Viral Video: ಮಾವನಿಗೆ ಸಬ್‌ಇನ್ಸ್‌ಪೆಕ್ಟರ್ ಸೊಸೆಯಿಂದ ಹಲ್ಲೆ! ವೈರಲ್ ಆಯ್ತು ಸಿಸಿಟಿವಿ ವಿಡಿಯೋ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತವರು ಮನೆಗೆ ಹೋದ ಚಂಚಲ್ ಪುನಃ ಅತ್ತೆ ಮಾವ ಇರುವಲ್ಲಿಗೆ ತನ್ನ ತಾಯಿಯೊಂದಿಗೆ ಬಂದಿದ್ದು ಬಲವಾಗಿ ಬಾಗಿಲು ಬಡಿಯತೊಡಗಿದ್ದಾಳೆ. ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ತನ್ನ ತಾಯಿ ಹಾಗೂ ಇನ್ನೊಬ್ಬ ಪೊಲೀಸರ ಮುಂದೆಯೇ ತನ್ನ ಮಾವನಿಗೆ ಹೊಡೆಯುತ್ತಿರುವುದು ವರದಿಯಾಗಿದೆ.

ಮುಂದೆ ಓದಿ ...
  • Share this:

ಮೊದಲೆಲ್ಲಾ ಅವಿಭಕ್ತ ಕುಟುಂಬದಲ್ಲಿ (Family) ಪ್ರೀತಿ, ಸಂತೋಷ, ತಾಳ್ಮೆಯಂತಹ ಬಾಂಧವ್ಯ ಮಿಳಿತಗೊಂಡಿರುತ್ತಿತ್ತು. ಮನೆಯಲ್ಲಿರುವ ಅತ್ತೆ ಮಾವನವರೊಂದಿಗೆ ಸೊಸೆಯಂದಿರುವ ಆತ್ಮೀಯವಾಗಿರುತ್ತಿದ್ದರು. ಯಾವುದೇ ಭಿನ್ನಾಭಿಪ್ರಾಯಗಳಿಗೆ ಆಸ್ಪದವಿರುತ್ತಿರಲಿಲ್ಲ, ಅಷ್ಟೊಂದು ಅನುರೂಪದ ಬಾಂಧವ್ಯ (Attachment) ಅವರ ಮಧ್ಯೆ ಇರುತ್ತಿತ್ತು. ಆದರೀಗ ಕುಟುಂಬಗಳು ವಿಭಜನೆಯಾಗುತ್ತಿದ್ದಂತೆ ಅತ್ತೆ ಮಾವಂದಿರು ಸೊಸೆಯಂದಿರಿಗೆ ಹೊರೆಯಾಗುತ್ತಿದ್ದಾರೆ ಅಂತೆಯೇ ತಮ್ಮ ಪತಿಯಂದಿರಿಗೆ (Husband) ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವಂತೆ ತಾಕೀತು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಪೀಠಿಕೆ ನೀಡುತ್ತಿರುವುದು ದೆಹಲಿಯ (Delhi) ಲಕ್ಷ್ಮೀ ನಗರದಲ್ಲಿ ಸಂಭವಿಸಿದ ಇಂತಹುದ್ದೇ ಘಟನೆ, ಮನೆಯ ಸೊಸೆಯಾದವಳು ತನ್ನ ಅತ್ತೆ ಹಾಗೂ ಮಾವನಿಗೆ ಯಾವ ರೀತಿಯ ಮಾನ್ಯತೆ ಹಾಗೂ ಗೌರವ (Respect) ನೀಡುತ್ತಿದ್ದಾರೆ ಎಂಬುದನ್ನು ಪ್ರಶ್ನಿಸುವಂತಿದೆ.


ಅದೂ ಕೂಡ ಸೊಸೆಯಾದವಳು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ನ್ಯಾಯುತವಾಗಿ ನಡೆದುಕೊಳ್ಳಬೇಕಾದವರೇ ಹಲ್ಲೆಗೆ ಮುಂದಾಗಿದ್ದಾರೆ ಸೊಸೆಯು ಮಾವನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ವರದಿಯಾಗಿದ್ದು ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


ಘಟನೆಯ ವಿವರವೇನು?
ವರದಿಗಳ ಪ್ರಕಾರ, ವಿಜೇಂದರ್ ಗುಪ್ತಾ (66) ತನ್ನ 62 ವರ್ಷದ ಪತ್ನಿ ವೀಣಾ ಅವರೊಂದಿಗೆ ಲಕ್ಷ್ಮೀ ನಗರದ ಗರ್ವಾಲಿ ಮೊಹಲ್ಲಾದಲ್ಲಿ ವಾಸಿಸುತ್ತಿದ್ದಾರೆ. ವಿಜೇಂದರ್ ಗುಪ್ತಾ ಅವರ ಸೊಸೆ ಚಂಚಲ್, ದೆಹಲಿ ಪೊಲೀಸ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಂಚಲ್ 2020 ರಲ್ಲಿ ಅಂಕುರ್ ಗುಪ್ತಾ ಅವರನ್ನು ವಿವಾಹವಾದರು. ಮದುವೆಯಾದ ನಾಲ್ಕು ತಿಂಗಳ ನಂತರ, ದಂಪತಿಗಳ ನಡುವೆ ವಿವಾದ ಏರ್ಪಟ್ಟಿದ್ದು ಈ ಹಿನ್ನಲೆಯಲ್ಲಿ ಚಂಚಲ್ ತನ್ನ ತವರು ಮನೆಗೆ ಹೋಗಿದ್ದಾರೆ.


ಇದನ್ನೂ ಓದಿ:  Rooster Owner: ಪೊಲೀಸರಿಗೆ ಹುಂಜದ ಓನರ್ ಪತ್ತೆಹಚ್ಚುವ ತಲೆಬಿಸಿ! ಏನಿದು ವಿಚಿತ್ರ ಕೇಸ್?


ತವರು ಮನೆಗೆ ಹೋದ ಚಂಚಲ್ ಪುನಃ ಅತ್ತೆ ಮಾವ ಇರುವಲ್ಲಿಗೆ ತನ್ನ ತಾಯಿಯೊಂದಿಗೆ ಬಂದಿದ್ದು ಬಲವಾಗಿ ಬಾಗಿಲು ಬಡಿಯತೊಡಗಿದ್ದಾಳೆ. ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ತನ್ನ ತಾಯಿ ಹಾಗೂ ಇನ್ನೊಬ್ಬ ಪೊಲೀಸರ ಮುಂದೆಯೇ ತನ್ನ ಮಾವನಿಗೆ ಹೊಡೆಯುತ್ತಿರುವುದು ವರದಿಯಾಗಿದೆ. ಪೊಲೀಸರು ಮಧ್ಯಪ್ರವೇಶಿಸುವ ಮುನ್ನವೇ ಸಬ್ ಇನ್ಸ್‌ಪೆಕ್ಟರ್ ತನ್ನ ಮಾವನಿಗೆ ಕಪಾಳ ಮೋಕ್ಷ ಮಾಡಿರುವುದು ದೃಶ್ಯಾವಳಿಗಳಲ್ಲಿ ದಾಖಲೆಯಾಗಿದೆ.


ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 427 (ಐವತ್ತು ರೂಪಾಯಿ ಮೊತ್ತಕ್ಕೆ ಹಾನಿ ಮಾಡುವ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ವೃದ್ಧ ಮಾವನ ಮೇಲೆ ಹಲ್ಲೆ ನಡೆಸಿದ ಸಬ್‌ಇನ್ಸ್‌ಪೆಕ್ಟರ್ ಆಗಿರುವ ಸೊಸೆ
ಹಲ್ಲೆಗೂ ಮುನ್ನ ಸಬ್‌ಇನ್ಸ್‌ಪೆಕ್ಟರ್ ಹಾಗೂ ಆಕೆಯ ತಾಯಿ ಪೋಲೀಸರ ಮುಂದೆಯೇ ವೃದ್ಧನೊಂದಿಗೆ ತೀವ್ರವಾದ ವಾಗ್ವಾದ ನಡೆಸಿದ್ದು, ಈ ವಾಗ್ವಾದ ಹಾಗೆಯೇ ಮುಂದುವರಿದು ಮಹಿಳೆ ಮಾವನಿಗೆ ಹಲ್ಲೆಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಘಟನೆಯ ಬಗ್ಗೆ ತೀವ್ರವಾದ ತನಿಖೆ ನಡೆಸುವಂತೆ ಹೇಳಲಾಗಿದೆ. ವೃದ್ಧ ದಂಪತಿಗಳು ಈ ಸಂಬಂಧವಾಗಿ ಪೊಲೀಸ್ ಠಾಣೆಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ ಇದುವರೆಗೂ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.


ಇದನ್ನೂ ಓದಿ: Crime News: ಅಮ್ಮನಿಗೆ ಮುಕ್ತಿ ಕೊಟ್ಟೆ, 77 ಪುಟದ ಡೆತ್​ನೋಟ್​ ಪತ್ತೆ: ಅವ್ವನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!


ನಗರದ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಪಿಯು (ಸಬ್‌ ಇನ್ಸ್‌ಪೆಕ್ಟರ್) ಅತ್ತೆ ಮಾವನೊಂದಿಗೆ ಕಾನೂನು ಹೋರಾಟ ನಡೆಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಸ್ವಯಂಪ್ರೇರಿತವಾಗಿ ಹಾನಿಯನ್ನುಂಟುಮಾಡುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅನುಸಾರವಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿ ಸಬ್‌ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ಕ್ರಮಕ್ಕೆ ಸೂಕ್ತ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂಬುದು ತಿಳಿದು ಬಂದಿದೆ.

Published by:Ashwini Prabhu
First published: