• Home
  • »
  • News
  • »
  • national-international
  • »
  • ಬ್ಯಾಂಕ್‌ಗೆ ಸಾಗಿಸುತ್ತಿದ್ದ 200 ಮಿಲಿಯನ್ ಹಣ ದೋಚಿ ಪರಾರಿಯಾದ ವ್ಯಾನ್ ಚಾಲಕ..!

ಬ್ಯಾಂಕ್‌ಗೆ ಸಾಗಿಸುತ್ತಿದ್ದ 200 ಮಿಲಿಯನ್ ಹಣ ದೋಚಿ ಪರಾರಿಯಾದ ವ್ಯಾನ್ ಚಾಲಕ..!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಿಬ್ಬಂದಿ ಚಾಲಕನಿಗೆ ಕರೆ ಮಾಡಿದಾಗ ನನಗೆ ತುರ್ತಾಗಿ ಎಲ್ಲಿಯೋ ಹೋಗಬೇಕಾಗಿದೆ ಈಗ ಬರುತ್ತೇನೆ ಎಂದು ತಿಳಿಸಿದ್ದಾನೆ. ಸುಮಾರು ಸಮಯದ ಬಳಿಕ ಸಿಬ್ಬಂದಿ ಚಾಲಕನಿಗೆ ಪುನಃ ಕರೆಮಾಡಿದಾಗ ಆತನ ಫೋನ್ ಸ್ವಿಚ್ ಆಫ್ ಆಗಿತ್ತು.

  • Share this:

ಪಾಕಿಸ್ತಾನದ ಕರಾಚಿಯಲ್ಲಿನ ಸ್ಟೇಟ್ ಬ್ಯಾಂಕ್‌ಗೆ ಸಾಗಿಸುತ್ತಿದ್ದ ಸುಮಾರು 200 ಮಿಲಿಯನ್ (ರೂ.14,86,13,00,000.00) ಹಣವಿರುವ ವ್ಯಾನ್‌ನೊಂದಿಗೆ ಚಾಲಕ ಹುಸೇನ್ ಶಾ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದಾನೆ. ಈ ಕುರಿತು ಪೊಲೀಸರಿಗೆ ಎಫ್‌ಐಆರ್ ಸಲ್ಲಿಸಿದ್ದು ವ್ಯಾನಿನ ಭದ್ರತಾ ಸಿಬ್ಬಂದಿ ಜನನಿಬಿಡ ಚುಂದ್ರಿಗಾರ್ ರಸ್ತೆಯ ಸ್ಟೇಟ್ ಆಫ್ ಪಾಕಿಸ್ತಾನದ ಕಟ್ಟದ ಒಳಗೆ ಹೋದ ಒಡನೆಯೇ ಭದ್ರತಾ ಕಂಪೆನಿಯ ಚಾಲಕ ಹುಸೇನ್ ಶಾ ಹಣದ ವ್ಯಾನ್‌ನೊಂದಿಗೆ ಪರಾರಿಯಾಗಿದ್ದಾನೆ ಎಂದು ನಗದು ಸಾರಿಗೆ ಕಂಪೆನಿಯ ಪ್ರಾದೇಶಿಕ ಕಾರ್ಯಾಚರಣೆ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಚುಂದ್ರಿಗಾರ್ ರಸ್ತೆಯು ಪಾಕಿಸ್ತಾನದ ಆರ್ಥಿಕ ಕೇಂದ್ರ ಬಿಂದುವಾಗಿದ್ದು ಕೇಂದ್ರ ಹಾಗೂ ಇತರ ಬ್ಯಾಂಕ್‌ಗಳು ಇಲ್ಲಿ ನೆಲೆಸಿವೆ. ಇದೊಂದು ಅಸಾಮಾನ್ಯ ಪ್ರಕರಣವಾಗಿದೆ. ಹಗಲು ಹೊತ್ತಿನಲ್ಲಿ ಕಠಿಣ ಭದ್ರತೆಯ ನಡುವೆಯೇ ವ್ಯಾನ್‌ನೊಂದಿಗೆ ಚಾಲಕ ಪರಾರಿಯಾಗಿದ್ದಾನೆ ಎಂಬುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


ಈ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು ನನ್ನ ಇಷ್ಟು ವರ್ಷದ ಅನುಭವದಲ್ಲಿ ಈ ರೀತಿಯ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಚಾಲಕನನ್ನು ಇನ್ನೂ ಬಂಧಿಸದೇ ಇರುವ ಕಾರಣ ಪ್ರಕರಣದಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ ಎಂದು ವಿಶೇಷ ತನಿಖಾ ಅಧಿಕಾರಿ ಚೌಧರಿ ತಾರಿಕ್ ಹೇಳಿದ್ದಾರೆ.


ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಮುಂದುವರೆದ ಮಳೆ; ಇಂದು ಬೆಂಗಳೂರಿನ ವಾತಾವರಣ ಹೇಗಿರಲಿದೆ?

ಭದ್ರತಾ ಕಂಪೆನಿಗೆ ಸೇರಿದ ನಗದನ್ನು ವ್ಯಾನ್ ಕೇಂದ್ರ ಬ್ಯಾಂಕ್‌ಗೆ ಸಾಗಿಸುತ್ತಿತ್ತು. ಇನ್ನು ಭದ್ರತಾ ಸಿಬ್ಬಂದಿ ಸಲೀಂ ಪ್ರಕಾರ ನಗದನ್ನು ವರ್ಗಾಯಿಸುವ ಕಾರ್ಯವಿಧಾನಗಳನ್ನು ನಡೆಸಲು ಆತ ಒಳಗೆ ಹೋದನು ಎಂದು ತಿಳಿಸಿದ್ದಾನೆ. ವ್ಯಾನ್ ಅನ್ನು ಒಳಗೆ ತರಬೇಕೆಂದು ಹೋದಾಗ, ವ್ಯಾನ್ ಕಾಣೆಯಾಗಿರುವುದು ಆತನ ಗಮನಕ್ಕೆ ಬಂದಿದೆ.


ಸಿಬ್ಬಂದಿ ಚಾಲಕನಿಗೆ ಕರೆ ಮಾಡಿದಾಗ ನನಗೆ ತುರ್ತಾಗಿ ಎಲ್ಲಿಯೋ ಹೋಗಬೇಕಾಗಿದೆ ಈಗ ಬರುತ್ತೇನೆ ಎಂದು ತಿಳಿಸಿದ್ದಾನೆ. ಸುಮಾರು ಸಮಯದ ಬಳಿಕ ಸಿಬ್ಬಂದಿ ಚಾಲಕನಿಗೆ ಪುನಃ ಕರೆಮಾಡಿದಾಗ ಆತನ ಫೋನ್ ಸ್ವಿಚ್ ಆಫ್ ಆಗಿತ್ತು.


ಇನ್ನು ವ್ಯಾನ್ ಪತ್ತೆಮಾಡಿದಾಗ ಕೇಂದ್ರ ಬ್ಯಾಂಕ್‌ನಿಂದ ಕೆಲವು ಕಿಲೋಮೀಟರ್‌ಗಳ ಅಂತರದಲ್ಲಿ ವಾಹನ ಪತ್ತೆಯಾಗಿದೆ. ಆದರೆ ವ್ಯಾನ್‌ನೊಳಗಿದ್ದ ನಗದು ಕಾಣೆಯಾಗಿದೆ. ವ್ಯಾನ್‌ನೊಳಗಿನ ನಗದಿನೊಂದಿಗೆ ಆಯುಧಗಳು, ಕ್ಯಾಮೆರಾ ಹಾಗೂ ಡಿವಿಆರ್ ಕೂಡ ನಾಪತ್ತೆಯಾಗಿದೆ. ಇನ್ನು ಚಾಲಕನ ಕುಟುಂಬ ಸದಸ್ಯರನ್ನು ತನಿಖೆ ಮಾಡಿದಾಗ ಪುತ್ರನೊಂದಿಗೆ ನಮಗೆ ಸಂಪರ್ಕವಿಲ್ಲ. ನಾವು ಆತನನ್ನು ಆರು ತಿಂಗಳ ಹಿಂದೆಯೇ ಮನೆಯಿಂದ ಹೊರಗೆ ಹಾಕಿದ್ದೇವೆ ಎಂದು ತಿಳಿಸಿದ್ದಾರೆ. ಚಾಲಕ ಖೈಬರ್ ಪಖ್ತುಂಖ್ವಾ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ:Afghanistan VS Taliban: ತಾಲಿಬಾನಿಗರ ಮೇಲುಗೈ: ಅಫ್ಘಾನಿಸ್ತಾನದಿಂದ ಭಾರತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ

ಕಳೆದ ವಾರ ಕೂಡ ಇಂತಹದ್ದೇ ಬ್ಯಾಂಕ್ ದರೋಡೆ ಪ್ರಕರಣವೊಂದು ನಡೆದಿದ್ದು ಕರಾಚಿಯ ಬಫರ್ ವಲಯದಲ್ಲಿ ಹಣ ಬದಲಾಯಿಸುವ ಇಬ್ಬರು ಕಾವಲುಗಾರರನ್ನು ಗುಂಡಿಕ್ಕಿ ಕೊಲ್ಲಲಾಯಿತು ಮತ್ತು ಶಂಕಿತ ದರೋಡೆಕೋರರು ಒಬ್ಬ ಕಾರ್ಮಿಕನನ್ನು ಗಾಯಗೊಳಿಸಿದ್ದರು. ಅವರು ಸುಮಾರು 1 ಮಿಲಿಯನ್ ಹಣವನ್ನು ದೋಚಿ ಪರಾರಿಯಾಗಿದ್ದರು.

Published by:Latha CG
First published: