ಮತ್ತೊಂದು ಗಮನಾರ್ಹವಾದ ಸಂಗತಿ ಏನೆಂದರೇ ಸಾಮಾನ್ಯ ಮತ್ತು ಇತರೇ ವರ್ಗಗಳ ಅಭ್ಯರ್ಥಿಗಳನ್ನು ಒಂದೇ ಗುಂಪಾಗಿ ಮಾಡುವ ಬದಲು, ಪ್ರತ್ಯೇಕವಾಗಿ ಗುಂಪು ಮಾಡಿ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ" ಈ ಸಮಸ್ಯೆಯನ್ನು ಎದುರಿಸಲು ಒಂದಷ್ಟು ವಿಧಾನಗಳನ್ನು ಸೂಚಿಸಿದ್ದಾರೆ.

  https://twitter.com/AamAadmiParty/status/1416044073140453377

  ಖ್ಯಾತ ಪತ್ರಕರ್ತ ಪ್ರೊಫೆಸರ್ ದಿಲೀಪ್ ಮೊಂಡಾಲ್ ಅವರನ್ನು ಟ್ಯಾಗ್​ ಮಾಡಿರುವ ಸಚಿವರು ತಾವು ಯುಪಿಎಸ್​ಇಗೆ ಬರೆದಿರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟನ್ನು ಆಮ್ ಆದ್ಮಿ ಪಕ್ಷದ ಅಧಿಕೃತ ಲೆಟರ್​ಹೆಡ್​ನಲ್ಲಿ ಬರೆದ ಪತ್ರದ ಸಾರಾಂಶದೊಂದಿಗೆ ಪಕ್ಷದ ಖಾತೆಯ ಮೂಲಕ ರೀಟ್ವೀಟ್​ ಮಾಡಲಾಗಿದೆ.

  https://twitter.com/AamAadmiParty/status/1416044073140453377

  ದಲಿತ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಫೆಬ್ರವರಿ 2021 ರಲ್ಲಿ ವರದಿಯೊಂದನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು, ಯುಪಿಎಸ್‌ಸಿಯಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಯಾವ  ರೀತಿಯ ಮಾರ್ಗವನ್ನು ಸರ್ಕಾರ ಅನುಸರಿಸಬೇಕು ಎಂದು ಸೂಚಿಸಿತ್ತು. ಸಂದರ್ಶನದಲ್ಲಿ ಯುಪಿಎಸ್​ಸಿ ಅಭ್ಯರ್ಥಿಯ ಉಪನಾಮಗಳನ್ನು ಬಹಿರಂಗಪಡಿಸಬಾರದು ಎಂಬಂತಹ ನೀತಿನ್ನು ತರಲಾಗಿತ್ತು. ಈ ನೀತಿಗಳನ್ನು 70 ರ ದಶಕದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಆದರೆ ಈಗ ಸಮಕಾಲೀನ ಸಾಮಾಜಿಕ-ಆರ್ಥಿಕ ಸುಧಾರಣೆಗಳ ಪ್ರಕಾರ ಈ ನಿಯಮವನ್ನು ಪರಿಷ್ಕರಿಸಬೇಕು ಎಂದು ತನ್ನ ಪತ್ರದಲ್ಲಿ ಇದು ತಿಳಿಸಿದೆ.

  ಇದನ್ನೂ ಓದಿ: ಯಡಿಯೂರಪ್ಪ 6 ಬ್ಯಾಗ್​​ ತಗೊಂಡು ದೆಹಲಿಗೆ ಹೋಗಿದ್ದಾರೆ; ಅದರಲ್ಲಿ ಏನಿದೆ ಅಂತ ಅವರೇ ಹೇಳಲಿ; ಎಚ್​.ಡಿ.ಕುಮಾರಸ್ವಾಮಿ

  ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಯುಪಿಎಎಸ್​ಇ ಮೇ 13 ರಂದು ನಡೆಯಬೇಕಿದ್ದ ನಾಗರಿಕ ಸೇವೆಗಳ ಪ್ರಾಥಮಿಕ  ಪರೀಕ್ಷೆಯನ್ನು 2021 ರ ಅಕ್ಟೋಬರ್ ತಿಂಗಳಿಗೆ ಮುಂದೂಡಿತ್ತು. ಈ ಮೊದಲು ಇದನ್ನು ಜೂನ್ 27 ರಂದು ನಡೆಸಲು ನಿರ್ಧರಿಸಲಾಗಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: