Gutka Ad ಬಾಲಿವುಡ್ ಆರೋಗ್ಯಕ್ಕೆ ಹಾನಿಕರ! ಅಮಿತಾಭ್ ಬಚ್ಚನ್, ಶಾರುಖ್, ರಣವೀರ್, ಅಜಯ್‌ ದೇವಗನ್‌ ಮೇಲೆ ಕೇಸ್!

ಜಾಹೀರಾತುಗಳಲ್ಲಿ ಗುಟ್ಕಾವನ್ನು ಪ್ರಚಾರ ಮಾಡಿದ್ದಕ್ಕಾಗಿ ಬಾಲಿವುಡ್ ನಟರಿಗೆ ಈಗ ಸಂಕಷ್ಟ ಎದುರಾಗಿದೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ಸೂಪರ್ ಸ್ಟಾರ್ ಶಾರುಖ್ ಖಾನ್, ರಣವೀರ್ ಸಿಂಗ್ ಮತ್ತು ಅಜಯ್ ದೇವಗನ್ ವಿರುದ್ಧ ಇದೀಗ ಕೇಸ್ ದಾಖಲಾಗಿದೆ.

ಬಾಲಿವುಡ್ ನಟರ ವಿರುದ್ಧ ಕೇಸ್

ಬಾಲಿವುಡ್ ನಟರ ವಿರುದ್ಧ ಕೇಸ್

  • Share this:
ಮುಂಬೈ: ಸಿನಿಮಾ ನಟ (Cinema Hero), ನಟಿಯರು (Heroine) ಅಂದ್ರೆ ನಮ್ಮ ನಿಮ್ಮಂತೆ ಅಲ್ಲ. ಅವರಿಗೆ ಅಸಂಖ್ಯಾತ ಅಭಿಮಾನಿಗಳಿರುತ್ತಾರೆ (Fans). ಕೋಟ್ಯಾಂತರ ಫಾಲೋವರ್ಸ್ (Followers) ಇರುತ್ತಾರೆ. ಅವರನ್ನು ಅನುಕರಿಸುವವರು ಅದೆಷ್ಟೋ ಮಂದಿ ಇರುತ್ತಾರೆ. ಸಿನಿಮಾ, ಟಿವಿಗಳಲ್ಲಿ (TV) ಅವರು ಮಾಡಿದಂತೆ ಮಾಡುವ, ಅವರ ಡ್ಯಾನ್ಸ್ (Dance), ಫೈಟ್ (Fight), ಹಾವಭಾವ, ಮಾತಿನ ಶೈಲಿಗಳು, ಅವರ ಸ್ಟೈಲ್ (Style) ಅನುಕರಿಸುವ ಅದೆಷ್ಟೋ ಮಂದಿ ಇದ್ದಾರೆ. ಅದ್ರಲ್ಲೂ ಬಾಲಿವುಡ್ ಸ್ಟಾರ್‌ಗಳಿಗೆ (Bollywood Stars) ಇವೆಲ್ಲ ತುಸು ಹೆಚ್ಚೆ. ಇಂತಹ ತಾರೆಯರು ಸಮಾಜಕ್ಕೆ (Society) ಒಳ್ಳೆಯ ಸಂದೇಶ (Good Message) ನೀಡಬೇಕು, ಯಾಕೆಂದ್ರರೆ ಅವರ ಫಾಲೋವರ್ಸ್‌ಗಳಲ್ಲಿ ಬಹುತೇಕ ಮಂದಿಯಾದರೂ ಅದನ್ನು ಫಾಲೋ ಮಾಡ್ತಾರೆ. ಆದ್ರೆ ಅಂತಹ ತಾರೆಯರೇ ತಪ್ಪು ಸಂದೇಶ ಸಾರಿದ್ರೆ? ಇದೀಗ ಆಗಿದ್ದು ಇದೆ. ಗುಟ್ಕಾ (Gutka) ಮುಂತಾದ ಜಾಹೀರಾತುಗಳ (Advertisement) ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಅಂತ ಆರೋಪಿ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ (Amitabh Bachchan), ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgan), ರಣವೀರ್ ಸಿಂಗ್ (Ranveer Singh) ಸೇರಿದಂತೆ ಪ್ರಮುಖರ ಮೇಲೆ ಕೇಸ್ (Case) ಹಾಕಲಾಗಿದೆ.

ಬಾಲಿವುಡ್‌ ಸ್ಟಾರ್ಸ್‌ಗೆ ಗುಟ್ಕಾ ಕಂಟಕ!

ಜಾಹೀರಾತುಗಳಲ್ಲಿ ಗುಟ್ಕಾವನ್ನು ಪ್ರಚಾರ ಮಾಡಿದ್ದಕ್ಕಾಗಿ ಬಾಲಿವುಡ್ ನಟರಿಗೆ ಈಗ ಸಂಕಷ್ಟ ಎದುರಾಗಿದೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ಸೂಪರ್ ಸ್ಟಾರ್ ಶಾರುಖ್ ಖಾನ್, ರಣವೀರ್ ಸಿಂಗ್ ಮತ್ತು ಅಜಯ್ ದೇವಗನ್ ವಿರುದ್ಧ ಇದೀಗ ಕೇಸ್ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತನಿಂದ ದೂರು

ಬಾಲಿವುಡ್ ತಾರೆಯರ ವಿರುದ್ಧ ಮುಜಾಫರ್‌ಪುರ ಮೂಲದ ಕಾರ್ಯಕರ್ತ ತಮನ್ನಾ ಹಶ್ಮಿ ಎಂಬುವರು ದೂರು ದಾಖಲಿಸಿದ್ದಾರೆ. ಸೆಕ್ಷನ್ U/S 467, 468, 439, 120B ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ . ಈ ಬಾಲಿವುಡ್ ತಾರೆಯರು ಗುಟ್ಕಾವನ್ನು ಅನುಮೋದಿಸಲು ತಮ್ಮ ಜನಪ್ರಿಯತೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇವರು ಸಮಾಜಕ್ಕೆ ತಪ್ಪು ಸಂದೇಶ ಬಿತ್ತರಿಸುತ್ತಿದ್ದಾರೆ ಅಂತ ದೂರಿನಲ್ಲಿ ತಮನ್ನಾ  ಹಶ್ಮಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Bomb Threat Call: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ! "ಏನ್ ಮಾಡ್ಕೋತೀರಿ" ಎಂದ ಅಪರಿಚಿತ ಯಾರು?

ದೂರು ಅಂಗೀಕರಿಸಿದ ಕೋರ್ಟ್

ಈ ನಟರ ವಿರುದ್ಧ ದಾಖಲಾದ ಪ್ರಕರಣವನ್ನು ನ್ಯಾಯಾಲಯವು ಅಂಗೀಕರಿಸಿದೆ ಮತ್ತು ವಿಚಾರಣೆಯ ದಿನಾಂಕವನ್ನು ಮೇ 27, 2022 ಕ್ಕೆ ಇರಿಸಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಪ್ರತಿಕ್ರಿಯೆ ನೀಡಲು ಬಾಲಿವುಡ್ ನಟರ ನಕಾರ

ಇನ್ನು ತಮ್ಮ ಬಗ್ಗೆ ದಾಖಲಾಗಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಲು ಬಾಲಿವುಡ್ ಸ್ಟಾರ್ ನಟರು ನಿರಾಕರಿಸಿದ್ದಾರೆ. ಅಮಿತಾಭ್ ಬಚ್ಚನ್, ಸೂಪರ್ ಸ್ಟಾರ್ ಶಾರುಖ್ ಖಾನ್, ರಣವೀರ್ ಸಿಂಗ್ ಮತ್ತು ಅಜಯ್ ದೇವಗನ್ ಯಾರೂ ಕೂಡ ಮಾಧ್ಯಮಗಳಿಗೆ ಪ್ರತ್ರಿಕ್ರಿಯೆ ನೀಡಿಲ್ಲ.

ಅಕ್ಷಯ ಕುಮಾರ್‌ ವಿರುದ್ಧವೂ ವ್ಯಕ್ತಿವಾಗಿತ್ತು ಟೀಕೆ

ಇನ್ನು ಕಳೆದ ಏಪ್ರಿಲ್‌ನಲ್ಲಿ, ಅಕ್ಷಯ್ ಕುಮಾರ್ ಪಾನ್ ಮಸಾಲಾ ಬ್ರಾಂಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಜೊತೆಗೆ ಅಜಯ್ ದೇವನಗ್ ಹಾಗೂ ಶಾರುಖ್ ಖಾನ್ ಜೊತೆ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆನ್‌ಲೈನ್‌ನಲ್ಲಿ ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಬಳಿಕ ಅವರು ಜಾಹೀರಾತು ಒಪ್ಪಂದದಿಂದ ಹಿಂದೆ ಸರಿದರು.

ಇದನ್ನೂ ಓದಿ: Yash: ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ಯಶ್​! 'ಗುಟ್ಕಾ ಗ್ಯಾಂಗ್'​ ಸೇರ್ಲಿಲ್ಲ ರಾಕಿ, ನೀವೇ ನಿಜವಾದ ಸುಲ್ತಾನ

ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ್ದ ಯಶ್​

ಇನ್ನು ರಾಕಿಂಗ್ ಸ್ಟಾರ್ ಯಶ್‌ಗೂ ಕೂಡ ಗುಟ್ಕಾ ಜಾಹೀರಾತಿನಿಂದ ಆಫರ್ ಬಂದಿತ್ತುಯ ಆದರೆ ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದರು.  ರಾಕಿ ಬಾಯ್‌ ತೆಗೆದುಕೊಂಡು ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.
Published by:Annappa Achari
First published: