Payal Rohatgi| ನೆಹರು-ಗಾಂಧಿ ಕುಟುಂಬದ ವಿರುದ್ಧ ಅವಹೇಳನಕಾರಿ ವಿಡಿಯೋ ಪ್ರಸಾರ; ನಟಿ ಪಾಯಲ್ ರೋಹ್ಟಗಿ ವಿರುದ್ಧ ಕೇಸ್ ದಾಖಲು

ನಟಿ ಪಾಯಲ್ ರೋಹ್ಟಗಿ ವರ್ತನೆಯನ್ನು ಖಂಡಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಸೈಬರ್ ಪೊಲೀಸರು ಮಂಗಳವಾರ ಭಾರತೀಯ ದಂಡ ಸಂಹಿತೆಯ ಆಧಾರದಲ್ಲಿ ಸೆಕ್ಷನ್ 153, ಸೆಕ್ಷನ್ 500 ಹಾಗೂ ಸೆಕ್ಷನ್ 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಟಿ ಪಾಯಲ್ ರೋಹ್ಟಗಿ.

ನಟಿ ಪಾಯಲ್ ರೋಹ್ಟಗಿ.

 • Share this:
  ಪುಣೆ (ಸೆಪ್ಟೆಂಬರ್​ 01); ದೇಶದಲ್ಲಿ ನೆಹರು-ಗಾಂಧಿ (Mahatma Gandhi-Jawaharlal Nehru) ಕುಟುಂಬದ ಬಗ್ಗೆ ಅವಹೇಳನಕಾರಿ ಯಾದಂತಹ ಬರಹಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿಯಬಿಡುವುದು ಇತ್ತೀಚೆಗೆ ವಾಡಿಕೆಯಾಗಿ ಬದಲಾಗಿದೆ. ಇದೀಗ ಇಂತಹದ್ದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಪಾಯಲ್ ರೋಹ್ಟಗಿ (Payal Rohatgi) ಪೇಚಿಗೆ ಸಿಲುಕಿ ಪೊಲೀಸ್ ಪ್ರಕರಣವನ್ನೂ ತನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ನಟಿ ಪಾಯಲ್ ರೋಹ್ಟಗಿ ಇತ್ತೀಚೆಗೆ ನೆಹರು-ಗಾಂಧಿ ಕುಟುಂಬದ ವಿರುದ್ಧ ಅವಹೇಳನಕಾರಿ ವಿಡಿಯೋ ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಈ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆ ನಗರದ ಸೈಬರ್ ಪೊಲೀಸರು ಇದೀಗ ಬಾಲಿವುಡ್ ನಟಿ ಪಾಯಲ್ ರೋಹ್ಟಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

  ನಟಿ ಪಾಯಲ್ ರೋಹ್ಟಗಿ ವರ್ತನೆಯನ್ನು ಖಂಡಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಸೈಬರ್ ಪೊಲೀಸರು ಮಂಗಳವಾರ ಭಾರತೀಯ ದಂಡ ಸಂಹಿತೆಯ ಎರಡು ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು (ಸೆಕ್ಷನ್ 153 ), ಮಾನನಷ್ಟಕ್ಕೆ ಶಿಕ್ಷೆ (ಸೆಕ್ಷನ್ 500) ಮತ್ತು ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆ (ಸೆಕ್ಷನ್ 505 (2)) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

  ದೂರಿನ ಪ್ರಕಾರ, "ನಟಿ ಪಾಯಲ್ ರೋಹ್ಟಗಿ, ಅಪರಿಚಿತ ವ್ಯಕ್ತಿಯೊಂದಿಗೆ ಸೇರಿ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಗಾಂಧಿ ಕುಟುಂಬದ ಇತರ ಸದಸ್ಯರ ಬಗ್ಗೆ ಅವಹೇಳನಕಾರಿ ವೀಡಿಯೊವನ್ನು ರಚಿಸಿದ್ದಾರೆ. ಜೊತೆಗೆ ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನ ವೀಕ್ಷಿಸಿದ್ದು, ದೇಶದ ಹಿರಿಯ ನಾಯಕರಿಗೆ ಅಗೌರವ ತೋರಿದಂತಾಗಿದೆ" ಎಂದು ಹೇಳಲಾಗಿದೆ.

  ಕಾಂಗ್ರೆಸ್ ನಾಯಕಿ ಸಂಗೀತಾ ತಿವಾರಿ ಮತ್ತು ಪಕ್ಷದ ಪುಣೆ ನಗರ ಘಟಕದ ಪದಾಧಿಕಾರಿಗಳು ನಟಿ ಪಾಯಲ್ ರೋಹ್ಟಗಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಸಂಪರ್ಕಿಸಿದ್ದರು. ಹೀಗಾಗಿ ನಟಿಯ ವಿರುದ್ಧ ಪೊಲೀಸ್​ ಕೇಸ್ ದಾಖಲಾಗಿದೆ ಎನ್ನಲಾಗಿದೆ.

  ಇದನ್ನೂ ಓದಿ: 45 Children Die In Firozabad| ಉತ್ತರಪ್ರದೇಶದಲ್ಲಿ 45 ಮಕ್ಕಳೂ ಸೇರಿ 53 ಜನ ಸಾವು; ಶಂಕಿತ ಢೆಂಗ್ಯೂ ಸಾಧ್ಯತೆ!

  ಪ್ರಕರಣದ ಬಗ್ಗೆ ಮಾತನಾಡಿರುವ ಪುಣೆ ನಗರ ಕಾಂಗ್ರೆಸ್ ವಕ್ತಾರ ರಮೇಶ್ ಅಯ್ಯರ್, "ಪಾಯಲ್ ರೋಹ್ಟಗಿ ಅವರು ಪದೇ ಪದೇ ನೆಹರು-ಗಾಂಧಿ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇಂತಹದ್ದೇ ಒಂದು ವಿಡಿಯೋವನ್ನು ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್​ ಮಾಡಿದ್ದರು. ಆದ್ದರಿಂದ ನಾನು, ರಮೇಶ್ ಬಾಗ್ವೆ, ಮೋಹನ್ ಜೋಶಿ, ದತ್ತ ಬಹಿರತ್, ಸಂಗೀತಾ ತಿವಾರಿ ಸೇರಿದಂತೆ ಪುಣೆ ನಗರ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಸೈಬರ್ ಅಪರಾಧ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿದ್ದೆವು.

  ಈ ಪ್ರಕರಣದಲ್ಲಿ ಔಪಚಾರಿಕ ದೂರನ್ನು ನಾಯಕಿ ಸಂಗೀತ ತಿವಾರಿ ಸಲ್ಲಿಸಿದ್ದಾರೆ. ಪೊಲೀಸರು ಅದರ ಮೇಲೆ ಕ್ರಮ ಕೈಗೊಂಡಿದ್ದಾರೆ ಮತ್ತು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು ನಟಿಯ ವಿಚಾರಣೆ ನಡೆಸಿಲ್ಲ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: DK Shivakumar| '60 ವರ್ಷಗಳಲ್ಲಿ ಕಾಂಗ್ರೆಸ್​ ಏನ್ ಮಾಡ್ತು ಎಂದವರು ಇಂದು ಎಲ್ಲವನ್ನೂ ಮಾರುತ್ತಿದ್ದಾರೆ'; ಡಿಕೆ ಶಿವಕುಮಾರ್ ಕಿಡಿ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: