Salman Khan-Akshay Kumar ಸೇರಿದಂತೆ 30 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು..!

ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್​ ಮಾಡಿದ್ದ ಸೆಲೆಬ್ರಿಟಿಗಳಲ್ಲಿ ಬಹುತೇಕರು ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ್ದ ಯುವತಿಯ ಹೆಸರನ್ನು ಪೋಸ್ಟ್​ಗಳಲ್ಲಿ ಹಂಚಿಕೊಂಡಿದ್ದರು. ಈಗ ಇದು ಅವರ ವಿರುದ್ಧ ಪ್ರಕರಣ ದಾಖಲಾಗಲು ಕಾರಣವಾಗಿದೆ.

ರವಿತೇಜ, ಅಕ್ಷಯ್​ ಕುಮಾರ್, ಸಲ್ಮಾನ್​ ಸೇರಿದಂತೆ 38 ಮಂದಿ ವಿರುದ್ಧ ಪ್ರಕರಣ ದಾಖಲು​

ರವಿತೇಜ, ಅಕ್ಷಯ್​ ಕುಮಾರ್, ಸಲ್ಮಾನ್​ ಸೇರಿದಂತೆ 38 ಮಂದಿ ವಿರುದ್ಧ ಪ್ರಕರಣ ದಾಖಲು​

  • Share this:
ಎಲ್ಲಿ ಯಾವ ಅಮಾನವೀಯ ಕೃತ್ಯಗಳು ನಡೆದರೂ ಸಹ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚಿನವರು ತಮ್ಮ ಆಕ್ರೋಶ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅಪಘಾತ, ಮರಣ ಹಾಗೂ ಅತ್ಯಾಚಾರದಂತಹ ಕೃತ್ಯಗಳು ನಡೆದಾಗಲೂ ಘಟನೆ ಕುರಿತಾಗಿ ಸಾಕಷ್ಟು ಮಂದಿ ಸೋಶಿಯಲ್​ ಮೀಡಿಯಾದಲ್ಲಿ (Social Media) ತುಂಬಾ ಜನರು ಪೋಸ್ಟ್​ ಮಾಡುತ್ತಿರುತ್ತಾರೆ. ಆದರೆ, ಹೀಗೆ ಪೋಸ್ಟ್​ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕಾರಣ ಕೆಲವೊಂದು ಘಟನೆಗಳ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಾಗ ಎಚ್ಚರದಿಂದ ಇರಬೇಕು. ಇಲ್ಲವಾದಲ್ಲಿ ಕಾನೂನಿನ ದೃಷ್ಟಿಯಲ್ಲಿ ದೋಷಿಯಾಗಬೇಕಾಗುತ್ತದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ (Rape Case) ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕೆಲ ಸೆಲಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಬಾಲಿವುಡ್​ ನಟರಾದ ಸಲ್ಮಾನ್​ ಖಾನ್ (Salman Khan)​, ಅಕ್ಷಯ್​ ಕುಮಾರ್​  (Akshay Kumar) ಸೇರಿದಂತೆ  ಇತರೆ 38 ಮಂದಿ ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

2019ರಲ್ಲಿ ಹೈದರಾಬಾದಿನಲ್ಲಿ ನಡೆದಿದ್ದ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿಷಯವಾಗಿ ಈಗ ಬಾಲಿವುಡ್ ಹಾಗೂ ಟಾಲಿವುಡ್​ ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಟೋಲ್​ ಪ್ಲಾಜಾ ಬಳಿ ನಾಲ್ಕವರು ಆರೋಪಿಗಳು ಯುವತಿಯ ಮೇಲೆ ಅತ್ಯಾಚಾರವೆಸಗಿ ನಂತರ ಬೆಂಕಿ ಇಟ್ಟು ಸುಟ್ಟು ಹಾಕಿದ್ದರು.

Radhe Piracy, Delhi High court, Radhe, OTT Ralease, Radhe Movie OTT Release, Bollywood, ರಾಧೆ ಸಿನಿಮಾ, ಸಲ್ಮಾನ್​ ಖಾನ್​, ರಾಧೆ ಸಿನಿಮಾ ಒಟಿಟಿ ರಿಲೀಸ್​, salman khan, salman farming, salman farming video, ms dhoni farming, dhoni in agriculture, dhoni organic farming, salman agriculture, ಸಲ್ಮಾನ್​ ಖಾನ್​, ಸುಶಾಂತ್ ಸಿಂಗ್​ ಆತ್ಮಹತ್ಯೆ, ಸಲ್ಮಾನ್​ ಖಾನ್​ ಟ್ರ್ಯಾಕ್ಟರ್​ ಓಡಿಸಿದ ವಿಡಿಯೋ, ಕೃಷಿ ಮಾಡುತ್ತಿರುವ ಸಲ್ಮಾನ್ ಖಾನ್​​, ಟ್ರೋಲಾದ ಸಲ್ಮಾನ್ ಖಾನ್​
ಸಲ್ಮಾನ್​ ಖಾನ್​


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ ತುಂಬಾ ಜನರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದರು. ಜೊತೆಗೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಇದನ್ನೂ ಓದಿ: ದಿವ್ಯಾ ಸುರೇಶ್​ ಕುಟುಂಬವನ್ನು ಭೇಟಿ ಮಾಡಿದ Bigg Boss Kannada Season 8ರ ವಿನ್ನರ್​ ಮಂಜು ಪಾವಗಡ

ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್​ ಮಾಡಿದ್ದ ಸೆಲೆಬ್ರಿಟಿಗಳಲ್ಲಿ ಬಹುತೇಕರು ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ್ದ ಯುವತಿಯ ಹೆಸರನ್ನು ಪೋಸ್ಟ್​ಗಳಲ್ಲಿ ಹಂಚಿಕೊಂಡಿದ್ದರು. ಈಗ ಇದು ಅವರ ವಿರುದ್ಧ ಪ್ರಕರಣ ದಾಖಲಾಗಲು ಕಾರಣವಾಗಿದೆ. ಇಂತಹ ಯಾವುದೇ ಪ್ರಕರಣಗಳಲ್ಲಿ ಮಕ್ಕಳು ಹಾಗೂ ಹೆಂಗಸರ ಹೆಸರುಗಳನ್ನು ಎಲ್ಲಿಯೂ ಬಹಿರಂಗಪಡಿಸಬಾರದು. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಅದು ಕಾನೂನಿನ ಪ್ರಕಾರ ತಪ್ಪಾಗುತ್ತದೆ.

ಈಗ ಈ ಸಂಬಂಧ ಬಾಲಿವುಡ್ ನಟರಾದ ಸಲ್ಮಾನ್ ಖಾನ್​, ಅಕ್ಷಯ್​ ಕುಮಾರ್, ರಾಕುಲ್ ಪ್ರೀತ್ ಸಿಂಗ್​, ಅನುಪಮ್ ಖೇರ್, ಫರ್ಹಾನ್​ ಅಖ್ತರ್​, ರವಿತೇಜ, ಅಲ್ಲು ಸಿರೀಶ್​, ಚಾರ್ಮಿ ಕೌರ್​ ಸೇರಿದಂತೆ ಬಾಲಿವುಡ್ ಹಾಗೂ ಟಾಲಿವುಡ್​ನ ಒಟ್ಟು 38 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ದೆಹಲಿ ಮೂಲದ ವಕೀಲರಾದ ಗೌರವ್​ ಗುಲಾಟಿ ಎಂಬುವರು ಪೀನಲ್ ಕೋಡ್​ 228ರ ಪ್ರಕಾರ ಕೇಸ್​ ದಾಖಲಿಸಿದ್ದಾರೆ.

ಇದನ್ನೂ ಓದಿ: Anita Bhat: ಟ್ರೋಲ್‍ ಮಾಡುವವರಿಗೆ ಸೈಕೋ ಸುಂದರಿಯ ಕ್ಲಾಸ್​: ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ...!

ಸಾಮಾಜಿಕ ಜವಾಬ್ದಾರಿಯನ್ನು ಮರೆತು ಸೆಲೆಬ್ರಿಟಿಗಳು ಯುವತಿಯ ಹೆಸರನ್ನು ರಿವೀಲ್ ಮಾಡಿದ್ದು ಸರಿಯಲ್ಲ ಎಂದು ವಕೀಲರಾದ ಗೌರವ್​ ಗುಲಾಟಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಇವರನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಿದ್ದಾರಂತೆ.

ಇನ್ನು ಬಾಲಿವುಡ್​ ಬ್ಯಾಡ್​ ಬಾಯ್​ ಈಗಾಗಲೇ ಸಾಕಷ್ಟು ವಿವಾದಲ್ಲಿ ಸಿಲುಕಿಕೊಂಡಿದ್ದು, ನ್ಯಾಯಾಲಯದ ಸುತ್ತ ಸುತ್ತುತ್ತಿದ್ದಾರೆ. ಸದ್ಯ ಟರ್ಕಿಯಲ್ಲಿ ಟೈಗರ್ 3 ಸಿನಿಮಾದ ಚಿತ್ರೀಕರಣದಲ್ಲಿ ಕತ್ರಿನಾ ಕೈಫ್​ ಜೊತೆ ಬ್ಯುಸಿಯಾಗಿದ್ದಾರೆ. ಇನ್ನು ವಿದೇಶದಲ್ಲಿದ್ದ ಅಕ್ಷಯ್ ಕುಮಾರ್ ಅವರ ಅಮ್ಮನ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಶೂಟಿಂಗ್​ ಬಿಟ್ಟು ವಿದೇಶದಿಂದ ಬಂದಿದ್ದಾರೆ. ಅಕ್ಷಯ್ ಅವರ ಅಮ್ಮನನ್ನು ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿದೆ.
Published by:Anitha E
First published: