HOME » NEWS » National-international » CASE AGAINST JOURNALIST WHO ACCUSED RAM TEMPLE TRUST MEMBER OF LAND GRAB MAK

Ram Mandir Land Scam| ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಸದ್ಯರ ಮೇಲೆ ಭೂ ಕಬಳಿಕೆ ಆರೋಪ ಮಾಡಿದ್ದ ಪತ್ರಕರ್ತನ ವಿರುದ್ಧ ಕೇಸ್​!

ಮೂರು ದಿನಗಳ ಹಿಂದೆ ಪತ್ರಕರ್ತ ವಿನೀತ್​ ನರೈನ್​ ಬಹಿರಂಗವಾಗಿ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಚಂಪತ್ ರಾಯ್ ಮತ್ತು ಅವರ ಸಹೋದರರು  ಬಿಜ್ನೋರ್‌ನಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.

news18-kannada
Updated:June 21, 2021, 1:01 PM IST
Ram Mandir Land Scam| ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಸದ್ಯರ ಮೇಲೆ ಭೂ ಕಬಳಿಕೆ ಆರೋಪ ಮಾಡಿದ್ದ ಪತ್ರಕರ್ತನ ವಿರುದ್ಧ ಕೇಸ್​!
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ಮತ್ತು ರಾಮ ಮಂದಿರ  ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್.
  • Share this:
ಉತ್ತರಪ್ರದೇಶ (ಜೂನ್ 21); ಶತಮಾನಗಳಿಂದ ಇತ್ಯರ್ಥವಾದಗ ರಾಮ ಜನ್ಮಭೂಮಿ ವಿವಾದಕ್ಕೆ ಸುಪ್ರೀಂ ಕೋರ್ಟ್​ ಪೂರ್ಣ ವಿರಾಮ ಇಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಕಳೆದ ವರ್ಷ ಭೂಮಿ ಪೂಜೆ ನೆರವೇರಿಸಿ ದ್ದರು. ಅಲ್ಲದೆ, ದೇವಾಲಯ ನಿರ್ಮಾಣಕ್ಕೆ ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಅನ್ನು ನಿರ್ಮಿಸಿ, ದೇಶದಾದ್ಯಂತ ದೇಣಿಗೆ ಸಂಗ್ರಹಿಸಲಾಗಿತ್ತು. ರಾಮ ಜನ್ಮಭೂಮಿ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಅಪಾರ ಭೂಮಿಯನ್ನೂ ಖರೀದಿ ಮಾಡಲು ಟ್ರಸ್ಟ್​ ಮುಂದಾಗಿತ್ತು. ಆದರೆ, ಹೀಗೆ ಖರೀದಿ ಮಾಡಲಾದ ಭೂಮಿ ಹೆಸರಿನಲ್ಲಿ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಲೇ ಇದೆ. ಹೀಗೆ ಆರೋಪ ಮಾಡಿದ ಉತ್ತರ ಪ್ರದೇಶದ ಪತ್ರಕರ್ತ ವಿನೀತ್​ ನರೈನ್ ಸೇರಿದಂತೆ 18 ಜನರ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಯೋಧ್ಯೆಯಲ್ಲಿ ವಿವಾದಾತ್ಮಕ ಭೂ ವ್ಯವಹಾರಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ಮತ್ತು ರಾಮ ಮಂದಿರ  ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಹೋದರರ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಭೂ ಅಕ್ರಮ ಆರೋಪಗಳ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ವಿಚಾರಣೆ ನಡೆಸಿರುವ ಬಿಜ್ನೋರ್ ಪೊಲೀಸ್ ಮುಖ್ಯಸ್ಥರು ಈಗಾಗಲೇ ಚಂಪತ್ ರಾಯ್ ಮತ್ತು ಅವರ ಸಹೋದರರಿಗೆ "ಕ್ಲೀನ್ ಚಿಟ್" ನೀಡಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಹೇಳುತ್ತಾರೆ. ಆದರೆ, ಟ್ರಸ್ಟ್​ ವಿರುದ್ಧ ಕ್ರಮಕ್ಕೆ ಮಾತ್ರ ಈವರೆಗೆ ಮುಂದಾಗಿಲ್ಲ.

ಚಂಪತ್ ರಾಯ್ ಅವರ ಸಹೋದರ ಸಂಜಯ್ ಬನ್ಸಾಲ್ ನೀಡಿದ ದೂರಿನ ಆಧಾರದ ಮೇಲೆ ಪತ್ರಕರ್ತ ವಿನೀತ್ ನರೈನ್ ಮತ್ತು ಇತರ ಇಬ್ಬರಾದ - ಅಲ್ಕಾ ಲಾಹೋತಿ ಮತ್ತು ರಜನೀಶ್ ಅವರನ್ನು ಮೊದಲ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಹೆಸರಿಸಲಾಗಿದೆ.

ಈ ಮೂವರೂ ವಿಎಚ್‌ಪಿ ನಾಯಕನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಸಂಚು ರೂಪಿಸಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ "ದೇಶಾದ್ಯಂತ ಕೋಟ್ಯಾಂತರ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ" ಎಂದು ದೂರಲಾಗಿದೆ.

ಮೂರು ದಿನಗಳ ಹಿಂದೆ ಪತ್ರಕರ್ತ ವಿನೀತ್​ ನರೈನ್​ ಬಹಿರಂಗವಾಗಿ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಚಂಪತ್ ರಾಯ್ ಮತ್ತು ಅವರ ಸಹೋದರರು  ಬಿಜ್ನೋರ್‌ನಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Priyanka Gandhi| ರಾಮ ಮಂದಿರ ಟ್ರಸ್ಟ್​ ಮೇಲೆ ಭ್ರಷ್ಟಾಚಾರದ ಆರೋಪ; ಇದು ದಾನ-ನಂಬಿಕೆಗೆ ಅವಮಾನ ಎಂದ ಪ್ರಿಯಾಂಕ ಗಾಂಧಿ

ಎನ್‌ಆರ್‌ಐ ಅಲ್ಕಾ ಲಾಹೋತಿ ಒಡೆತನದ ಹಸುವಿನ ಆಶ್ರಯದಲ್ಲಿ 20,000 ಚದರ ಮೀಟರ್ ಭೂಮಿಯನ್ನು ದೋಚಲು ಚಂಪತ್ ರಾಯ್ ತಮ್ಮ ಸಹೋದರರಿಗೆ ಸಹಾಯ ಮಾಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಶ್ರೀ ನರೈನ್ ಆರೋಪಿಸಿದ್ದಾರೆ.ಅಲ್ಲದೆ, ಎಂಎಸ್ ಲಾಹೋತಿ ಅವರು 2018 ರಿಂದ ಅತಿಕ್ರಮಣದಾರರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದು ಸಾಮಾನ್ಯವಾಗಿ ರಾಮ ಮಂದಿರ ಟ್ರಸ್ಟ್​ ಕಣ್ಣು ಕೆಂಪಗಾಗಿಸಿತ್ತು. ಪರಿಣಾಮ ಇದೀಗ ಆರೋಪ ಮಾಡಿದವರ ವಿರುದ್ಧವೇ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: B.S.Yediyurappa: ಯಡಿಯೂರಪ್ಪ ನಾಯಕತ್ವಕ್ಕೆ ಅರುಣ್ ಸಿಂಗ್ ವರದಿಯಲ್ಲಿ ಫುಲ್ ಮಾರ್ಕ್ಸ್!

ಈ ಹಿಂದೆ ಕೆಲ ಅನಾಮಧೇಯ ವ್ಯಕ್ತಿಗಳು ನಕಲಿ ಚೆಕ್​ ಬಳಕೆ ಮಾಡಿ ರಾಮ ಮಂದಿರ ಟ್ರಸ್ಟ್​ನಿಂದ ದೊಡ್ಡ ಮೊತ್ತದ ಹಣ ವಿತ್​ಡ್ರಾ ಮಾಡಿದ್ದರು. ನಂತರ ಪೊಲೀಸರ ವಶವಾಗಿದ್ದರು. ಆದರೆ, ಇದೀಗ ರಾಮ ಜನ್ಮಭೂಮಿ ಟ್ರಸ್ಟ್​ನಲ್ಲಿರುವವರೇ ಹಣದ ದುರ್ಬಳಕೆಗೆ ಮುಂದಾಗಿರುವುದು ದೇಶದಾದ್ಯಂತ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: MAshok Kumar
First published: June 21, 2021, 12:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories