ಅವಧಿಗೂ ಮುನ್ನ ಪಟಾಕಿ ಸಿಡಿಸಿದ 13 ಜನರನ್ನು ಬಂಧಿಸಿದ ಪೊಲೀಸರು

ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್​ ರಾತ್ರಿ 8 ರಿಂದ 10 ಗಂಟೆವರೆಗೂ ಸಮಯ ನಿಗದಿ ಪಡಿಸಿದ್ದು, ಈ ಅವಧಿ ಮೀರಿ ಪಟಾಕಿ ಹೊಡೆದರೆ ಬಂಧನ ಗ್ಯಾರಂಟಿ

Seema.R | news18
Updated:November 7, 2018, 1:01 PM IST
ಅವಧಿಗೂ ಮುನ್ನ ಪಟಾಕಿ ಸಿಡಿಸಿದ 13 ಜನರನ್ನು ಬಂಧಿಸಿದ ಪೊಲೀಸರು
ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್​ ರಾತ್ರಿ 8 ರಿಂದ 10 ಗಂಟೆವರೆಗೂ ಸಮಯ ನಿಗದಿ ಪಡಿಸಿದ್ದು, ಈ ಅವಧಿ ಮೀರಿ ಪಟಾಕಿ ಹೊಡೆದರೆ ಬಂಧನ ಗ್ಯಾರಂಟಿ
  • News18
  • Last Updated: November 7, 2018, 1:01 PM IST
  • Share this:
ನ್ಯೂಸ್​ 18 ಕನ್ನಡ

ಚೆನ್ನೈ (ನ.07): ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯಲು ಸುಪ್ರೀಂ ಕೋರ್ಟ್​ ಸಮಯ ನಿಗದಿ ಮಾಡಿದೆ. ರಾತ್ರಿ 8 ಗಂಟೆ ಯಿಂದ 10ಗಂಟೆವರೆಗೆ ಎರಡುಗಂಟೆಗಳ ಕಾಲ ಎಲ್ಲಾ ರಾಜ್ಯಗಳಲ್ಲಿ ಪಟಾಕಿ ಹೊಡೆಯಲು  ಸೂಚನೆ ನೀಡಲಾಗಿದೆ.

ತಮಿಳುನಾಡಿನಲ್ಲಿ   ಈ ವರ್ಷದ ದೀಪಾವಳಿಯಲ್ಲಿ ಪಟಾಕಿ ಸಿಡಿಸಲು ಸಮಯವನ್ನು  ಬೆಳಗ್ಗೆ 6ರಿಂದ 7 ಗಂಟೆಯವರೆಗೆ ಮತ್ತು ಸಂಜೆ 7ರಿಂದ 8 ಗಂಟೆಯವರೆಗೆ ಪಟಾಕಿ ಹೊಡೆಯಲು ಅವಕಾಶ ನೀಡಿ ಸರ್ಕಾರ ಸಮಯ ಮಾರ್ಪಡಿಸಿತು. ಆದರೆ, ಈ ಸಮಯಕ್ಕೂ ಮುನ್ನ 13 ಜನರ ಪಟಾಕಿ ಹೊಡೆದು ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ.

ಚೆನ್ನೈ, ಕೊಯಮತ್ತೂರು, ತ್ರಿಪುರಾ ನಗರದಲ್ಲಿ ಬೆಳಗ್ಗಿನ ಜಾವ 5ಗಂಟೆಗೆ ದೀಪಾವಳಿ ಪಟಾಕಿ ಹೊಡೆಯಲು ಕೆಲವರು ಮುಂದಾಗಿದ್ದಾರೆ. ಈ ವೇಳೆ ಮಫ್ತಿ ಬಟ್ಟೆಯಲ್ಲಿದ್ದ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಸುಪ್ರೀಂ ಕೋರ್ಟ್​ ಆದೇಶದ ಹಿನ್ನಲೆಯಲ್ಲಿ ಅವಧಿಗೆ ಮುನ್ನ ಹಾಗೂ ಅವಧಿ ಮೀರಿ ಪಟಾಕಿ ಹೊಡೆಯುವುದನ್ನು ಗಮನಿಸಲು ನಗರಗಳಲ್ಲಿ ಮಫ್ತಿ ಬಟ್ಟೆಯಲ್ಲಿ ಪೊಲೀಸರು ಸಂಚಾರ ಮಾಡುತ್ತಿದ್ದು, ಈ ವೇಳೆ 13 ಜನರನ್ನು ಬಂಧಿಸಲಾಗಿದೆ. ಬಂಧಿತ ಗುಂಪಿನಲ್ಲಿ 12 ವರ್ಷದ ಬಾಲಕ ಕೂಡ ಇರುವುದು ವಿಶೇಷ.

200 ಜನರ ಮೇಲೆ ಪ್ರಕರಣ

ವಿಲ್ಲುಪುರಮ್​ ಜಿಲ್ಲೆಯಲ್ಲಿ ಪಟಾಕಿ ಹೊಡೆದ 80 ಜನರ ಮೇಲೆ ಪ್ರಕರಣ ದಾಖಲಾಗಿದೆ. ವಿರುಧುನಗರ್​ನಲ್ಲಿ 40 ಜನ, ಕೋಯಮತ್ತೂರ್​ ಹಾಗೂ ದಿಂಡಿಗಲ್​ 20, ನಮಕ್ಕಲ್​, ಈರೋಡ್​, ಬಗೆರ್ಕೊಲಿಯಲ್ಲಿ ತಲಾ ಒಬ್ಬರ ಮೇಲೆ ಪ್ರಕರಣ ದಾಖಲಾದ್ದು, ಒಟ್ಟಾರೆ ಅವಧಿ ಮೀರಿ ಪಟಾಕಿ ಸಿಡಿಸಿದ 200 ಜನರ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.ಸುಪ್ರೀಂ ಕೋರ್ಟ್​ ಆದೇಶ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್​ 291 ಮತ್ತು 188, 268 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ: ತಮಿಳುನಾಡಿನಲ್ಲಿ ಪಟಾಕಿ ಹೊಡೆಯಲು ಸಮಯ ನಿಗದಿ ಮಾಡಿದ ಸರ್ಕಾರ

ತಮಿಳುನಾಡಿನ ನಾಮಕ್ಕಲ್​ ಜಿಲ್ಲೆಯಲ್ಲಿ ಪಟಾಕಿ ಹೊಡೆಯುವಾಗ 12 ವರ್ಷದ ಮಣಿವೇಲು ಎಂಬ ಬಾಲಕ ಪಟಾಕಿ ಸಿಡಿಸಲು ಹೋಗಿ ಸಾವನ್ನಪ್ಪಿರುವ ಘಟನೆ ಕೂಡ ದಾಖಲಾಗಿದೆ.

First published:November 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading